Select Your Language

Notifications

webdunia
webdunia
webdunia
webdunia

ಎಚ್ಚರಿಕೆ: ನೋಕಿಯಾದ ಹೊಸ ಟ್ಯಾಬ್‌‌ನ ಚಾರ್ಜರ್‌ನಿಂದ ಕರೆಂಟ್‌‌ ಹೊಡೆಯುವ ಸಾಧ್ಯತೆಗಳಿವೆ

ಎಚ್ಚರಿಕೆ: ನೋಕಿಯಾದ ಹೊಸ ಟ್ಯಾಬ್‌‌ನ ಚಾರ್ಜರ್‌ನಿಂದ ಕರೆಂಟ್‌‌ ಹೊಡೆಯುವ ಸಾಧ್ಯತೆಗಳಿವೆ
ಲಂಡನ್‌ , ಶನಿವಾರ, 19 ಏಪ್ರಿಲ್ 2014 (17:39 IST)
PR
ಮೊಬೈಲ್ ಉತ್ಪಾದನೆ ಮಾಡುವ ನೋಕಿಯಾ ಕಂಪೆನಿ ಈಗ ಅಮೆರಿಕಾ ಮತ್ತು ಯೂರೋಪ್‌‌ಗಳ ಕೆಲವು ದೇಶಗಳಲ್ಲಿ ಲೂಮಿಯಾ ಟ್ಯಾಬ್ಲೆಟ್‌‌‌ 2520 ಬಿಡುಗಡೆ ಮಾಡಿದೆ . ಆದರೆ ಬೇರೆ ಕಂಪೆನಿಯವರು ಸಿದ್ದಪಡಿಸಿದ ಈ ಬ್ಯಾಟರಿಯಲ್ಲಿ ಮಾತ್ರ ಸ್ವಲ್ಪ ತೊಂದರೆ ಇದೆ.

ನೋಕಿಯಾದ ಎಸಿ-300 ಚಾರ್ಜರ್ ಸುರಕ್ಷಿತವಾಗಿ ಇಲ್ಲ , ಇದರಿಂದ ನೋಕಿಯಾದ ಗುಣಮಟ್ಟ ಪರಿಶೀಲನಾ ವಿಭಾಗ ಚಿಂತಿತವಾಗಿದೆ. ಈ ಚಾರ್ಜರ್‌ ಇನ್ಯಾವುದೋ ಕಂಪೆನಿ ಸಿದ್ದಪಡಿಸಲಾಗಿದೆ. " ಕೆಲವು ಸಂದರ್ಭದಲ್ಲಿ ಚಾರ್ಜರ್‌ನ ಪ್ಲ್ಯಾಸ್ಟಿಕ್‌ ಕವರ್ ಲೂಸ್ ಆಗಿವೆ ಮತ್ತು ಬೇರೆ ಬೇರೆ ಆಗುತ್ತಲಿದೆ. ಮತ್ತು ಈ ತೊಂದರೆಯಿಂದ ಕರೆಂಟ್‌‌ ಹೊಡೆಯುವ ಸಾಧ್ಯತೆಗಳಿವೆ " ಎಂದು ಕಂಪೆನಿ ತಿಳಿಸಿದೆ.

ಲೂಮಿಯಾ 2520 ನೋಕಿಯಾದ ಮೊದಲ ಟ್ಯಾಬ್ಲೆಟ್‌ ಆಗಿದೆ. ಇದನ್ನು ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ. ಆದರೆ ಸದ್ಯಕ್ಕೆ ಇದನ್ನು ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

Share this Story:

Follow Webdunia kannada