ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿದಿದ್ದರೂ ದೇಶೀಯ ಚಿನಿವಾರ ಪೇಟೆಯಲ್ಲಿ ಚಿನ್ನ ಖರೀದಿ ಹೆಚ್ಚಾಗಿದ್ದರಿಂದಾಗಿ ಬೆಲೆ ಏರಿಕೆಯಾಗಿದೆ.
ಮುಂಬರುವ ತಿಂಗಳುಗಳಲ್ಲಿ ಒಂದರ ಹಿಂದೆ ಒಂದರಂತೆ ಸರದಿಯಾಗಿ ಹಬ್ಬ, ಸಮಾರಂಭಗಳು ನಡೆಯುವುದರಿಂದಾಗಿ ಚಿನ್ನಕ್ಕೆ ಸಾಕಷ್ಟು ಬೇಡಿಕೆ ಬರುವ ಲಕ್ಷಣಗಳು ಬಲವಾಗಿರುವುದರಿಂದಾಗಿ ಆಭರಣ ತಯಾರಕರು ಹೆಚ್ಚೆಚ್ಚು ಚಿನ್ನ ಖರೀದಿಸಿದ್ದರಿಂದಾಗಿ ಬೆಲೆ ಏರಿಕೆಯಾಗಿದೆ. ಆದರೆ ಬೆಳ್ಳಿ ಬೆಲೆ ಕುಸಿದಿದೆ.
ಪ್ರತೀ ಹತ್ತು ಗ್ರಾಂ. ಚಿನ್ನಕ್ಕೆ 50 ರೂಪಾಯಿ ಏರಿಕೆಯೊಂದಿಗೆ 29,285 ರೂ.ಗೆ ಚೇತರಿಕೆಯಾಗಿದ್ದರೆ, ಬೆಳ್ಳಿ ಬೆಲೆ ಪ್ರತೀ ಕೆ.ಜಿಗೆ 100 ರೂಪಾಯಿ ಕುಸಿತದೊಂದಿಗೆ 52,660 ರೂಪಾಯಿಗೆ ತಲುಪಿದೆ.
ಸ್ಪೇನ್ ಆರ್ಥಿಕ ಲಕ್ಷಣಗಳು ಪ್ರಗತಿದಾಯಕವಾಗುವ ಮುನ್ಸೂಚನೆಯಿಂದಾಗಿ ಯುರೋ ಮೌಲ್ಯ ಚೇತರಿಸುವ ಲಕ್ಷಣಗಳು ಕಂಡಿದ್ದರಿಂದ ಚಿನ್ನದ ಮೇಲಿನ ಹೂಡಿಕೆ ವಿಶ್ವಾಸ ಕೊರತೆಯುಂಟಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೆಲೆ ಕುಸಿದಿದೆ. ಆದರೂ, ದೇಶೀಯ ಗ್ರಾಹಕರು ಹೆಚ್ಚೆಚ್ಚು ಖರೀದಿಸಿದ್ದು ಆಶ್ಚರ್ಯಕರ ರೀತಿಯಲ್ಲಿ ಬೆಲೆಯೇರಿಕೆಯಾಗಿದೆ.