ಬಹುಪಯೋಗಿ ದಿನಬಳಕೆಯ ಸಾಮಗ್ರಿಗಳು, ಸೌಂಧರ್ಯವರ್ಧಕಗಳ ತಯಾರಕ ಹಿಂದೂಸ್ತಾನ್ ಯುನಿಲಿವರ್‌ನ ಆರಂಭಿಕ ತ್ರೈಮಾಸಿಕದ ನಿವ್ವಳ ಲಾಭ ಶೇಕಡಾ 112 ರಷ್ಟು ವೃದ್ದಿಸಿದೆ.
ಜೂನ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದ ಲೆಕ್ಕಪತ್ರದ ಪ್ರಕಾರ ಈ ಅವಧಿಯಲ್ಲಿ 1,331 ಕೋಟಿ ರೂಪಾಯಿ ದಾಖಲಾಗಿದೆ. ಈ ಮೊತ್ತದಲ್ಲಿ ಸುಮಾರು 607 ಕೋಟಿ ರೂಪಾಯಿ ತನ್ನ ಆಸ್ತಿ ಮಾರಾಟದಿಂದ ಬಂದಿರುವುದಾಗಿ ತಿಳಿಸಿದೆ.