Webdunia - Bharat's app for daily news and videos

Install App

ನೋಡಿ ಸ್ವಾಮಿ; ಕಾಂಡೋಮ್ ಬಳಕೆಯಲ್ಲಿ ನಮ್ಗೆ 3ನೇ ಸ್ಥಾನ!

Webdunia
ಸೋಮವಾರ, 23 ಜುಲೈ 2012 (14:15 IST)
PR
ಇತ್ತೀಚೆಗೆ ನಡೆಸಿದ ಸಮೀಕ್ಷೆ ಸಂದರ್ಭ, ಸತ್ಯ ಹೇಳುವುದಾಗಿ ಎದೆಯುಬ್ಬಿಸಿಕೊಂಡು ಬಂದ ಪುರುಷ ಪುಂಗವರು ನೋಡ್ರೀ ಸ್ವಾಮಿ, ನಾವು ಕಡೆಯ ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ನಡೆಸುವಾಗ ಕಾಂಡೋಮ್ ಬಳಸಿದ್ದೇವೆ ಎಂದು ಎದೆ ತಟ್ಟಿ ಸತ್ಯ ಹೇಳಿದ್ದಾರೆ. ವಿಶ್ವದ 37 ರಾಷ್ಟ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವ ದೇಶಗಳ ಸಾಲಿನಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಸುರಕ್ಷಿತ ಲೈಂಗಿಕತೆಗೆ ಪುರುಷರು ಅನುಸರಿಸುವ ಕ್ರಮಗಳೇನು, ಲೈಂಗಿಕ ಸಂತೃಪ್ತಿಗಾಗಿ ಏನೇನು ಕಸರತ್ತುಗಳನ್ನು ಮಾಡುತ್ತೀರಿ... ಎಷ್ಟು ಸಮಯ ಏನೇನು ಮಾಡುತ್ತೀರಿ ಎಂಬಂತ ಪ್ರಶ್ನೆಗಳನ್ನು ತಟ್ಟಂತ ಹೇಳಿ ಎಂದು ಕೇಳಲಾಗಿತ್ತು.

ಅವರಲ್ಲಿ ಶೇಕಡಾ 71 ರಷ್ಟು ಭಾರತೀಯರು ನಾವು ಕಾಂಡೋಮ್ ಬಳಸುತ್ತಿರುವುದಾಗಿ ಹೇಳಿದ್ದಾರೆ. ಹಾಂಗ್ ಕಾಂಗ್‌ನ ಮಂದಿಯಲ್ಲಿ ಶೇಕಡಾ 73 ಮಂದಿ ಹಾಗೂ ಚೀನಾದ ಶೇಕಡಾ 77 ಮಂದಿ ತಾವು ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್ ಬಳಸುತ್ತಿದ್ದೇವೆ ಎಂದಿದ್ದಾರೆ.

ಆದರೆ ಸುಖದ ಸಂತೃಪ್ತಿ ವಿಚಾರಕ್ಕೆ ಬಂದರೆ, ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರ ಲೈಂಗಿಕ ಕ್ರಿಯೆ ಸಮಯ ತುಂಬಾ ಕಡಿಮೆ ಎಂದು ತಿಳಿದುಬಂದಿದ್ದು, ಸರಾಸರಿ ಕೇವಲ 15 ನಿಮಿಷದಲ್ಲಿ ನಮ್ಮ ಕೆಲಸ ಮುಗಿಯಿತು ಎಂದು ಲೈಂಗಿಕ ಕ್ರಿಯೆಯಿಂದ ಎದ್ದುಬಿಡುವ ಜಾಯಮಾನವನ್ನು ಭಾರತೀಯರು ಬೆಳೆಸಿಕೊಂಡಿದ್ದಾರೆ.

ಇತರ ರಾಷ್ಟ್ರದ ಜನತೆ ಲೈಂಗಿಕತೆಯಿಂದ ಸುಖ ಅನುಭವಿಸುತ್ತಿದ್ದರೆ, ಭಾರತೀಯರು ಅದನ್ನೂ ಒಂದು ಕೆಲಸ ಎಂಬಂತೆ ಬೇಗ ಬೇಗ ಮುಗಿಸಿಬಿಡುತ್ತಿದ್ದಾರೆ ಎಂದು ಕಾಂಡೋಮ್ ಕಂಪನಿ ಡ್ಯುರೆಕ್ಸ್ ನಡೆಸಿರುವ ಸಮೀಕ್ಷೆಯಿಂದ ತಿಳಿದುಬಂದಿರುವುದಾಗಿ ದಿ ಸನ್ ಪತ್ರಿಕೆ ವರದಿ ಪ್ರಕಟಿಸಿದೆ.

ಇದು ಸಮೀಕ್ಷೆಯಿಂದ ಹೊರಬಂದಿರುವ ವಿಷಯ. ಸತ್ಯ ಏನೂಂತ ಯಾವುದೇ ಅಂಜಿಕೆಯಿಲ್ಲದೆ ನೀವೂ ಕೂಡ ಚರ್ಚಿಸಬಹುದು. ಜೈ!


ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ