Select Your Language

Notifications

webdunia
webdunia
webdunia
webdunia

ರೈತರ ಬೆಳೆ ನಷ್ಟಕ್ಕೆ ಕಡಿಮೆ ಪರಿಹಾರ ಆತ್ಮಹತ್ಯೆಗೆ ಪ್ರಚೋದನೆ: ಸುಪ್ರೀಂಕೋರ್ಟ್

ರೈತರ ಬೆಳೆ ನಷ್ಟಕ್ಕೆ ಕಡಿಮೆ ಪರಿಹಾರ ಆತ್ಮಹತ್ಯೆಗೆ ಪ್ರಚೋದನೆ: ಸುಪ್ರೀಂಕೋರ್ಟ್
ನವದೆಹಲಿ: , ಗುರುವಾರ, 31 ಮಾರ್ಚ್ 2016 (17:27 IST)
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಕಡಿಮೆ ಪರಿಹಾರ ಕೊಡುತ್ತಿರುವುದು ಕೆಲವರು ಆತ್ಮಹತ್ಯೆಗೆ ಶರಣಾಗಲು ದಾರಿ ಕಲ್ಪಿಸಿದೆ ಎಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.

 ಇದು ವಾಸ್ತವ. ಇದನ್ನು ಸರಿಪಡಿಸಬೇಕಿದೆ. ಇದು ಒಂದು ಸರ್ಕಾರ ಅಥವಾ ಇನ್ನೊಂದು ಸರ್ಕಾರದ ವಿರುದ್ಧವಲ್ಲ. ಕೇಂದ್ರ ಸರ್ಕಾರ ನಾವು ಸದಾ ಒಳ್ಳೆಯ ಕೆಲಸ ಮಾಡುತ್ತೇವೆಂದು ಹೇಳುತ್ತಾರೆ. ಆದರೆ ಕೆಲವರು  ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ನ್ಯಾಯಮೂರ್ತಿ ಎಂ.ಬಿ.ಲೋಕುರ್ ನೇತೃತ್ವದ ಪೀಠ ತಿಳಿಸಿದೆ.
 
ಎನ್.ವಿ. ರಮಣ ಅವರನ್ನು ಕೂಡ ಒಳಗೊಂಡ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನೈಸರ್ಗಿಕ ವಿಕೋಪಕ್ಕೆ ಗುರಿಯಾದ ಪ್ರದೇಶಗಳಿಗೆ ತುರ್ತು ಮಾರ್ಗದರ್ಶಕಗಳನ್ನು ಅನುಷ್ಠಾನ ಮಾಡುವಂತೆ ಕೋರುವ ವಿಚಾರಣೆಯಲ್ಲಿ ಬರಪೀಡಿತ ರೈತರಿಗೆ ಪರಿಹಾರದ ವಿವಿಧ ಅಂಶಗಳನ್ನು ಪರಿಶೀಲಿಸುತ್ತಿದ್ದಾಗ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು. 
 

Share this Story:

Follow Webdunia kannada