Select Your Language

Notifications

webdunia
webdunia
webdunia
webdunia

ಸಂಸದ ಧನಂಜಯ್ ವಿರುದ್ಧ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ಪಟ್ಟಿ ದಾಖಲು

ಸಂಸದ ಧನಂಜಯ್ ವಿರುದ್ಧ ನ್ಯಾಯಾಲಯದಲ್ಲಿ ಅತ್ಯಾಚಾರ ಆರೋಪ ಪಟ್ಟಿ ದಾಖಲು
ನವದೆಹಲಿ , ಶುಕ್ರವಾರ, 31 ಜನವರಿ 2014 (18:33 IST)
PTI
42 ವರ್ಷದ ರೈಲ್ವೆ ಮಹಿಳಾ ಉದ್ಯೋಗಿಯನ್ನು ಸುಮಾರು ನಾಲ್ಕು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಿಎಸ್‌ಪಿ ಸಂಸದ ಧನಂಜಯ್ ಸಿಂಗ್ ವಿರುದ್ಧ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಿದ್ದಾರೆ.

ಉತ್ತರಪ್ರದೇಶದ ಜೌವುನ್‌ಪುರ್ ಲೋಕಸಭೆ ಕ್ಷೇತ್ರದ ಸಂಸದ ಸಿಂಗ್ ಅವರ ಪತ್ನಿ ಜಾಗೃತಿ ಮನೆಗೆಲಸದಾಳಿನ ಹತ್ಯೆ ಆರೋಪದ ಮೇಲೆ ಪೊಲೀಸರು ಬಂಧಿಸಿದ ನಂತರ ಇದೀಗ ಅತ್ಯಾಚಾರಕ್ಕೊಳಗಾದ ಮಹಿಳೆ ಮತ್ತೊಂದು ಪ್ರಕರಣ ದಾಖಲಿಸಿದ್ದಾಳೆ.

ಸಂಸದ ಧನಂಜಯ್ ಸಿಂಗ್ ವಿರುದ್ದ ಅತ್ಯಾಚಾರ, ಅಪರಾಧ, ಅನೈಸರ್ಗಿಕ ಲೈಂಗಿಕ ಕಿರುಕುಳ ಸೇರಿದಂತೆ ಇತರ ಸೆಕ್ಷನ್‌ಗಳನ್ನು ಪೊಲೀಸರು ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ಆರೋಪ ಪಟ್ಟಿಯಲ್ಲಿ ಆರೋಪಿ ಸಂಸದ ಧನಂಜಯ್ ಸಿಂಗ್ ಹಲವಾರು ಬಾರಿ ರಿವಾಲ್ವರ್‌ ತೋರಿಸಿ ಕಳೆದ 2005ರಿಂದ 2009ರವರೆಗೆ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರವೆಸಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ದಾಖಲಿಸಲಾಗಿದೆ.

Share this Story:

Follow Webdunia kannada