Webdunia - Bharat's app for daily news and videos

Install App

ಸೋನಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಶಾಝಿಯಾ ಇಲ್ಮಿ

Webdunia
ಶುಕ್ರವಾರ, 14 ಮಾರ್ಚ್ 2014 (17:12 IST)
PR
ಇಂದು ಆಮ್ ಆದ್ಮಿ ಪಕ್ಷ 61 ಅಭ್ಯರ್ಥಿಗಳ ಹೆಸರುಳ್ಳ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಇನ್ಫೋಸಿಸ್‌ನ ಪೂರ್ವ ಸಿಎಫ್ಓವಿ ಬಾಲಕೃಷ್ಣನ್ ಬೆಂಗಳೂರು ಮಧ್ಯ ಕ್ಷೇತ್ರದಿಂದ ಮತ್ತು ಪತ್ರಕರ್ತ ಆಶಿಶ್ ಖೇತಾನ್ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಸೋನಿಯಾ ಗಾಂಧಿ ಕಣಕ್ಕಿಳಿಯುವ ರಾಯ್ ಬರೇಲಿ ಕ್ಷೇತ್ರದಿಂದ ಆಪ್ ನಾಯಕಿ ಮತ್ತು ಪಕ್ಷದ ವಕ್ತಾರೆ ಶಾಝಿಯಾ ಇಲ್ಮಿ ಸ್ಪರ್ಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ" ನನ್ನ ಮುಂದೆ ಅನೇಕ ಆಯ್ಕೆಗಳಿವೆ " ಎಂದು ಇಲ್ಮಿ ಹೇಳಿದ್ದಾರೆ.

ಆದರೆ ಪಕ್ಷದವರು ಈ ಸುದ್ದಿಯನ್ನು ಖಚಿತಪಡಿಸಿಲ್ಲ. ನಾವು ತಮ್ಮ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿಲ್ಲ ಎಂದು ಪಕ್ಷದ ವಕ್ತಾರ ದಿಲೀಪ್ ಪಾಂಡೆ ಹೇಳಿದ್ದಾರೆ

ಪಕ್ಷದ ಪ್ರಮುಖ ನಾಯಕಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶಾಝಿಯಾ ಇಲ್ಮಿ ಕಳೆದ ವರ್ಷ ಆರ್‌ಕೆ. ಪುರಂ ಪ್ರದೇಶದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿ ಅತಿ ಕಡಿಮೆ ಅಂತರದಿಂದ ಸೋತಿದ್ದರು.

ಸೂತ್ರಗಳ ಪ್ರಕಾರ ಸೋನಿಯಾ ಗಾಂಧಿಯ ವಿರುದ್ಧದ ಕದನಕ್ಕೆ ತುಂಬ ಜನಪ್ರಿಯ ಮುಖವನ್ನು ಹುಡುಕಲಾಗುತ್ತಿದೆ. "ದಿಲ್ಲಿಯಲ್ಲಿ ಗೆಲವನ್ನು ಸಾಧಿಸುವುದು ನಮಗೇನೂ ಕಷ್ಟಕರವಲ್ಲ. ಏಕೆಂದರೆ ಇಲ್ಲಿ ನಮಗೆ ಸಮರ್ಥಕರಿದ್ದಾರೆ. ಆದರೆ ಸೋನಿಯಾಗಾಂಧಿಯಂತಹ ಬಲಿಷ್ಠ ವ್ಯಕ್ತಿಯ ವಿರುದ್ಧ ನಮಗೆ ಘಟಾನುಘಟಿ ಮುಖವೇ ಬೇಕು "ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments