Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ ಪ್ರಚಾರ ವೆಚ್ಚದ ಮಿತಿ 40 ಲಕ್ಷ ರೂ.

ಲೋಕಸಭೆ ಚುನಾವಣೆ ಪ್ರಚಾರ ವೆಚ್ಚದ ಮಿತಿ 40 ಲಕ್ಷ ರೂ.
, ಶುಕ್ರವಾರ, 14 ಮಾರ್ಚ್ 2014 (15:34 IST)
PR
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು 40 ಲಕ್ಷ ರೂ.ವರೆಗೆ ಮಾತ್ರ ವೆಚ್ಚ ಮಾಡಲು ಸಾಧ್ಯವಿದೆ. ಹಿಂದಿನ ಚುನಾವಣೆ ವೆಚ್ಚದ ಮಿತಿಗಿಂತ ಇದು 15 ಲಕ್ಷ ರೂ. ಹೆಚ್ಚಿಗೆಯಾಗಿದೆ.2011ರಲ್ಲಿ ಈ ಹೆಚ್ಚಳ ಮಾಡಲಾಗಿದ್ದು, ಲೋಕಸಭೆ ಉಪಚುನಾವಣೆಗಳಲ್ಲಿ ಜಾರಿಯಾಗಿತ್ತು. ಆದರೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮೊದಲ ಬಾರಿಗೆ ಜಾರಿಗೆ ಬರುತ್ತಿದೆ ಎಂದು ಪಶ್ಚಿಮ ಬಂಗಾಳದ ಜಂಟಿ ಮುಖ್ಯ ಚುನಾವಣಾಧಿಕಾರಿ ಸೈಬಾಲ್ ಬರ್ಮಾನ್ ತಿಳಿಸಿದರು.

2009ರಲ್ಲಿ ಪ್ರಚಾರ ಉದ್ದೇಶಕ್ಕೆ ಗರಿಷ್ಠ 25 ಲಕ್ಷವನ್ನು ವೆಚ್ಚ ಮಾಡಲು ಅವಕಾಶ ನೀಡಲಾಗಿತ್ತು. ಆದಾಗ್ಯೂ, ಭಿನ್ನ ರಾಜಕೀಯ ಪಕ್ಷಗಳು ಚುನಾವಣೆ ವೆಚ್ಚದ ಮಿತಿಯನ್ನು ಮತ್ತಷ್ಟು ಏರಿಸಬೇಕೆಂದು ಒತ್ತಾಯಿಸುತ್ತಿವೆ.

Share this Story:

Follow Webdunia kannada