Select Your Language

Notifications

webdunia
webdunia
webdunia
webdunia

ಹಾಲಿವುಡ್‌ಗಿಂತ ಬಾಲಿವುಡ್‌ನಲ್ಲಿ ಮಹಿಳಾ ನಿರ್ದೇಶಕರ ಹೆಚ್ಚಳ

ಹಾಲಿವುಡ್‌ಗಿಂತ ಬಾಲಿವುಡ್‌ನಲ್ಲಿ ಮಹಿಳಾ ನಿರ್ದೇಶಕರ ಹೆಚ್ಚಳ
ಹಾಲಿವುಡ್‌ಗಿಂತ ಬಾಲಿವುಡ್‌ನಲ್ಲಿ ಹೆಚ್ಚಿನ ಮಹಿಳಾ ನಿರ್ದೇಶಕರಿದ್ದು ಅವರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ.ಹೊಸದಾಗಿ ನಟಿ ಸುಶ್ಮಿತಾ ಸೇನ್, ಫರ್ಹಾಖಾನ್ ಸಹೋದರಿ ಝೋಯಾ ಅಖ್ತರ್, ನಟಶಹೀದ್ ಕಪೂರ್ ತಾಯಿ ನೀಲಿಮಾ ಅಜ್ಮಿ ಅವರುಗಳು ಸೇರ್ಪಡೆಯಾಗಿದ್ದು ತಮ್ಮ ಪ್ರಥಮ ಚಿತ್ರೀಕರಣವನ್ನು ಆರಂಭಿಸಿದ್ದಾರೆ.

ಪುರುಷ ಪ್ರಧಾನವಾದ ನಿರ್ದೇಶಕರ ಸ್ಥಾನಕ್ಕೆ ಲಗ್ಗೆ ಹಾಕಲು ಮಹಿಳೆಯರಿಗೆ ಮೂಲವಾಗಿ ಮಾನಸಿಕ ಸಮಸ್ಯೆ ಎದುರಾಗುತ್ತಿತ್ತು. ಕಲ್ಪನೆಗಳನ್ನು ಜಾರಿಗೆ ತರಲು ಸಂಪೂರ್ಣ ಅನುಭವ ಮಾಹಿತಿಯ ಅಗತ್ಯವಿತ್ತು. ಬಾಲಿವುಡ್‌ನಲ್ಲಿ ಮಹಿಳೆಯರೆಂದರೆ ಅಲಂಕೃತ ಗೊಂಬೆಗಳು ಎನ್ನುವ ಅನಿಸಿಕೆಯಿತ್ತು. ಅದನ್ನು ಹಿಂದಕ್ಕೆ ತಳ್ಳಿ ಮುಂದೆ ಬರಲು ಸಮಯ ಬೇಕಾಯಿತು ಎಂದು ನಿರ್ದೇಶಕಿ ನೀಲಿಮಾ ಅಜ್ಮಿ ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್ ಚಿತ್ರರಂಗದಲ್ಲಿ ಸಾಯಿಪರಾಂಜಪೆ, ಅಪರ್ಣಾ ಸೇನ್ ಕಲ್ಪನಾ ಲಾಜ್ಮಿ,ತನುಜಾ ಚಂದ್ರಾ ಮತ್ತು ಫರಾ ಖಾನ್ ಅವರುಗಳು ತಮ್ಮ ಚಿತ್ರಗಳ ನಿರ್ದೇಶನದಿಂದ ಬಾಲಿವುಡ್‌ನಲ್ಲಿ ಉತ್ತಮ ಖ್ಯಾತಿಯನ್ನು ಹೊಂದಿದ್ದಾರೆ. ನಟಿ ಸುಶ್ಮಿತಾ ಸೇನ್ ತಮ್ಮ ಕನಸಿನ ಯೋಜನೆಯಾದ ಝಾಂಸಿ ಕೀ ರಾಣಿ ಚಿತ್ರವನ್ನು ನಿರ್ಮಿಸಲು ಕಾಲವಕಾಶ ಬೇಕಾಯಿತು.

ಕೇವಲ 150 ವರ್ಷಗಳ ಹಿಂದೆ ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿ ಹೋರಾಡಿದವರ ಸ್ಮರಣೆಯನ್ನು ನಾವುಗಳು ಮರೆತಿದ್ದು ಅದನ್ನು ಪ್ರೇಕ್ಷಕರ ಮುಂದಿಡುವುದು ಅಗತ್ಯವೆನಿಸಿದ ಹಿನ್ನೆಲೆಯಲ್ಲಿ ಝಾಂಸಿ ಕೀ ರಾಣಿ ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ ಎಂದು ಸೇನ್ ತಿಳಿಸಿದ್ದಾರೆ.

ಬಾಲಿವುಡ್‌ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರು ಮಹಿಳಾ ಪ್ರಧಾನವಾದ ಚಿತ್ರವನ್ನು ಮಾತ್ರ ನಿರ್ಮಿಸದೇ ಪುರುಷರು ಯೋಚಿಸುವಂತಹ ಚಿತ್ರಗಳನ್ನು ನಿರ್ಮಿಸಿದ್ದಾರೆ ಎಂದು ನೀಲಿಮಾ ಅಜ್ಮಿ ಹೇಳಿದ್ದಾರೆ.

Share this Story:

Follow Webdunia kannada