Select Your Language

Notifications

webdunia
webdunia
webdunia
webdunia

ಸ್ಮರಣ ಸಾಮರ್ಥ್ಯದಲ್ಲಿ ಮಹಿಳೆಯರೇ ಮುಂದು....

ಸ್ಮರಣ ಸಾಮರ್ಥ್ಯದಲ್ಲಿ ಮಹಿಳೆಯರೇ ಮುಂದು....
PTI
ಇವರಿಗೋ... ಸಿಕ್ಕಾಪಟ್ಟೆ ಮರೆವು... ಪರ್ಸ್ ಎಲ್ಲಿಟ್ಟಿದ್ದೇನೆಂದು ಮರೆತು ಬಿಟ್ಟು ರೇಗಾಡುತ್ತಾರೆ... ಹೋಗುವಾಗ ಕಾರಿನ ಕೀ ಮರೆತುಬಿಟ್ಟು ಹೊರಗಿನಿಂದಲೇ ಕೂಗುತ್ತಾರೆ, ಇಷ್ಟು ಗಂಟೆಗೆ ಪಾರ್ಟಿಗೆ ಹೋಗೋಣ ಅಂತ ಹೇಳಿದ ಸಮಯಕ್ಕೆ ಬರುವಂತೆ ಮಾಡಬೇಕಿದ್ರೆ, ಪದೇ ಪದೇ ನೆನಪಿಸಬೇಕಾಗುತ್ತದೆ... ಅದೆಲ್ಲಾ ಇರ್ಲಿ... ನನ್ನ ಬರ್ತ್ ಡೇ ಕೂಡ ಅವರಿಗೆ ನೆನಪಿರೋಲ್ಲ... ಅಬ್ಬಬ್ಬಾ... ಎಂಥಾ ಮರೆವು...

ಈ ರೀತಿ ಗೊಣಗುವ ಅದೆಷ್ಟೋ ಮಹಿಳೆಯರನ್ನು ನಾವು ಅಲ್ಲಿ ಇಲ್ಲಿ ನೋಡುತ್ತೇವೆ, ಇಂಥವರ ಬಗ್ಗೆ ಕೇಳುತ್ತೇವೆ. ಹಾಗಿದ್ದರೆ ಮಹಿಳೆಯರೂ ಈ ರೀತಿ ಮಾಡುವುದಿಲ್ಲವೇ? ಪುರುಷರಿಗೆ ಹೋಲಿಸಿದಲ್ಲಿ, ಮಹಿಳೆಯರ ಸ್ಮರಣ ಶಕ್ತಿ ಹೆಚ್ಚು... ಸ್ವಾನುಭವದಿಂದ ಬಂದಿರೋ ಈ ನೆನಪಿನ ಶಕ್ತಿ ದೀರ್ಘಕಾಲಿಕವಾಗಿರುತ್ತದೆ.

ಇತ್ತೀಚೆಗೆ ನಡೆಸಿದ ಅಧ್ಯಯನವೊಂದು ಈ ಮಾತನ್ನು ಪುಷ್ಟೀಕರಿಸುತ್ತದೆ. ಸ್ತ್ರೀಯರಲ್ಲಿ ಯಾವುದೇ ಒಂದು ಘಟನೆಗೆ ಸಂಬಂಧಿಸಿದ ಮಾತು, ಅಂದರೆ ಪ್ರಾಸಂಗಿಕ ಭಾಷೆ ಅತ್ಯಂತ ಹೆಚ್ಚಾಗಿ ನೆನಪಿನಲ್ಲುಳಿಯುತ್ತದಂತೆ. ಶಬ್ದಗಳನ್ನು, ವಸ್ತುಗಳನ್ನು, ಚಿತ್ರಗಳನ್ನು ಅಥವಾ ದೈನಂದಿನ ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅವರೇ ಹೆಚ್ಚು. ಆದರೆ ಪುರುಷರೂ ಮೇಲುಗೈ ಸಾಧಿಸುತ್ತಾರೆ. ಯಾವುದರಲ್ಲೆಂದರೆ, ಸಂಕೇತಗಳಂತಹ, ಭಾಷೆಗೆ ಸಂಬಂಧಿಸದ ಮಾಹಿತಿಯ ಸ್ಮರಣ ಶಕ್ತಿ, ಉದಾಹರಣೆಗೆ ಯಾವುದೋ ಬೆಂಗಾಡಿನಲ್ಲಿ ಕಳೆದುಹೋದರೆ, ಅದರಿಂದ ಹೊರಬಂದ ಮಾರ್ಗವನ್ನು ನೆನಪಿನಲ್ಲಿಟ್ಟುಕೊಳ್ಳುವಂತಹ ಸ್ಮರಣಶಕ್ತಿ ಪುರುಷರಲ್ಲಿ ಹೆಚ್ಚೆಂಬುದು ಈ ಅಧ್ಯಯನದಿಂದ ದೃಢಪಟ್ಟಿದೆ. ಅಂದರೆ ಸ್ಮರಣೆ ಶಕ್ತಿಗೆ ಸಂಬಂಧಿಸಿ, ಮಹಿಳೆಯರಲ್ಲಿ ಭಾಷೆಗೆ ಆದ್ಯತೆಯಿದ್ದರೆ, ಪುರುಷರದು ಭಾವಕ್ಕೆ ಆದ್ಯತೆ ಎನ್ನೋಣವೆ?

ಆದರೆ, ಪ್ರಾಸಂಗಿಕ-ಸಾಂಕೇತಿಕ ಸ್ಮರಣೆಗಳೆರಡನ್ನೂ ಒಟ್ಟಾಗಿಸಿ ನೋಡಿದರೆ, ಮಹಿಳೆಯರೇ ಇದರಲ್ಲಿ ಮೇಲುಗೈ ಸಾಧಿಸುತ್ತಾರೆ. ಅವರ ವಾಸನಾಗ್ರಹಣ ಶಕ್ತಿ ಕೂಡ ಪುರುಷರಿಗಿಂತ ಹೆಚ್ಚೇ.

ಕರೆಂಟ್ ಡೈರೆಕ್ಷನ್ಸ್ ಇನ್ ಸೈಕಲಾಜಿಕಲ್ ಸೈನ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿರುವ 'ಸೆಕ್ಸ್ ಡಿಫರೆನ್ಸಸ್ ಇನ್ ಎಪಿಸೋಡಿಕ್ ಮೆಮರಿ' ಎಂಬ ಅಧ್ಯಯನ ವರದಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ. ಅದರ ಪ್ರಕಾರ, ಪುರುಷರು ಮತ್ತು ಸ್ತ್ರೀಯರ ಸ್ಮರಣ ಸಾಮರ್ಥ್ಯದ ಗುಣಮಟ್ಟದಲ್ಲಿನ ವಂಶವಾಹಿಗಳ ಆಧಾರಿತ ಸಂಭಾವ್ಯತೆಯು ಅಜ್ಞಾತವಾಗಿದ್ದರೂ, ಪ್ರಾಸಂಗಿಕ ಸ್ಮರಣೆಯಲ್ಲಿ ಸ್ತ್ರೀಯರು ಮೇಲುಗೈ ಸಾಧಿಸಿರುವುದಂತೂ ಈ ಅಧ್ಯಯನದಿಂದ ಸ್ಪಷ್ಟವಾಗಿದೆ.

Share this Story:

Follow Webdunia kannada