Select Your Language

Notifications

webdunia
webdunia
webdunia
webdunia

ಬಿಜೆಪಿಯಿಂದ 2ನೇ ಪಟ್ಟಿ ಬಿಡುಗಡೆ: ಭುಗಿಲೆದ್ದ ಭಿನ್ನಮತ

ಬಿಜೆಪಿಯಿಂದ 2ನೇ ಪಟ್ಟಿ ಬಿಡುಗಡೆ: ಭುಗಿಲೆದ್ದ ಭಿನ್ನಮತ
ಬೆಂಗಳೂರು , ಸೋಮವಾರ, 14 ಏಪ್ರಿಲ್ 2008 (09:56 IST)
ಪ್ರಮೀಳಾ ನೇಸರ್ಗಿ ಸಹಿತ ಐವರು ಮಹಿಳೆಯರಿರುವ, ಭಾರತೀಯ ಜನತಾ ಪಕ್ಷದ 35 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಭಾನುವಾರ ರಾತ್ರಿ ಬಿಡುಗಡೆ ಮಾಡಲಾಗಿದ್ದು, ಭಿನ್ನಮತದ ಧ್ವನಿ ಭುಗಿಲೆದ್ದಿದೆ.

ಹಾಲಿ ಮೂವರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ, ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರೊಂದಿಗೆ ನಿನ್ನೆ ರಾತ್ರಿ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಚುನಾವಣಾ ಸಮಿತಿಗೆ ಸಲ್ಲಿಸಿದೆ.

ಅರಸೀಕೆರೆಯ ಹಾಲಿ ಶಾಸಕ ಎ.ಎಸ್. ಬಸವರಾಜು, ಸಿಂಧಗಿಯ ಹಾಲಿ ಶಾಸಕ ಅಶೋಕ್ ಶಹಬಾದಿ ಹಾಗೂ ಕನಕಗಿರಿಯ ಹಾಲಿ ಶಾಸಕ ಜಿ. ವೀರಪ್ಪ ಅವರುಗಳು ಟಿಕೆಟ್ ವಂಚಿತರಾಗಿದ್ದಾರೆ. ಆದರೆ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪ್ರೊ. ಮೈಲಾರಪ್ಪನವರಿಗೆ ಟಿಕೆಟ್ ನೀಡಿರುವುದು ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನ ತಂದಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇ ತಡ, ಪಕ್ಷದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಬಂಡಾಯದ ಬಿಸಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಧರಿಸಿದ್ದು, ಕೊನೆಯ ಕ್ಷಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇತ್ತೀಚೆಗೆ ಸೇರ್ಪಡೆಗೊಂಡವರಿಗೆ ಹೆಚ್ಚಿನ ಆದ್ಯತೆಯಿಂದ ಟಿಕೆಟ್ ನೀಡಿದ್ದೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

Share this Story:

Follow Webdunia kannada