Select Your Language

Notifications

webdunia
webdunia
webdunia
webdunia

ಬಿಜೆಪಿಯೊಳಗೆ ಬಂಡಾಯವಿಲ್ಲ: ಡಿವಿಎಸ್

ಬಿಜೆಪಿಯೊಳಗೆ ಬಂಡಾಯವಿಲ್ಲ: ಡಿವಿಎಸ್
ಚುನಾವಣಾ ಟಿಕೆಟ್ ಹಂಚಿಕೆ ವಿಚಾರದಿಂದಾಗಿ ಬಿಜೆಪಿಯಲ್ಲಿ ಬಂಡಾಯ ಎದ್ದಿದೆ ಎಂಬುದನ್ನು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ತಳ್ಳಿಹಾಕಿದ್ದಾರೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ಪಕ್ಷಕ್ಕೆ ಹೊಸದಾಗಿ ಸೇರಿದವರು ಹಾಗೂ ಹಣದ ಥೈಲಿ ಹೊತ್ತುಬಂದವರಿಗೆ ಚುನಾವಣಾ ಟಿಕೆಟ್ ನೀಡಲಾಗಿದೆ ಎಂಬ ಆಪಾದನೆ ಕೇಳಿಬಂದಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈಗಾಗಲೇ ಬಿಡುಗಡೆ ಮಾಡಲಾಗಿರುವ 136 ಅಭ್ಯರ್ಥಿಗಳ ಪಟ್ಟಯಲ್ಲಿ 7-8 ಅಭ್ಯರ್ಥಿಗಳಿಗೆ ಸಂಬಂಧಿಸಿ ಸ್ವಲ್ಪಮಟ್ಟಿನ ಗೊಂದಲವಿರಬಹುದು. ಎಲ್ಲ ರಾಜಕೀಯ ಪಕ್ಷಗಳಲ್ಲೂ ಇದು ಸಹಜವೇ. ಆದರೆ ಇದನ್ನೆಲ್ಲಾ ಮೀರಿ ಚುನಾವಣೆಯಲ್ಲಿ ಮುನ್ನುಗ್ಗುವ ಪಡೆ ನಮ್ಮಲ್ಲಿದೆ. ಹೀಗಾಗಿ ಚುನಾವಣೆಗೆ ಈಗಲೇ ಚಾಲನೆ ಸಿಕ್ಕಂತಾಗಿದೆ ಎಂದು ಪ್ರತಿಕ್ರಿಯಿಸಿದರು.

ತುಮಕೂರಿನ ಸಂಸದ ಮಲ್ಲಿಕಾರ್ಜುನಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ತಳೆದಿರುವ ನಿರ್ಧಾರದ ಬಗೆಗೆ ಪ್ರತಿಕ್ರಿಯಿಸುತ್ತಾ, ಮಲ್ಲಿಕಾರ್ಜುನಯ್ಯನವರು ಜನಸಂಘದ ಕಾಲದಿಂದಲೂ ಪಕ್ಷಕ್ಕೆ ದುಡಿಯುತ್ತಾ ಬಂದಿದ್ದಾರೆ. ಪಕ್ಷಕ್ಕೆ ಅವರೊಂದು ಆಸ್ತಿ ಎಂದು ಸದಾನಂದ ಗೌಡ ನುಡಿದರು.

ಕ್ಷೇತ್ರ ಮರುವಿಂಗಡಣೆಯ ಕಾರಣದಿಂದಾಗಿ ಕೆಲವರಿಗೆ ಟಿಕೆಟ್ ಸಿಕ್ಕಿಲ್ಲ. ನೀರೀಕ್ಷೆ ಇಟ್ಟುಕೊಂಡಿದ್ದವರಿಗಿಂತ ಸಮರ್ಥ ಅಭ್ಯರ್ಥಿಗಳು ಸಿಕ್ಕ ಸಂದರ್ಭಗಳಲ್ಲಿ ಸಮರ್ಥರಿಗಷ್ಟೇ ಮಣೆ ಹಾಕಲಾಗಿದೆ. ಹೀಗಾಗಿ ಟಿಕೆಟ್ ವಂಚಿತೆ ಶಕುಂತಲಾ ಶೆಟ್ಟಿಯವರೂ ಸೇರಿದಂತೆ ಯಾರದೂ ಬಂಡಾಯವಲ್ಲ ಎಂದು ಸದಾನಂದ ಗೌಡ ಸ್ಪಷ್ಟಪಡಿಸಿ ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.





Share this Story:

Follow Webdunia kannada