Select Your Language

Notifications

webdunia
webdunia
webdunia
webdunia

ಮೈಸೂರು: ಬೆಂಕಿ -ಸಿದ್ದು ಕಣದಲ್ಲಿ?

ಮೈಸೂರು: ಬೆಂಕಿ -ಸಿದ್ದು ಕಣದಲ್ಲಿ?
NRB
ಬಹಳ ಕುತೂಹಲ ಕೆರಳಿಸಿರುವ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಸ್ಪಷ್ಟ ಬಹುಮತ ಸಿಗಲಿದೆ ಎಂದು ಘೋಷಿಸಿದರೂ, ಒಳಗೊಳಗೆ ಆತಂಕವೇ. ಅದರಲ್ಲೂ ಮೈಸೂರು ಕ್ಷೇತ್ರ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತು ಇನ್ನು ನಿಶ್ಚಯವಾಗಿಲ್ಲ. ಆದರೆ ಬಿಜೆಪಿ ಆಗಲೇ ಎದುರಾಳಿಯನ್ನು ಸಿದ್ಧಪಡಿಸಿದೆ. ಕಾಂಗ್ರೆಸ್ನಲ್ಲಿ ಮೂಲ ಹಾಗೂ ವಲಸಿಗರ ಭಿನ್ನಾಭಿಪ್ರಾಯದಲ್ಲಿ ಸಿದ್ದು ಜೊತೆ ಕೈ ಕೈ ಮಿಸಲಾಯಿಸಿದ್ದ ಬೆಂಕಿ ಮಹದೇವ್ ಈಗ ಬಿಜೆಪಿ ಅಭ್ಯರ್ಥಿ.

ಸಿದ್ದರಾಮಯ್ಯ ಹಾಗೂ ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಬಹಿರಂಗ ಕಿಡಿ ಹೊತ್ತಿಸಿದ್ದ ಬೆಂಕಿ ಮಹದೇವ್ ಅವರನ್ನು ಪರಿಸ್ಥಿತಿಯ ಲಾಭಕ್ಕಾಗಿ ಬಿಜೆಪಿ ಸಿದ್ದು ಎದುರೇ ಕಣಕ್ಕಿಳಿಸಲು ತೀರ್ಮಾನಿಸಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ನಾಯಕರ ಕೊರತೆ ಹಿಂದಿನಿಂದಲೂ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಮುಖಂಡರಾಗಿದ್ದ ಮಾಜಿ ಸಚಿವ ಜಿ.ಟಿ. ದೇವೇಗೌಡರನ್ನು ಈ ಹಿಂದೆ ತನ್ನ ತೆಕ್ಕೆಗೆ ಹಾಕಿಕೊಂಡ ಬಿಜೆಪಿ, ಈಗ ವೀರಶೈವ ಮುಖಂಡರೂ ಆದ ಮಹದೇವ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡಿದೆ.

ಈ ಮೂಲಕ ಮೈಸೂರು ಪ್ರಾಂತ್ಯದಲ್ಲಿನ ಪ್ರಭಾವಿ ವ್ಯಕ್ತಿಗಳನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡ ಬಳಿಕ ಬಿಜೆಪಿ ಪಾಳಯದಲ್ಲಿ ಬಿರುಸಿನ ಚುನಾವಣಾ ಚಟುವಟಿಕೆ ಪ್ರಾರಂಭಗೊಂಡಿದೆ. ಕಳೆದ ಬಾರಿ ಜೆಡಿಎಸ್ ಎದುರು ಸಿದ್ದು ಕಡಿಮೆ ಅಂತರದಿಂದ ಜಯಗಳಿಸಿದ್ದು, ಬಿಜೆಪಿಗೆ ಪ್ಲಸ್ ಪಾಯಿಂಟ್.

Share this Story:

Follow Webdunia kannada