Select Your Language

Notifications

webdunia
webdunia
webdunia
webdunia

ಹೊಸ ವರ್ಷಕ್ಕೆ ತೂಕ ಕಳೆದುಕೊಳ್ಳುವ ಸಂಕಲ್ಪ ಮಾಡಿ!

ಹೊಸ ವರ್ಷಕ್ಕೆ ತೂಕ ಕಳೆದುಕೊಳ್ಳುವ ಸಂಕಲ್ಪ ಮಾಡಿ!
PTI
ಹೊಸ ವರ್ಷಕ್ಕೆ ತೂಕ ಕಳೆದುಕೊಳ್ಳುವ ಸಂಕಲ್ಪ ಮಾಡಲು ಯೋಚಿಸಿದ್ದೀರಾ? ಖಂಡಿತಾ ಮಾಡಿ. ಹೆಚ್ಚೇನೂ ಕಷ್ಟಪಡಬೇಕಿಲ್ಲ. ಸುಮ್ಮನೇ ನಿಂತು ಬಿಡಿ!

ನೇರವಾಗಿ ನಿಲ್ಲುವ ಪ್ರಯತ್ನವು ಕಾಡುವ ಆ ಹೆಚ್ಚುವರಿ ಕ್ಯಾಲೊರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತದೆ ಹೊಸದೊಂದು ಅಧ್ಯಯನ.

ಬೆವರು ಸುರಿಸಿ ಶ್ರಮ ಪಡುವ ಜಿಮ್‌ಗೆ ಹೋಗುವುದನ್ನು ಯೋಚಿಸಿಯೇ ಬೆವರುವ ಮಾತ್ರವಲ್ಲ, ಕಷ್ಟಪಟ್ಟು ವ್ಯಾಯಾಮ ಮಾಡುತ್ತಾ ಆಗಾಗ್ಗೆ ತೂಕ ಪರೀಕ್ಷಿಸುವ ಸ್ಥೂಲ ದೇಹಿಗಳಿಗೆ ಇದೊಂದು ಆಪ್ಯಾಯಮಾನ ಸುದ್ದಿ.

ಫೋನಿನಲ್ಲಿ ಮಾತನಾಡುವಾಗ ನಿಂತು ನಡೆದಾಡುವುದು ಅಥವಾ ಟಿವಿ ನೋಡುತ್ತಿರುವಾಗ ನಿಮ್ಮ ಮನೆಯ ಕಪಾಟುಗಳನ್ನು ಒಪ್ಪವಾಗುಸುವುದು ಮುಂತಾದ ಸಣ್ಣಪುಟ್ಟ ಚಟುವಟಿಕೆಗಳು ಕೂಡ ನಿಮ್ಮ ದೇಹವನ್ನು ಫಿಟ್ ಆಗಿಡಬಲ್ಲುದು ಎನ್ನುತ್ತಾರೆ ಸಂಶೋಧಕರು.

ನೀವು ನೇರವಾಗಿ ನಿಂತರೆ, ಆನಂತರ ಅತ್ತಿತ್ತ ನಡೆದಾಡುವುದು ತನ್ನಿಂತಾನಾಗಿಯೇ ಆಗಿಬಿಡುತ್ತದೆ. ಒಂದಷ್ಟು ಹೊತ್ತ ಆಚೀಚೆ ನಡೆದಾಡಿರಿ. ಖಂಡಿತವಾಗಿಯೂ ಇದು ಬಹಳ ಉಪಕಾರಿಯಾಗಬಲ್ಲುದು ಎನ್ನುತ್ತಾರೆ ಮಿಸ್ಸೋರಿ ಯುನಿವರ್ಸಿಟಿಯ ಪ್ರೊಫೆಸರ್ ಮಾರ್ಕ್ ಹ್ಯಾಮಿಲ್ಟನ್.

ಒಬ್ಬ ವ್ಯಕ್ತಿಯು ಸುಮ್ಮನೇ ಕುಳಿತಿದ್ದಾಗ ಆತನ ದೇಹದಲ್ಲಿ ಮೇದಸ್ಸನ್ನು (ಕೊಬ್ಬು) ಜೀರ್ಣಿಸಲು ಕಾರಣವಾಗುವ ಕಿಣ್ವಗಳ ಚಟುವಟಿಕೆಯನ್ನು ಒತ್ತಿಡುತ್ತದೆ. ಈ ಮೂಲಕ ಕೊಬ್ಬು ಕರಗುವ ಬದಲು ಶೇಖರವಾಗುತ್ತದೆ. ಆದರೆ ನಿಂತಾಗ ಈ ಸ್ಥಿತಿ ಇರುವುದಿಲ್ಲ ಎಂದು ಅವರು ಅಧ್ಯಯನ ಸರಣಿಯಿಂದ ಕಂಡುಕೊಂಡಿದ್ದಾರೆ.

ಪ್ರತಿಯೊಬ್ಬರು ನಮ್ಮಲ್ಲಿ ಕೆಲವರು ಭರ್ಜರಿ ದೈಹಿಕ ಕಸರತ್ತು ಮಾಡುತ್ತೇವೆ. ಆದರೆ ತೂಕ ಮತ್ತು ದೈಹಿಕ ಸಾಮರ್ಥ್ಯದ ಮೇತೆ ಸೋಮಾರಿತನವಂತೂ ಪರಿಣಾಮ ಬೀರಿಯೇ ಬೀರುತ್ತದೆ ಎಂದು ಅವರು ಹೇಳಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.

ತೂಕ ಇಳಿಸಲು ಜೀವನಶೈಲಿ ಬದಲಾವಣೆ ಎಂದರೆ ದಿನಕ್ಕೊಂದು ಗಂಟೆ ವ್ಯಯಿಸಿ, ಬೆವರು ಸುರಿಸುವುದು ಎಂದರ್ಥವಲ್ಲ. ಈಗ ಯಾವುದನ್ನು ಮಾಡುತ್ತಿದ್ದೇವೋ, ಅದನ್ನೇ ಮುಂದುವರಿಸಿ, ಅದರಲ್ಲೇ ಕೊಂಚ ಬದಲಾವಣೆ ಮಾಡಿಕೊಂಡರೆ ಸಾಕು ಎಂದು ಅವರು ಸಲಹೆ ನೀಡಿದ್ದಾರೆ.

Share this Story:

Follow Webdunia kannada