Select Your Language

Notifications

webdunia
webdunia
webdunia
webdunia

ಜಂಬೂಸವಾರಿಗೆ ರಾಜ್ಯಪಾಲರಿಂದ ಚಾಲನೆ

ವೈಭವದ ಮೆರವಣಿಗೆಗೆ ಸಾಕ್ಷಿಯಾದ ಲಕ್ಷ, ಲಕ್ಷ ಜನಸಾಗರ

ಜಂಬೂಸವಾರಿಗೆ ರಾಜ್ಯಪಾಲರಿಂದ  ಚಾಲನೆ
NRB

ವಿಶೇಷ ವರದಿ
ನಾಡ ಹಬ್ಬ ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂ ಸವಾರಿ ವೈಭವದಿಂದ ನಡೆಯಿತು. ಚಿನ್ನದ ಅಂಬಾರಿಯನ್ನು ಹೊತ್ತ ಗಜರಾಜ ಬಲರಾಮ ಶಾಂತವಾಗಿಯೇ ಮೆರವಣಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಕೊಂಬು, ಕಹಳೆಯ ನಿನಾದ, ವೈಭವೋಪೇತ ವಾದ್ಯ ಸಂಗೀತ, ಅರಮನೆ ಸೈನಿಕರನ್ನು ನೆನಪಿಸುವ ವಾದ್ಯ ಸಂಗೀತ, ಈ ಬಾರಿಯ ವಿಶೇಷವಾಗಿತ್ತು.

ಈ ಬಾರಿ ಮೆರವಣಿಗೆಯಲ್ಲಿ 26 ಸ್ತಬ್ಧ ಚಿತ್ರಗಳಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಎಲ್ಲರ ಗಮನ ಸೆಳೆದವು. ಈ ಸ್ತಬ್ಧ ಚಿತ್ರಗಳು ಮೆರವಣಿಗೆಯ ವೈಭವಕ್ಕೆ ಹೆಚ್ಚಿನ ಕಳೆ ನೀಡಿತು. ನಾಡಿನ ವಿವಿಧೆಡೆಗಳಿಂದ ಕರೆಸಿಕೊಂಡಿರುವ 60ಕ್ಕೂ ಹೆಚ್ಚು ಕಲಾವಿದರ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಲಿವೆ. ಇವುಗಳಲ್ಲಿ ಡೊಲ್ಳು ಕುಣಿತ, ಕಂಸಾಳೆ, ಸುಗ್ಗಿ ಕುಣಿತಗಳು ಪ್ರಮುಖ ಆಕರ್ಷಣೆಯಾಗಿದ್ದವು.

ಜನಸಾಗರ

ವೈಭವದ ಜಂಬೂಸವಾರಿಯನ್ನು ವೀಕ್ಷಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗಳು ಆಗಮಿಸಿದ್ದರು. . ಸಾವಿರಕ್ಕೂ ಹೆಚ್ಚು ವಿದೇಶೀಯರು ಎಂದಿನಂತೆ ಈ ಬಾರಿಯೂ ದಸರಾ ವೈಭವಕ್ಕೆ ಸಾಕ್ಷಿಯಾದರು.

ಬಿಗಿಭದ್ರತೆ

ಸುಮಾರು ಮೂರೂವರೆ ಕಿಲೋಮೀಟರ್ ಉದ್ದದ ಈ ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಭದ್ರತಾ ಕಾರ್ಯಕ್ಕೆ 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೆರವಣಿಗೆಯ ಸಂದರ್ಭದಲ್ಲಿ ನಗರದ ಇಕ್ಕೆಲಗಳಲ್ಲಿ ಸೇರಿದ್ದ ಜನ ಸಾಗರ ತಾಯಿ ಚಾಮುಂಡೇಶ್ವರಿಯನ್ನು ವಂದಿಸಿದರು.

ಪೂರ್ಣಕುಂಭ ಸ್ವಾಗತ

ಇದಕ್ಕೂ ಮೊದಲು ಮೊದಲಬಾರಿಗೆ ಮೈಸೂರಿಗೆ ಆಗಮಿಸುತ್ತಿರುವ ರಾಜ್ಯಪಾಲ ರಾಮೇಶ್ವರ ಠಾಕೂರ್ರವರನ್ನು ಮೈಸೂರು ಸಂಪ್ರದಾಯ ರೀತ್ಯ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಅರಮನೆಯ ಆವರಣದಲ್ಲಿ ಮಧ್ಯಾಹ್ನ 1.50ಕ್ಕೆ ಅರಮನೆಯ ಬಲರಾಮದ್ವಾರದ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮುಖೇನ ಜಂಬೂಸವಾರಿಗೆ ಮದ್ಯಾಹ್ನ 2 ಗಂಟೆಗೆ ವಿದ್ಯುಕ್ತ ಚಾಲನೆ ನೀಡಿದರು. ಮಧ್ಯಾಹ್ನ ಹಳೆಯ ಕಾರುಗಳ ಮೇಳವಾದ 'ವಿಂಟೇಜ್ ಕಾರ್ ರ್ಯಾಲಿ' ಮಧ್ಯಾಹ್ನ 12ಗಂಟೆಗೆ ಆರಂಭಗೊಂಡಿತು.

Share this Story:

Follow Webdunia kannada