Select Your Language

Notifications

webdunia
webdunia
webdunia
webdunia

ಟೊಮ್ಯಾಟೋ ಮಶ್ರೂಂ

ಟೊಮ್ಯಾಟೋ ಮಶ್ರೂಂ
ಬೇಕಾಗುವ ಸಾಮಾಗ್ರಿಗಳು :

ಮಶ್ರೂಂ ಚೂರುಗಳು - 1 ಕಪ್
ನೀರುಳ್ಳಿ - 1
ಟೊಮ್ಯಾಟೋ ಪೂರಿ - 1 ಕಪ್
ಗರಂ ಮಸಾಲಾ - 1ಚಮಚ
ಏಲಕ್ಕಿ ಪುಡಿ - 1 ಚಮಚ
ಅರಶಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ

ಪಾಕ ವಿಧಾನ :

ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ನೀರುಳ್ಳಿಯನ್ನು ಕಂದು ಬಣ್ಣ ಬರುವವರೆಗೆ ಹುರಿಯಿರಿ.ಇದಕ್ಕೆ ಟೊಮ್ಯಾಟೋ ಪೂರಿ, ಅರಶಿನ ಪುಡಿ ಮತ್ತು ಉಪ್ಪು ಬೆರೆಸಿರಿ.
ಕೆಲವು ನಿಮಿಷಗಳ ನಂತರ ಮಶ್ರೂಂ ಬೆರೆಸಿ ಮುಚ್ಚಳ ಮುಚ್ಚಿ 10 ಹೊತ್ತು ಬಿಡಿ.

ನಂತರ ಇದಕ್ಕೆ ಗರಂ ಮಸಾಲಾ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಕಲಸಿ.ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.

Share this Story:

Follow Webdunia kannada