Select Your Language

Notifications

webdunia
webdunia
webdunia
webdunia

ಶಿಶುನಾಳ ಶರೀಫ ಹಿಂದೂ ಮುಸ್ಲಿಂ ಅನುಭಾವಿ (1819-89)

ಶಿಶುನಾಳ ಶರೀಫ ಹಿಂದೂ ಮುಸ್ಲಿಂ ಅನುಭಾವಿ (1819-89)
ಶಿಶುನಾಳ ಶರೀಫರನ್ನು ಕನಾ ಟಕದ ಕಬೀರ್ ದಾಸ್ ಎಂದು ಕರೆಯಲಾಗುತ್ತದೆ. ಹಿಂದೂ, ಮುಸ್ಲಿಮರೆಂಬ ಭೇದವಿಲ್ಲದೆ ಎಲ್ಲರೂ ಅವರನ್ನು ಸಂತರೆಂದು ಪರಿಗಣಿಸಿದ್ದಾರೆ.

ಕನಾ ಟಕದ ಮೊದಲನೆಯ ಮುಸ್ಲಿಂ ಕವಿ ಎಂಬ ಖ್ಯಾತಿ ಕೂಡ ಅವರಿಗಿದೆ.ಇಮಾಮ್ ಸಾಹೇಬ್ ಮತ್ತು ಹಾಜುಮಾ ಎಂಬ ದಂಪತಿಗಳ ಮಗನಾಗಿ ಜನಿಸಿದ ಶರೀಫರ ಹುಟ್ಟೂರು ಧಾರವಾಡ ಜಿಲ್ಲೆಯ ಶಿಶುನಾಳ ಎಂಬ ಚಿಕ್ಕ ಗ್ರಾಮ.

ಅಲ್ಲಿಯೇ ಕನ್ನಡ ಮತ್ತು ಉದು ಕಲಿತು ಕನ್ನಡ ಉಪಾಧ್ಯಾಯನಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು. ಶರೀಫರು ಫಾತೀಮಾ ಎಂಬಾಕೆಯನ್ನು ಮದುವೆಯಾದರು. ಒಂದು ಹೆಣ್ಣು ಮಗುವಾಯಿತು.ಸ್ವಲ್ಪ ಕಾಲದ ನಂತರ ಮಗು ತಾಯಿ ಇಬ್ಬರೂ ಗತಿಸಿದರು.

ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.

ಕೊನೆಗೆ ಗೋವಿಂದ ಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು.

ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು. ಅಡವಿ ಸ್ವಾಮಿ ಹಾಗೂ ಸಿದ್ದಾರೂಢ ಸ್ವಾಮಿಗಳ ಪ್ರಭಾವವೂ ಅವರ ರಚನೆಗಳಲ್ಲಿ ಕಂಡುಬರುತ್ತದೆ.

ಶಿಶುನಾಳ ಶರೀಫರು ತಮ್ಮ ಗ್ರಾಮದಲ್ಲಿದ್ದ ಬಸವದೇವರ ಪರಮ ಭಕ್ತರಾಗಿದ್ದರು. ಕೆತ್ತನೆಯ ಬಸವ ವಿಗ್ರಹವನ್ನು ಅವರು ಸದಾ ಆರಾಧಿಸುತ್ತಿದ್ದರು. ತಮ್ಮ ಎಲ್ಲಾ ಹಾಡುಗಳಲ್ಲಿಯೂ ಈ ದೇವರನ್ನು ಶಿಶುನಾಳಾಧೀಶ ಎಂದು ಕರೆದಿದ್ದಾರೆ. ಈ ದೇವರೇ ತಮಗೆ ಕವಿತಾ ಸಾಮರ್ಧ್ಯವನ್ನು ಕೊಟ್ಟದ್ದು ಎಂದು ಅವರು ಕೊಂಡಾಡಿದ್ದಾರೆ.

ಶಿಶುನಾಳ ಶರೀಫರ ಎಲ್ಲಾ ರಚನೆಗಳು ಜೀವನಕ್ಕೆ ತೀರಾ ಹತ್ತಿರದ ಸಂಪರ್ಕವಿರುವಂತವುಗಳು. ಅವರು ಹೇಳುವ ಘಟನೆಗಳು ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ಸಲ ನಡೆದು ಅನುಭವ ಪಡೆದಂತವುಗಳು.

ಎಲ್ಲವೂ ಮಾನವನ ಜೀವನ ಮತ್ತು ಪ್ರಕೃತಿಗೆ ಸಂಭಂಧಪಟ್ಟ ವಿಷಯಗಳು. ನಿರೂಪಣೆ ತೀರಾ ಸರಳ. ಗ್ರಾಮ ಜೀವನವನ್ನು ಹಿನ್ನಲೆಯಾಗಿಟ್ಟುಕೊಂಡು ವರ್ಣಿಸಿರುವ ಅಪೂರ್ವ ಘಟನೆಗಳು, ಭಗವಂತನ ಬಗೆಗೆ ಅನನ್ಯ ಭಕ್ತಿ ಭಾವವನ್ನು, ಪ್ರೀತಿಯನ್ನು ತೋರಿಸಿ, ಸಮರ್ಪಣಾ ಮನೋಭಾವದಿಂದ ರಚಿತವಾಗಿರುವ ಅವರ ಹಾಡುಗಳು ಬಹುಮಟ್ಟಿಗೆ ಆಶು ಕವಿತೆಗಳಾಗಿವೆ.

ಕಂಡು ಕೇಳಿದವರು ಬರೆದು ಸಂಗ್ರಹಿಸಿದ ಕವನಗಳೇ ಅವರ ಹೆಚ್ಚಿನ ಸಂಗ್ರಹಗಳು. ಇವೆಲ್ಲವೂ ಬೀದಿಯಲ್ಲಿ, ದೇವಾಲಯದಲ್ಲಿ ಹಾಗೂ ಮಸೀದಿಗಳಲ್ಲಿ ರಚನೆಯಾದವು.ಜಾತ್ರೆ ಮತ್ತು ಹಬ್ಬ ಮುಂತಾದ ಸಮಾರಂಭಗಳಲ್ಲಿ ರಚನೆಯಾದ ಆಶುಕವಿತೆಗಳು ಈಗ ಪುಸ್ತಕ ರೂಪದಲ್ಲಿ ದ್ವನಿಸುರದಳಾಗಿ ಪ್ರಸಿದ್ಧಿ ಪಡೆದಿವೆ.

ಶರೀಫರಲ್ಲಿದ್ದ ಸಂತ ಮನೋಭಾವವನ್ನು ಅವರ ಜೀವಿತ ಕಾಲದಲ್ಲಿ ಬಹಳ ಮಂದಿ ಅರ್ಧಮಾಡಿಕೊಳ್ಳಲಿಲ್ಲ. ಪ್ರತಿದಿನ ಪ್ರಾರ್ಥನೆ ಮಾಡದ ಒಬ್ಬ ಮತಾಂಧ ಎಂದು ಮುಸ್ಲಿಮರು ದೂಷಿಸಿದರೆ, ಅವನೊಬ್ಬ ಸೋಮಾರಿಯೆಂದು ಅನೇಕರು ಹೀಯಾಳಿಸಿದರು.

ಶರೀಫರು ಹೇಳಿದ ನೀತಿವಚನಗಳಿಗೆ ಬಹಳ ಜನ ಬೆಲೆ ಕೊಡಲಿಲ್ಲ. ಪ್ರಾಣಿ ಪಕ್ಷಿಗಳನ್ನು ತಮ್ಮ ಕವಿತೆಗಳಲ್ಲಿ ರೂಪಕಗಳಾಗಿ ಬಳಸಿಕೊಂಡು ಶರೀಫರು ರಚಿಸಿರುವ ಕವನಗಳು ಅರ್ಥಪೂರ್ಣವಾಗಿ ಕಂಡುಬಂದು ಇದೀಗ ಹೆಚ್ಚಿನ ಪ್ರಚಾರ ಪಡೆದಿವೆ.

ಡಾ. ವಿ.ಗೋಪಾಲಕೃಷ್ಣ.

Share this Story:

Follow Webdunia kannada