Select Your Language

Notifications

webdunia
webdunia
webdunia
webdunia

ಭಾರತೀಯ ಕಲಾಕೃತಿಗಳ ಹರಾಜಿನ ವಿಶ್ವದಾಖಲೆ

ಭಾರತೀಯ ಕಲಾಕೃತಿಗಳ ಹರಾಜಿನ ವಿಶ್ವದಾಖಲೆ
, ಶುಕ್ರವಾರ, 5 ಸೆಪ್ಟಂಬರ್ 2008 (21:07 IST)
PR
ಅಂದಾಜು 29 ಕೋಟಿ ರೂ. ಮೊತ್ತದ ಸಮಕಾಲೀನ ಭಾರತೀಯ ಚಿತ್ರಕಲೆಗಳ ಆನ್‌ಲೈನ್ ಹರಾಜು ಸೆ.4ರ ಬುಧವಾರ ರಾತ್ರಿ ನಡೆದಿದ್ದು, ಇದು ನಿರೀಕ್ಷೆಗಿಂತಲೂ ಶೇ.72ರಷ್ಟು ಹೆಚ್ಚು ಬೆಲೆಗೆ ವಿಕ್ರಯವಾಗಿ ದಾಖಲೆ ಸೃಷ್ಟಿಸಿದೆ. ಸೇಫ್ರನಾರ್ಟ್ ಕಂಪನಿಯು ನಡೆಸಿದ ಈ ಹರಾಜಿನಲ್ಲಿ ಒಟ್ಟು 18 ವಿಶ್ವ ದಾಖಲೆಗಳು ಬರೆಯಲ್ಪಟ್ಟವು.

ಟಿ.ವಿ.ಸಂತೋಷ್, ಅಂಜು ದೋಡಿಯಾ, ಸುಧೀರ್ ಪಟವರ್ಧನ್, ಜಿ.ಆರ್.ಈರಣ್ಣ,
webdunia
PR
ಮಿಥು ಸೇನ್, ಅನಿತಾ ದುಬೆ, ಸುದರ್ಶನ್ ಶೆಟ್ಟಿ, ಅನಿಲ್ ರೇವ್ರಿ, ತುಷಾರ್ ಜೋಗ್, ಮನೀಷಾ ಪಾರೇಖ್, ದೇಬಂಜನ್ ರಾಯ್, ಫಣೀಂದ್ರ ನಾಥ್ ಚತುರ್ವೇದಿ, ಕಿಶೋರ್ ಶಿಂದೆ, ಚಿತ್ರಾ ಗಣೇಶ್, ರವಿಕುಮಾರ್ ಕಾಶಿ, ರಾಮ್ ಬಾಲಿ ಚೌಹಾಣ್, ಮಯೂರ್ ಕೈಲಾಶ್ ಗುಪ್ತಾ ಹಾಗೂ ನಿಕೋಲಾ ದುರ್ವಸುಲ ಅವರುಗಳ ಚಿತ್ರರಚನೆಗಳು 18 ವಿಶ್ವ ಹರಾಜು ದಾಖಲೆಗಳನ್ನು ಸೃಷ್ಟಿಸಿದವು.

webdunia
PR
ಹರಾಜಿನ ಮೊದಲ ಒಂದು ಗಂಟೆಯಲ್ಲೇ, ಬಹುತೇಕ ಕಲಾಕೃತಿಗಳು ಅತ್ಯಧಿಕ ಮಿತಿಯನ್ನು ದಾಟಿದ್ದವು. ಮಾರಾಟದ ಕೊನೆಯ ಕ್ಷಣಗಳವರೆಗೂ ಇದು ಏರುತ್ತಲೇ ಹೋಗಿತ್ತು. ವಿಶ್ವಾದ್ಯಂತ ನೋಂದಾಯಿತ 575 ಬಿಡ್ಡರ್‌ಗಳು ಇದರಲ್ಲಿ ಭಾಗವಹಿಸಿದ್ದರು. ಭಾರತದ ಅತ್ಯಂತ ಪ್ರತಿಭಾನ್ವಿತ ಕಲಾವಿದರ ಕಲಾಕೃತಿಗಳನ್ನು ಖರೀದಿಸಲು ಅವರಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು.

ಇವುಗಳಲ್ಲಿ ಪ್ರಮುಖ ಐದು ಕಲಾಕೃತಿಗಳೆಂದರೆ, ಸುಬೋಧ್ ಗುಪ್ತಾ ಅವರ ಥೀಫ್ ಐ (4.28 ಕೋಟಿ ರೂ.), ಅವರದೇ ಮತ್ತೊಂದು ಕಲಾಕೃತಿ ಸಾತ್ ಸಮುಂದರ್ ಪಾರ್ (3.4 ಕೋಟಿ ರೂ.),
webdunia
PR
ಸಂತೋಷ್ ಅವರ 'ವೆನ್ ಯುವರ್ ಟಾರ್ಗೆಟ್ ಕ್ರೈಸ್ ಫಾರ್ ಮರ್ಸಿ' (2.8 ಕೋಟಿ ರೂ.), ಅಂಜು ದೋಡಿಯಾ ಅವರ 'ದಿ ಸೈಟ್' (1.06 ಕೋಟಿ ರೂ.) ಹಾಗೂ ಸುಧೀರ್ ಪಟವರ್ಧನ್ ಅವರ 'ದಿ ಕ್ಲಿಯರಿಂಗ್' (93.15 ಲಕ್ಷ ರೂ.).

ಸೇಫ್ರನಾರ್ಟ್ ಆರಂಭಿಸಿರುವ ಆನ್‌ಲೈನ್ ಹರಾಜುಪ್ರಕ್ರಿಯೆಯು, ಆಧುನಿಕ ಮತ್ತು ಸಮಕಾಲೀನ ಭಾರತೀಯ ಕಲಾ ಕ್ಷೇತ್ರದಲ್ಲಿ ಬದಲಾವಣೆಯ ಬಿರುಗಾಳಿ ಸೃಷ್ಟಿಸಿದ್ದು, ವಿಶ್ವಾದ್ಯಂತ ಆಸಕ್ತರು ಅವುಗಳನ್ನು ಖರೀದಿಸಲು ಅನುಕೂಲ ಮಾಡಿಕೊಟ್ಟಿತ್ತು. ದಿನೇಶ್ ಮತ್ತು ಮಿನಾಲ್ ವಜಿರಾನಿ ಅವರಿಂದ ಸ್ಥಾಪಿಸಲ್ಪಟ್ಟ ಇದು, ಹಾರ್ವರ್ಡ್ ವಿವಿಯು ಅದರ ಕಾರ್ಯವೈಖರಿಯನ್ನು ಅಧ್ಯಯನ ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತದ್ದು ಇತಿಹಾಸ.

Share this Story:

Follow Webdunia kannada