Select Your Language

Notifications

webdunia
webdunia
webdunia
webdunia

ಗ್ರಾಮೀಣ ವಿದ್ಯುತ್‌ಗೆ 'ಗಾಂಧಿ ಚರಕ'ದ ನೆರವು

ಗ್ರಾಮೀಣ ವಿದ್ಯುತ್‌ಗೆ 'ಗಾಂಧಿ ಚರಕ'ದ  ನೆರವು
ಬಾಸ್ಸಿ(ಜೈಪುರ್) , ಗುರುವಾರ, 14 ಆಗಸ್ಟ್ 2008 (12:13 IST)
ಬಾಸ್ಸಿ(ಜೈಪುರ್) : ಮಹಾತ್ಮಾ ಗಾಂಧಿಯವರ ಚರಕ ಕೇವಲ ಸ್ವಾವಲಂಬನೆ, ಉದ್ಯೋಗದ ಸಾಧನವಲ್ಲ.ಇದೀಗ ಜೈಪುರ್‌ನ ಪುಟ್ಟ ಗ್ರಾಮವಾದ ಬಾಸ್ಸಿಯಲ್ಲಿ ಗ್ರಾಮಸ್ಥರಿಗೆ ವಿದ್ಯುತ್ ಉತ್ಪಾದನೆಯ ಮಾರ್ಗದರ್ಶಕ ಜ್ಯೋತಿಯಾಗಿದೆ.

ಗ್ರಾಮಸ್ಥರು ಚರಕದಲ್ಲಿ ನೇಗಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ಉತ್ಪಾದಿಸುವ ನವೀನ ರೀತಿಯ ಯಂತ್ರವನ್ನು ನಿರ್ಮಿಸಿದ್ದು,ಇದು ಕಾರ್ಯನಿರ್ವಹಿಸುತ್ತಿರುವಾಗ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹಣೆಗೊಂಡು ನಂತರ ಅವರು ಮನೆಗೆ ತೆರಳುವ ಸಂದರ್ಭದಲ್ಲಿ ಬ್ಯಾಟರಿಯನ್ನು ಮನೆಗೆ ಒಯ್ದು ಅದನ್ನು ವಿದ್ಯುತ್‌ ಪಡೆಯಲು ಉಪಯೋಗಿಸಲಾಗುತ್ತದೆ.

ಗಾಂಧೀಜಿಯವರ ಕರೆಯ ಮೇರೆಗೆ 1954ರಲ್ಲಿ ತಮಿಳುನಾಡಿನ ಏಕಂಬರನಾಥ್ ಅವರು ಅಂಬೇರ್ ಚರಕವನ್ನು ಪರಿಚಯಿಸಿದರು.ವರ್ಷಗಳುರುಳಿದಂತೆ ಚರಕ ಬದಲಾವಣೆಗಳನ್ನು ಕಂಡು ಪ್ರಸ್ತುತ ವಿದ್ಯುತ್ ಉತ್ಪಾದಿಸುವ ಯಂತ್ರವಾಗಿ ಮಾರ್ಪಟ್ಟಿದೆ.
ಲೈಟ್ ಎಮಿಟಿಂಗ್ ಡೈಯೋಡ್‌ನ್ನು ವಿಶೇಷವಾಗಿ ರಚಿಸಲಾಗಿದ್ದು, ಟ್ರಾನ್‌ಸಿಸ್ಟರ್‌ ರೇಡಿಯೊಗಳನ್ನು ಜೋಡಿಸಿರುವುದರಿಂದ ಚರಕವನ್ನು ಉಪಯೋಗಿಸುವ ಗ್ರಾಮಸ್ಥರಿಗೆ ಉದ್ಯೋಗದ ಜೊತೆಗೆ ವಿದ್ಯುತ್, ಮನರಂಜನೆ ದೊರೆತಂತಾಗಿದೆ.

ಬಾಸ್ಸಿಯ ಖಾದಿ ಗ್ರಾಮೊದ್ಯೋಗ ಸಗನ್ ವಿಕಾಸ್ ಸಮಿತಿ ಖಾದಿ ಆಯೋಗದ ಪೈಲಟ್ ಯೋಜನೆಯಡಿಯಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಬಹುಪಯೋಗಿ ಅಂಬೇರ್ ಚರಕವನ್ನು ಪರಿಚಯಿಸಿದೆ.

ನೂತನ ಚರಕದಲ್ಲಿ ಕನ್‌ವರ್ಟರ್ ಹಾಗೂ ರಿಚಾರ್ಜ್ ಸಂಗ್ರಹ ಮತ್ತು ಎಲ್‌ಇಡಿಯನ್ನು ಜೋಡಿಸಲಾಗಿದೆ. ಎರಡು ಗಂಟೆಗಳ ಅವಧಿಗೆ ಚರಕ ಕಾರ್ಯನಿರ್ವಹಿಸುವುದರಿಂದ ಮನೆಯಲ್ಲಿ 7.5 ಗಂಟೆಗಳವರೆಗೆ ಬಲ್ಬ್ ಉರಿಯುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ.

ಬಾಸ್ಸಿಯ ಖಾದಿ ಗ್ರಾಮದ್ಯೋಗ ಸಗನ್ ವಿಕಾಸ್ ಸಮಿತಿ ಕಾರ್ಯದರ್ಶಿ ಲಕ್ಷ್ಮಿ ಚಂದ ಭಂಡಾರಿ ಅವರು ಮಾತನಾಡಿ ಇ-ಚರಕವನ್ನು ಖಾದಿ ಆಯೋಗದ ಪೈಲಟ್ ಯೋಜನೆಯಡಿ ಆರು ತಿಂಗಳ ಹಿಂದೆ ಪರಿಚಯಿಸಲಾಗಿದೆ.ನೂತನ ಅಂಬೇರ್ ಚರಕ ಗರಿಷ್ಟ 8 ಸ್ಪಿಂಡಲ್‌ಗಳಷ್ಟು ಬಳಸಬಹುದಾಗಿದ್ದು , ಸ್ಪಿಂಡಲ್‌ಗಳ ಹಿಂದೆ ವಿದ್ಯುತ್ ಸಂಗ್ರಹಣೆಗಾಗಿ ಬ್ಯಾಟರಿಯನ್ನು ಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada