Select Your Language

Notifications

webdunia
webdunia
webdunia
webdunia

ವಾತರಕ್ತ ಕೀಲು ನೋವು ಅನ್ನುವ ನೋವು ವೇದನೆಯ ಸಮಸ್ಯೆ

ವಾತರಕ್ತ ಕೀಲು ನೋವು ಅನ್ನುವ ನೋವು ವೇದನೆಯ ಸಮಸ್ಯೆ
, ಸೋಮವಾರ, 27 ಜನವರಿ 2014 (10:01 IST)
PR
ಕೆಲವರ ಕಾಲುಗಳ ಮಂದಿಯನ್ನು ನೀವು ಗಮನಿಸಿರ ಬಹುದು ಅವರ ಕೀಲುಗಳಲ್ಲಿ ಸದಾ ಕಾಡುವ ನೋವು, ಊತ, ಊರಿತ ಹಾಗೂ ಸಂದುಗಳಲ್ಲಿ ಕೆಂಪಾಗಿರುತ್ತದೆ. ಇದನ್ನು ವಾತರಕ್ತ ಕೀಲುನೋವು ಎಂದು ಕರೆಯುತ್ತಾರೆ.

ಈ ಸಮಸ್ಯೆ ಇರುವ ವ್ಯಕ್ತಿಯ ರಕ್ತದಲ್ಲಿ ಹೆಚ್ಚು ಯುರಿಕ್ ಆಮ್ಲ ಇರುತ್ತದೆ. ಹೆಚ್ಚಾಗಿ ಸಣ್ಣ ಕೀಲುಗಳಾದ ಕೈ,ಕಾಲುಗಳ ಬೆರಳಲ್ಲಿ ಕಾಣಸಿಗುತ್ತದೆ.

ಮಹಿಳೆಯರಿಗಿಂತ ಪುರುಷರಲ್ಲಿ 40 ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಕಾಡುತ್ತದೆ. ಅನುವಂಶೀಯತೆ ಒಂದು ಕಾರಣವಾದರೆ, ಮದ್ಯಪಾನ, ಅಪೌಷ್ಟಿಕ ಆಹಾರ ,ಅಜೀರ್ಣ, ಊಟದಲ್ಲಿ ಹುಳಿ ಪದಾರ್ಥ ಸೇವನೆ, ಸ್ಥೂಲ ದೇಹವು ಸಹ ಈ ಸಮಸ್ಯೆ ಉಂಟು ಮಾಡುತ್ತದೆ.

ದೇಹದ ರಾಸಾಯನಿಕ ಕ್ರಿಯೆಗಳ ಉತ್ಪನ್ನ ಫಲವಾದ ಯೂರಿಕ್ ಆಮ್ಲವು ರಕ್ತದಲ್ಲಿ ಕರಗಿ ಹೋಗುತ್ತದೆ. ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ರಕ್ತದಿಂದ ಬೇರ್ಪಡಿಸಿ ಮೂತ್ರದ ಮೂಲಕ ಹೊರ ಹಾಕುತ್ತದೆ. ಆದರೆ ಕೆಲವೊಮ್ಮೆ ದೇಹವು ಹೆಚ್ಚಾಗ ಯೂರಿಕ್ ಆಮ್ನವನ್ನು ಉತ್ಪನ್ನ ಮಾಡುತ್ತದೆ ಅಥವಾ ಮೂತ್ರಪಿಂಡಗಳು ಸೂಕ್ತ ಪ್ರಮಾಣದಲ್ಲಿ ಯೂರಿಕ್ ಆಮ್ನವನ್ನು ರಕ್ತದಿಂದ ಬೇರ್ಪಡಿಸಲು ಅಸಾಧ್ಯವಾದಾಗ ಯೂರಿಕ್ ಆಮ್ಲವು ರಕ್ತದಲ್ಲಿ ಉಳಿದು ಹೋಗುತ್ತದೆ. ಇದರಿಂದ ಕೀಲುಗಳಲ್ಲಿ ಊತ, ನೋವು, ಉರಿ ಕಂಡು ಬರುತ್ತದೆ. ಸಂದುಗಳಲ್ಲಿ ಗಂಟುಗಳು ಕಾಣಿಸಿಕೊಳ್ಳುವುದನ್ನು ಟೋಪೈ ಎನ್ನುತ್ತಾರೆ ವೈದ್ಯಕೀಯ ಪರಿಭಾಷೆಯಲ್ಲಿ .

ಜ್ವರ, ಚಳಿ, ಅಜೀರ್ಣ ಕಾಣಿಸುತ್ತದೆ. ರಾತ್ರಿ ಹೆಚ್ಚಾಗುತ್ತದೆ. 5ರಿಂದ10 ದಿನಗಳವರೆಗೆ ಕಾಣಿಸಿಕೊಂಡು ಮತ್ತೆ ಕಾಣೆಯಾಗಿ ಪುನಃ ಕಂಡು ಬರುತ್ತದೆ.

ಸಮಸ್ಯೆ ಕಂಡಾಗ ಸುಮ್ಮನೆ ಕೂರದೆ ವೈದ್ಯರ ಚಿಕಿತ್ಸೆ ಪಡೆಯಿರಿ. ಅತಿಯಾದರೆ ತೊಂದರೆಗಳ ಪ್ರವಾಹ ಎದುರಾಗುತ್ತದೆ.

Share this Story:

Follow Webdunia kannada