Select Your Language

Notifications

webdunia
webdunia
webdunia
webdunia

ಆಲ್ಕೋ‌ಹಾಲು ತಲೆಗೇರಲು ಆರೇ ನಿಮಿಷ ಸಾಕು!

ಆಲ್ಕೋ‌ಹಾಲು ತಲೆಗೇರಲು ಆರೇ ನಿಮಿಷ ಸಾಕು!
ಮದ್ಯಸಾರ ಅತ್ಯಂತ ವೇಗವಾಗಿ ತಲೆಗೇರುತ್ತದೆ ಎಂಬುದಾಗಿ ಆಗೀಗ ಹೇಳಲಾಗುತ್ತದೆ. ಆದರೆ ಎಷ್ಟುಬೇಗ ತಲೆಗೇರುತ್ತದೆ ಅಂತಗೊತ್ತಾ? ಸಂಶೋಧಕರ ಪ್ರಕಾರ ಬರೀ ಆರು ನಿಮಿಷ ಸಾಕಂತೆ!

ಮೂರು ಗ್ಲಾಸು ಬಿಯರು ಅಥವಾ ಎರಡು ಪೆಗ್ ವೈನ್‌ ಪ್ರಮಾಣದಷ್ಟು ಮಧ್ಯ ಸೇವಿಸಿದರೆ ಅದು ಮಾನವ ಮೆದುಳಿನ ಸೆಲ್‌ಗಳಿಗೆ ತಲುಪಲು ಆರು ನಿಮಿಷ ಸಾಕು ಎಂಬುದಾಗಿ ಹೈಡೆಲ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರು ನಡೆಸಿದ ಅಧ್ಯಯನ ತಿಳಿಸಿದೆ.

ಈ ವಿಚಾರದಲ್ಲಿ ಮಹಿಳೆ ಮತ್ತು ಪುರುಷರು ಸಮಾನರು. ಅಂದರೆ ಮಹಿಳೆ ಮತ್ತು ಪುರುಷರಿಬ್ಬರಿಗೂ ಅಮಲೇರಲು ಒಂದೇ ಅವಧಿ ಅಂದರೆ ಆರು ನಿಮಿಷಗಳು ಸಾಕು.

ಮೆದುಳಿನ ಮೇಲಿನ ಮದ್ಯಪಾನದ ಪರಿಣಾಮ ಅಲ್ಪಕಾಲೀನವಾಗಿದ್ದರೂ, ಸೆಲ್‌ಗಳ ದುರಸ್ಥಿಗೆ ಹೆಚ್ಚುಕಾಲ ತಗಲುತ್ತದೆ.

ಎಂಟು ಪುರುಷರು ಮತ್ತು ಏಳು ಮಹಿಳೆಯರನ್ನು ಸಂಶೋಧಕರು ಈ ಅಧ್ಯಯನಕ್ಕೆ ಬಳಸಿಕೊಂಡಿದ್ದರು. ಇವರು ಎಂಆರ್ಐ ಬ್ರೈನ್ ಸ್ಕ್ಯಾನರ್‌ನಲ್ಲಿ ಪವಡಿಸಿ 90 ಸೆಂಟಿಮೀಟರ್ ಉದ್ದದ ಸ್ಟ್ರಾದಲ್ಲಿ ನಿರ್ದಿಷ್ಟ ಪ್ರಮಾಣದ ಆಲ್ಕೋಹಾಲ್ ಸೇವಿಸಿದ್ದರು.

ರಕ್ತದಲ್ಲಿ ಆಲ್ಕೋಹಾಲ್ ಮಟ್ಟವು 0.05ರಿಂದ 0.06 ಏರುವುದು ಅಧ್ಯಯನದ ಗುರಿಯಾಗಿತ್ತು. ಈ ಪ್ರಮಾಣದಲ್ಲಿ ವಾಹನ ಚಾಲನೆಯ ಸಾಮರ್ಥ್ಯವನ್ನು ಕುಂದಿಸುತ್ತದೆ. ಆದರೆ, ಇಷ್ಚರಲ್ಲಿ ಹೆಚ್ಚು ಮತ್ತೇರುವುದಿಲ್ಲ.

ಆಲ್ಕೋಹಾಲ್ ಪ್ರಮಾಣ ಏರಿದಂತೆ ಸಹಜವಾಗಿ ಮೆದುಳಿನ ಜೀವಕೋಶಗಳನ್ನು ರಕ್ಷಿಸುವ ರಾಸಾಯಾನಿಕ ಅಂಶಗಳು ಕಡಿಮೆಯಾಗುತ್ತವೆ. ಹೆಚ್ಚಿನ ಆಲ್ಕೋಹಾಲ್ ಸೇವಿಸಿದರೆ ಇದರಿಂದಾಗಿ ಮೆದುಳಿನ ಇತರ ಅಯಯವಗಳ ಮೇಲೆ ಕಾರ್ಯವನ್ನು ಸ್ಥಗಿತಗೊಳ್ಳುತ್ತದೆ ಎಂದು ಪ್ರಮುಖ ಸಂಶೋಧಕ ಅರ್ಮಿನ ಬಿಲ್ಲರ್ ಹೇಳಿದ್ದಾರೆ. ಆಲ್ಕೋಹಾಲ್ ಪ್ರಮಾಣ ಹೆಚ್ಚಿದಂತೆ ಅಮಲು ತಲೆಯಿಂದ ಇಳಿಯಲು ವಿಳಂಬವಾಗುತ್ತದೆ ಎಂದು ಅಧ್ಯಯನ ಹೇಳಿದೆ.

Share this Story:

Follow Webdunia kannada