Select Your Language

Notifications

webdunia
webdunia
webdunia
webdunia

ಸಮಸ್ಯೆ ಎದುರಾದರೆ ಸುಮ್ನೆ ಮಲ್ಕೊಂಬಿಡಿ

ಸಮಸ್ಯೆ ಎದುರಾದರೆ ಸುಮ್ನೆ ಮಲ್ಕೊಂಬಿಡಿ
ಸಮಸ್ಯೆ ಒಂದನ್ನು ಎದುರಿಸುತ್ತಿದ್ದೀರಾ? ದುಗುಡಗೊಳ್ಳಬೇಡಿ, ಸುಮ್ನೆ ಒಂದು ಕೋಳಿ ನಿದ್ದೆ ಮಾಡಿ, ನಿಮಗೆ ಸಮಸ್ಯೆಯನ್ನು ಎದುರಿಸುವ ಶಕ್ತಿ ಬರುತ್ತದೆ ಎಂಬುದಾಗಿ ಸಂಶೋಧಕರು ಹೇಳುತ್ತಾರೆ.

ಸಮಸ್ಯೆ ಒಂದು ಕಾಡಿದಾಗ ಅದರ ಮೇಲೆ ನಿದ್ರಿಸುವುದು ಮತ್ತು ಅದರ ಕುರಿತು ಕನಸು ಕಾಣುವುದೂ ಸಹ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುವುದಂತೆ! ಒಂದು ಸಣ್ಣನಿದ್ದೆಯು ವ್ಯಕ್ತಿಯ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಡೇಲಿ ಟೆಲಿಗ್ರಾಫ್ ವರದಿ ಮಾಡಿದೆ.

ಒಂದು ಕಿರುನಿದ್ದೆಯ ಬಳಿಕ ವ್ಯಕ್ತಿಗಳು ಹೆಚ್ಚು ಕ್ಷಿಪ್ರವಾಗಿ ಮತ್ತು ಹೆಚ್ಚು ಸಮರ್ಥವಾಗಿ ಯೋಚಿಸಲು ಶಕ್ತರಾಗುತ್ತಾರೆ ಎಂಬುದಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಸಾರಾ ಮೆಡ್ನಿಕ್ ನೇತೃತ್ವದ ಅಂತಾರಾಷ್ಟ್ರೀಯ ತಂಡವು ಕಂಡುಕೊಂಡಿದೆ. ಒಂದೊಮ್ಮೆ ಅವರು ಎದುರಿಸುತ್ತಿರುವ ತೊಂದರೆಗಳ ಕುರಿತು ಕನಸು ಕಂಡರೆ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆಯಂತೆ.

ನೀವು ಇದೀಗಾಗಲೇ ಕಾರ್ಯನಿರತವಾಗಿರುವ ಸೃಜನಶೀಲ ಸಮಸ್ಯೆಗಳಿಗೆ ಸಮಯ ಕಳೆಯುವಿಕೆ ಸೂಕ್ತ ಉತ್ತರ ನೀಡುತ್ತದೆ. ಅದಾಗ್ಯೂ, ಹೊಸ ಸಮಸ್ಯೆಗಳಿಗೆ ಕ್ಷಿಪ್ರ ನೇತ್ರ ಚಲನಾ ನಿದ್ರಾವಸ್ಥೆ(ಆರ್ಇಎಂ)ಯು ಸೃಜನಶೀಲತೆಯನ್ನು ವೃದ್ಧಿಸುತ್ತದೆ ಎಂದು ಮೆಡ್ನಿಕ್ ಹೇಳುತ್ತಾರೆ.

77 ಪ್ರಾಪ್ತವಯಸ್ಕ ಯುವಕರ ಮೇಲೆ ನಡೆಸಲಾದ ಪ್ರಯೋಗದ ಆಧಾರದಲ್ಲಿ ಸಂಶೋಧಕರ ತಂಡವು ಈ ಅಭಿಪ್ರಾಯಕ್ಕೆ ಬಂದಿದೆ. ಇವರಿಗೆ ಮುಂಜಾನೆಯ ವೇಳೆ ಶಬ್ದಗಳಿಗೆ ಸಂಬಂಧಿಸಿದ ಸೃಜನಶೀಲ ಕೆಲಸವನ್ನು ನೀಡಲಾಗಿತ್ತು.

ಪ್ರಯೋಗದಲ್ಲಿ ಇವರಿಗೆ ಮೂರು ಶಬ್ದಗಳ ಸಮೂಹವನ್ನು ನೀಡಿದ್ದು, ಈ ಮೂರು ಶಬ್ದಗಳಿಗೆ ಸರಿಹೊಂದುವ ನಾಲ್ಕನೆ ಶಬ್ದವನ್ನು ಕಂಡುಹುಡುಕಲು ಹೇಳಲಾಗಿತ್ತು.

Share this Story:

Follow Webdunia kannada