Select Your Language

Notifications

webdunia
webdunia
webdunia
webdunia

ಇದು ದೀರ್ಘಾಯುಷ್ಯದ ರಹಸ್ಯವಂತೆ!

ಇದು ದೀರ್ಘಾಯುಷ್ಯದ ರಹಸ್ಯವಂತೆ!
ದೀರ್ಘಾಯುಷಿಗಳಾಗಬೇಕೆ? ಸಿಂಪಲ್. ತಾಜಾ ಹಣ್ಣುಗಳು, ಹಸಿರು ಚಹ, ಮೀನು, ಕೆಂಪು ವೈನ್ ಮುಂತಾದವುಗಳನ್ನು ಸೇವಿಸಿ. ಇವುಗಳಲ್ಲಿ ದೀರ್ಘಾಯುಷ್ಯದ ರಹಸ್ಯವಡಗಿದೆ. ಇದಲ್ಲದೆ, ನವಜಾತ ಶಿಶುಗಳಿಗೆ ಎದೆ ಹಾಲು ನೀಡುವುದು ಇವೆಲ್ಲಕ್ಕಿಂತ ಮಿಗಿಲು ಎಂಬುದಾಗಿ ತಜ್ಞರು ಹೇಳುತ್ತಾರೆ.

"ಎದೆ ಹಾಲು ಹೆಚ್ಚಿನ ಮಟ್ಟದ ಐಕ್ಯೂಗೆ ಕಾರಣ. ಮತ್ತು ಇದು ಮಧುಮೇಹ, ಹೈಪರ್‌ಟೆನ್ಷನ್ ಮತ್ತು ಅಸ್ತಮಾವನ್ನು ತಗ್ಗಿಸುತ್ತದೆ. ಮಗುವಿಗೆ ಎದೆ ಹಾಲು ನೀಡುವುದರಿಂದ ಮಗು ಬೆಳೆದು ದೊಡ್ಡವನಾಗುವ ತನಕವೂ ಆರೋಗ್ಯವಾಗಿಸುತ್ತದೆ ಮತ್ತು ಇದು ದೀರ್ಘಾಯುಶ್ಯಕ್ಕೂ ಸಹಾಯಕ" ಎಂಬುದಾಗಿ ಡಾ| ಅರುಣ್ ಸೋನಿ ಹೇಳಿದ್ದಾರೆ. ಇವರು ಶ್ರೀಗಂಗಾರಾಂ ಆಸ್ಪತ್ರೆಯ ನವಜಾತಶಿಶು ವಿಭಾಗದ ಸಲಹೆಗಾರರಾಗಿದ್ದಾರೆ.

"ಇದು ಶಿಶುಗಳಿಗೆ ಸಂಪೂರ್ಣ ಆಹಾರ. ಅತ್ಯಂತ ಆರೋಗ್ಯಕರ. ದೇಹಕ್ಕೆ ಹೆಚ್ಚು ರೋಗನಿರೋಧಕ ಶಕ್ತಿ ನೀಡುತ್ತದೆ ಮತ್ತು ಖಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಅವರು ಹೇಳುತ್ತಾರೆ.

ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ ಅದು ಪ್ರಸ್ತುತ ಆರೋಗ್ಯದ ಮೇಲೆ ಹಾನಿಮಾಡುವುದು ಮಾತ್ರವಲ್ಲದೆ, ಕ್ಯಾನ್ಸರ್, ಮಧುಮೇಹದಂತಹ ಖಾಯಿಲೆಗಳಿಗೂ ನಾಂದಿ ಎಂಬುದಾಗಿ ಪೌಷ್ಠಿಕಾಂಶ ತಜ್ಞೆ ಡಾ| ಸೀಮಾ ಪುರಿ ಹೇಳುತ್ತಾರೆ.

ಹೆಚ್ಚು ತರಕಾರಿಗಳು(ನಿರ್ದಿಷ್ಟವಾಗಿ ಕಾಡು ಸಸಿಗಳು), ಹಣ್ಣುಗಳು, ಬೀಜಗಳು, ಧಾನ್ಯಗಳು, ಆಲೀವ್‌ಗಳು, ಆಲೀವ್ ಎಣ್ಣೆ, ಹೆಚ್ಚು ಚೀಸ್ ಕಡಿಮೆ ಹಾಲು, ಹೆಚ್ಚುಮೀನು ಕಡಿಮೆ ಮಾಂಸ ಸೇವನೆಯು ಆರೋಗ್ಯ ರಕ್ಷಕ ಎಂದು ಪುರಿ ಹೇಳುತ್ತಾರೆ.

ಇದಲ್ಲದೆ, ರೆಡ್ ವೈನ್, ಸೋಯಾ, ಕಾಳುಗಳು, ಬೆಳ್ಳುಳ್ಳಿ ಹಾಗೂ ಅರಿಷಿನಗಳೂ ಸಹ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದೂ ಸೀಮಾ ಹೇಳುತ್ತಾರೆ.

ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆಯು ಸ್ನಾಯುಗಳ ಸವೆತ, ಕಣ್ಣಿನ ದೃಷ್ಠಿ ನಾಶ, ಕ್ಯಾಟರಾಕ್ಟ್, ಉಸಿರಾಟದ ತೊಂದರೆ, ಸ್ತನ, ಹೊಟ್ಟೆ ಕ್ಯಾನ್ಸರ್‌ ಸಾಧ್ಯತೆಯನ್ನು ಕುಗ್ಗಿಸುತ್ತದೆ.

ಜಪಾನಿಯರು ಜಗತ್ತಿನಲ್ಲಿ ಅತಿ ಹೆಚ್ಚುಕಾಲ ಬಾಳುವ ದೀರ್ಘಾಯುಷಿಗಳು. ಅವರು ಹೆಚ್ಚು ಹಣ್ಣುಗಳನ್ನು ಸೇವಿಸುವುದು ಮತ್ತು ಅಧಿಕ ಉಪ್ಪಿನ ಸಾಂಪ್ರಾದಾಯಿಕ ಆಹಾರ ಸೇವನೆಯನ್ನು ತಗ್ಗಿಸಿರುವುದು ಇದರ ರಹಸ್ಯ ಎಂಬುದಾಗಿ ಗಂಗಾ ರಾಂ ಆಸ್ಪತ್ರೆಯ ಮುಖ್ಯ ಡಯಟೀಶನ್ ಶಶಿ ಮಾಥೂರ್ ಹೇಳುತ್ತಾರೆ.

ನವಜಾತ ಶಿಶುಗಳಿಗೆ ಎದೆ ಹಾಲು ನೀಡುವುದು ಭವಿಷ್ಯದ ಹಲವು ಸಮಸ್ಯೆಗಳನ್ನು ತಡೆಗಟ್ಟುತ್ತದೆ ಮತ್ತು ಇದು ಸಂಪೂರ್ಣ ಆಹಾರವಾಗಿದ್ದು, ದೇಹಕ್ಕೆ ರೋಗನಿರೋಧಕ ಶಕ್ತಿಯನ್ನೂ ನೀಡುತ್ತದೆ.

Share this Story:

Follow Webdunia kannada