Select Your Language

Notifications

webdunia
webdunia
webdunia
webdunia

ಹೆಚ್ಚುತ್ತಿರುವ ಮೆದುಳುಸ್ರಾವ ಪ್ರಕರಣಗಳು

ಹೆಚ್ಚುತ್ತಿರುವ ಮೆದುಳುಸ್ರಾವ ಪ್ರಕರಣಗಳು
ಮೆದುಳಿನ ರಕ್ತಸ್ರಾವದಿಂದ ಉಂಟಾಗುತ್ತಿರುವ ಆಘಾತಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಕಳೆದೊಂದು ದಶಕದಿಂದ ಈ ಸಂಖ್ಯೆಯಲ್ಲಿ ಸುಮಾರು ಶೇ.20ರಷ್ಟು ಹೆಚ್ಚಳವಾಗಿದ್ದು ಜನರ ಜೀವಿತಾವಧಿಯ ಹೆಚ್ಚಳ ಇದಕ್ಕೆ ಕಾರಣ ಇರಬಹುದು ಎಂಬುದಾಗಿ ಅವರು ಅಭಿಪ್ರಾಯಿಸಿದ್ದಾರೆ.

ಲಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಈ ಅಧ್ಯಯನ ವರದಿಯು, ಕಳೆದ 10 ವರ್ಷದ ಅವಧಿಯಲ್ಲಿ ಹೆಚ್ಚೆಚ್ಚು ಪುರುಷ ಹಾಗೂ ಮಹಿಳೆಯರು ಈ ವಿಧದ ಆಘಾತಗಳಿಂದ ಬಳಲುತ್ತಿದ್ದರೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ, ಇದಕ್ಕೆ ಆರೋಗ್ಯದ ಕುರಿತ ಕಾಳಜಿಯಲ್ಲಿ ಸುಧಾರಣೆ ಕಾರಣವಿರಬಹುದು ಎಂದು ಹೇಳುತ್ತದೆ.

ಮೆದುಳಿನ ರಕ್ತಸ್ರಾವು ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು ವಯಸ್ಕರ ಸಾವಿನ ಸಂಖ್ಯೆ ಹಾಗೂ ಅಶಕ್ತತೆಯನ್ನು ಹೆಚ್ಚಿಸುತ್ತದೆ ಎಂದು ಅಮೆರಿಕಾದ ಮಿನ್ನೆಸೊಟ ವಿಶ್ವವಿದ್ಯಾನಿಲಯದ ಅದ್ನಾನ್ ಖುರೇಶಿ ಮತ್ತು ಅವರ ಸಹೋದ್ಯೋಗಿಳು ಹೇಳುತ್ತಾರೆ.

ಹೊಸಮಾದರಿಯ ವಿಶೇಷ ಕಾಳಜಿಯು ಮೆದುಳು ಸ್ರಾವ ಸಮಸ್ಯೆಗೆ ಪರಿಹಾರವಾಗಬಲ್ಲುದು. ಮೆದುಳಿಗೆ ರಕ್ತದ ಹರಿವಿನಲ್ಲಿ ಅಡ್ಡಿಯುಂಟಾಗುವ ವೇಳೆ ಸಂಭವಿಸುವ ಆಘಾತಗಳು ಮೆದುಳಿನ ಟಿಶ್ಯೂವನ್ನು ಕೊಲ್ಲಬಹುದಾಗಿದ್ದು, ಜಗತ್ತಿನಲ್ಲಿ ಸಂಭವಿಸುತ್ತಿರುವ ಅತಿಹೆಚ್ಚು ಸಾವುಗಳು ಮತ್ತು ಶಾಶ್ವತ ಅಶಕ್ತತೆಗೆ ಪ್ರಮುಖ ಕಾರಣ ಇದೆಂದು ಅಧ್ಯಯನ ಹೇಳುತ್ತದೆ.

ವಿಶ್ವಾದ್ಯಂತ ವರ್ಷಂಪ್ರತಿ ಸಂಭವಿಸುವ ಸುಮಾರು 15 ದಶಲಕ್ಷ ಆಘಾತ ಪ್ರಕರಣಗಳಲ್ಲಿ ಸುಮಾರು ಎರಡು ದಶಲಕ್ಷ ಪ್ರಕರಣಗಳು ಮೆದುಳಿನಸ್ರಾವಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆ ಮೆದುಳಿನ ರಕ್ತನಾಳಗಳು ಒಡೆಯುವುದು ಕಾರಣ. ಇದಕ್ಕೆ ಮುಖ್ಯಕಾರಣ ಹೆಚ್ಚಿನ ರಕ್ತದೊತ್ತಡ. ಇದು ರಕ್ತನಾಳಗಳ ಗೋಡೆಗಳನ್ನು ದುರ್ಬಲಗೊಳಿಸುತ್ತದೆ. ಇದು ಬಳಿಕ ಒತ್ತಡದಿಂದಾಗಿ ಸಿಡಿಯುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Share this Story:

Follow Webdunia kannada