Select Your Language

Notifications

webdunia
webdunia
webdunia
webdunia

ವಿಪರೀತ ಆತಂಕ ಉಬ್ಬಸಕ್ಕೆ ನಾಂದಿಯಂತೆ

ವಿಪರೀತ ಆತಂಕ ಉಬ್ಬಸಕ್ಕೆ ನಾಂದಿಯಂತೆ
ನೀವು ಅತಿಶೀಘ್ರವಾಗಿ ಆತಂಕಕ್ಕೊಳಗಾಗುವ ದೌರ್ಬಲ್ಯವನ್ನು ಹೊಂದಿದ್ದೀರಾ? ನಿಮ್ಮ ಉತ್ತರ ಹೌದೆಂದಾದರೆ, ನಿಮ್ಮನ್ನು ನೀವು ನಿಗ್ರಹಿಸಿಕೊಳ್ಳಲೇಬೇಕಾದ ಸಮಯವಿದು. ಇಲ್ಲವಾದರೆ ನಿಮ್ಮ ಈ ಸಮಸ್ಯಗೆ ಉಬ್ಬಸ ರೋಗಕ್ಕೆ ಹಾದಿಯಾಗಬಹುದು.

ಖಿನ್ನತೆಯಿಂದ ಕೂಡಿರುವ ಮಾನಸಿಕ ವ್ಯಾಧಿಯಿಂದ ಬಳಲುತ್ತಿರುವವರು ಶಾಂತವಾಗಿರದಿದ್ದರೆ, ಆಸ್ತಮಾಕ್ಕೀಡಾಗುವ ಛಾನ್ಸ್‌ಗಳು ಮೂರು ಪಟ್ಟು ಹೆಚ್ಚು ಎಂಬುದಾಗಿ ಅಧ್ಯಯನ ಒಂದು ಹೇಳಿದೆ. ಹೈಡಲ್‌ಬರ್ಗ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಅಂಶವನ್ನು ಪತ್ತೆ ಮಾಡಿದ್ದಾರೆ ಎಂಬುದಾಗಿ 'ನ್ಯೂ ಸೈಂಟಿಸ್ಟ್' ಪತ್ರಿಕೆ ವರದಿ ಮಾಡಿದೆ.

ಸಂಶೋಧಕರು ಆಸ್ತಮಾ ಇಲ್ಲದ ನಾಲ್ಕುಸಾವಿರ ಮಂದಿಗೆ ಪ್ರಶ್ನಾವಳಿಗಳನ್ನು ನೀಡಿ ಅವರ ಮಾನಸಿಕ ಉನ್ಮಾದ, ಚಿತ್ತವಿಕಾರ, ಖಿನ್ನತೆ ಹಾಗೂ ಆತಂಕ ಕುರಿತು ಪೃವೃತ್ತಿಗಳ ಕುರಿತು ವಿಶ್ಲೇಷಣೆ ನಡೆಸಿದ್ದರು.

ಒಂಬತ್ತು ವರ್ಷಗಳ ಬಳಿಕ ಅಡ್ರಿಯನ್ ಲೋಯೆರ್‌ಬ್ರೂಕ್ಸ್ ನೇತೃ್ತ್ವದ ಸಂಶೋಧಕ ತಂಡವು ಅಧ್ಯಯನಕ್ಕೆ ಬಳಸಿದ್ದ ವ್ಯಕ್ತಿಗಳ ಕುರಿತು ಮರುವಿಶ್ಲೇಷಣೆ ನಡಿಸಿತ್ತು. ಹೆಚ್ಚಿನ ಮಟ್ಟದಲ್ಲಿ ಚಿತ್ತವಿಕಾರ ಹೊಂದಿದ್ದವರಲ್ಲಿ ಮ‌ೂರುಪಟ್ಟು ಹೆಚ್ಚಾಗಿ ಆಸ್ತಮಾ ವೃದ್ಧಿಯಾಗಿತ್ತು.

ತೀವ್ರವಾದ ಒತ್ತಡವು ಹಾರ್ಮೋನ್ ಮಟ್ಟವನ್ನು ಏರುಪೇರುಂಟು ಮಾಡುತ್ತದೆ ಎಂಬುದು ಪ್ರಯೋಗ ಪಶುಗಳ ಮೇಲಿನ ಅಧ್ಯಯನ ಹೇಳಿವೆ. ಹಾಗಾಗಿ ಮಾನಸಿಕ ಲಕ್ಷಣಗಳು ಇಂತಹ ಪರಿಣಾಮಗಳಿಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಿಸುವ ಲೋಯೆರ್‌ಬ್ರೂಕ್ಸ್, ಇಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆತಂಕ ತಗ್ಗಿಸುವ ಚಿಕಿತ್ಸೆಯು ಆಸ್ತಮಾ ವೃದ್ಧಿಯ ಅಪಾಯವನ್ನು ಕಡಿಮೆಗೊಳಿಸಬಹುದು ಎಂದು ಎಂದು ಹೇಳಿದ್ದಾರೆ.

Share this Story:

Follow Webdunia kannada