Select Your Language

Notifications

webdunia
webdunia
webdunia
webdunia

ಕೋಪ ಹೆಚ್ಚಾದರೆ ಹೃದಯಾಘಾತ!

ಕೋಪ ಹೆಚ್ಚಾದರೆ ಹೃದಯಾಘಾತ!
ರಸ್ತೆಯಲ್ಲೋ, ಪಾರ್ಟಿಯಲ್ಲೋ ಅಥವಾ ಇನ್ನಾವುದೇ ಸಂದರ್ಭಗಳಲ್ಲಿ ಯಾರಾದರೂ ಏನೋ ಮಾಡಿದರೆಂದು ಕೋಪೋದ್ರಿಕ್ತರಾಗಿ ಆವೇಶಕ್ಕೊಳಗಾಗುವವರೇ ನೀವಾಗಿದ್ದರೆ ಜಾಗ್ರತೆ!

ವಾಷಿಂಗ್ಟನ್‌ನ ಯೇಲ್ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧನೆಯ ಪ್ರಕಾರ, ಇಂತಹ ಆವೇಶಗಳೇ ತಕ್ಷಣದ ಹೃದಯ ಸ್ತಂಭನದಂಥ ಅಪಾಯಗಳನ್ನೂ ತಂದೊಡ್ಡಬಲ್ಲುದು. ಕೇವಲ ಅಮೆರಿಕವೊಂದರಲ್ಲೇ ಇಂತಹ ಆವೇಶದಿಂದಾಗಿಯೇ ವರ್ಷಕ್ಕೆ ನಾಲ್ಕು ಲಕ್ಷ ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ.

ಶೀಘ್ರ ಆವೇಶಕ್ಕೆ ಒಳಗಾಗುವುದರಿಂದ ಅರಿಥ್ಮಿಯಾಸ್ ಹಂತಕ್ಕೆ ಹೃದಯ ಬಡಿತ ತಲುಪುತ್ತದೆ. ಅಂದರೆ, ಸಾಮಾನ್ಯ ಹೃದಯ ಬಡಿತವೇ ಏರುಪೇರಾಗಿಬಿಡುವುದು. ಹೃದಯ ಸರಿಯಾದ ಕ್ರಮದಲ್ಲಿ ಬಡಿಯದೆ ತಾಳ ತಪ್ಪಿದಾಗ ಸುಲಭವಾಗಿ ರಕ್ತವ್ನನು ಪಂಪ್ ಮಾಡುವ ಕ್ರಮದ್ಲಲೂ ವ್ಯತ್ಯಾಸವಾಗಿ ರಕ್ತಪೂರಣದ ವ್ಯತ್ಯಾಸದಿಂದ ಹೃದಯಾಘಾತಕ್ಕೆ ಒಳಗಾಗುತ್ತದೆ ಎನ್ನುತ್ತಾರೆ ಈ ಸಂಶೋಧನಾ ತಂಡದ ನಾಯಕತ್ವ ವಹಿಸಿದ ರಛೆಲ್ ಲ್ಯಾಂಪರ್ಟ್.

ಇಂಪ್ಲಾಂಟೆಬಲ್ ಕಾರ್ಡಿಯೋವರ್ಟರ್ ಡೆಫಿಬ್ರಿಲೇಟರ್ಸ್‌ (ಐಸಿಡಿ) ಗಳನ್ನು ಅಳವಡಿಸಿದ ಹೃದ್ರೋಗಿಗಳ ಮೇಲೆ ಮೂರು ತಿಂಗಳ ಕಾಲ ಈ ಸಂಶೋಧನಾ ತಂಡ ಅಧ್ಯಯನ ನಡೆಸಿದೆ. ಐಸಿಡಿ ಅಳವಡಿಸಿದ ಮೂರು ತಿಂಗಳ ನಂತರ ಈ ರೋಗಿಗಳಿಗೆ ಒತ್ತಡದ ಪರೀಕ್ಷೆಗಳನ್ನು ಮಾಡುವ ಮೂಲಕವೂ ಸಂಶೋಧನೆ ನಡೆಸಲಾಗಿದೆ. ಲ್ಯಾಂಪರ್ಟ್ ಅವರು ತಮ್ಮ ಹಿಂದಿನ ಸಂಶೋಧನೆಗಳನ್ನೂ ಈ ಸಂಶೋಧನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಭೂಕಂಪ ಅಥವಾ ಇನ್ನಾವುದೇ ಪ್ರಾಕೃತಿಕ ವಿಕೋಪಗಳ ಸಂದರ್ಭವೂ ಆವೇಶ, ಮಾನಸಿಕ ಉದ್ವೇಗಕ್ಕೆ ಒಳಗಾಗುವುದರಿಂದ ತಕ್ಷಣ ಸಾವು ಬರಬಹುದು.

ಆದರೆ, ಒತ್ತಡಕ್ಕೆ ಒಳಗಾಗಿ ತಕ್ಷಣ ಹೆಚ್ಚಾಗುವ ಕೋಪವನ್ನು ಕಡಿಮೆ ಮಾಡಲು ಬೇರೆ ಔಷಧೀಯ ಮಾರ್ಗಗಳಿವೆಯೇ ಎಂಬುದರ ಬಗ್ಗೆ ಇನ್ನೂ ಸಂಶೋಧನೆ ನಡೆಸಬೇಕಾಗಿದೆ. ಈ ಮಾರ್ಗ ಇದ್ದರೆ ಅರಿಥ್ಮಿಯಾಸ್‌ಗೆ ಒಳಗಾಗುವುದನ್ನು ತಪ್ಪಿಸುವ ಮೂಲಕ ಹೃದಯಾಘಾತಕ್ಕೆ ಒಳಗಾಗದಂತೆ ಕಾಪಾಡಬಹುದು ಎನ್ನುತ್ತಾರೆ ಲ್ಯಾಂಪರ್ಟ್.

Share this Story:

Follow Webdunia kannada