Select Your Language

Notifications

webdunia
webdunia
webdunia
webdunia

ಪುರುಷರು ಚೀಸ್, ಮಹಿಳೆಯರು ಈರುಳ್ಳಿ!

ಪುರುಷರು ಚೀಸ್, ಮಹಿಳೆಯರು ಈರುಳ್ಳಿ!
, ಗುರುವಾರ, 29 ಜನವರಿ 2009 (20:02 IST)
ಮಹಿಳೆಯರು ಆಕರ್ಷಣೀಯರು ಎಂಬ ವಿಚಾರದಲ್ಲಿ ವಾದವಿಲ್ಲ ತಾನೆ. ಆದರೆ ಅವರು ಪುರುಷರಿಗಿಂತ ಹೆಚ್ಚು ನಾತ ಬೀರುತ್ತಾರೆ ಎಂದು ಅಧ್ಯಯನ ಒಂದು ಹೇಳಿದೆ.

ಮಹಿಳೆಯರ ಸಹಜ ಸುವಾಸನೆ ಪುರುಷರಲ್ಲಿ ಪುಳಕ ಹುಟ್ಟಿಸುತ್ತದೆ ಎಂದೂ ಹೇಳಲಾಗುತ್ತದೆ. ಆದರೆ, ಇದೀಗ ಅಧ್ಯಯನ ತಂಡ ಒಂದು ಪುರಷರು ಚೀಸ್ ಪರಿಮಳ ಬೀರಿದರೆ, ಮಹಿಳೆಯರು ಈರುಳ್ಳಿ ಪರಿಮಳ ಹೊರಸೂಸುತ್ತಾರೆ ಎಂದು ಪತ್ತೆ ಹಚ್ಚಿದೆ.

ಸ್ವಿಸ್ ತಂಡವೊಂದು 24 ಪುರುಷರು ಮತ್ತು 25 ಮಹಿಳೆಯರ ಕಂಕುಳಡಿ ಬೆವರ ಸ್ಯಾಂಪಲ್‌ಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿತ್ತು. ಇವರು ಹಬೆಕೊಠಡಿಯಲ್ಲಿ ಅಥವಾ ವ್ಯಾಯಾಮ ಬೈಕ್‌ನಲ್ಲಿ 15 ನಿಮಿಷ ಕಳೆದ ಬಳಿಕದ ಬೆವರಿನ ಮಾದರಿಯನ್ನು ಸಂಗ್ರಹಿಸಲಾಗಿತ್ತು.

ಪುರುಷರು ಚೀಸ್ ವಾಸನೆ ಹೊರಸೂಸಿದರೆ, ಮಹಿಳೆಯರು ದ್ರಾಕ್ಷಿಹಣ್ಣು ಅಥವಾ ಈರುಳ್ಳಿಯ ವಾಸನೆ ಬೀರುತ್ತಾರೆ ಎಂದು ಫರ್ಮೆನಿಚ್‌ನ ಕ್ರಿಶ್ಚಿಯನ್ ಸ್ಟಾರ್ಕನ್‌ಮನ್ ಹೇಳಿದ್ದಾರೆ. ಆಹಾರ ಸೌಂದರ್ಯ ಸಾಧನಗಳಿಗೆ ಸುವಾಸನೆಯ ಫ್ಲೇವರ್‌ಗಳ ಸಂಶೋಧನಾ ಸಂಸ್ಥೆ ಫರ್ಮೆನಿಚ್.

ವಿಜ್ಞಾನಿಗಳು ನೇಮಿಸಿರುವ ಸ್ವತಂತ್ರ ವಾಸನಾ ಗ್ರಹಿಕರು ಹೆಂಗಸರ ವಾಸನೆ ಹೆಚ್ಚು ಅಸಹ್ಯ ಎಂಬ ಅಭಿಪ್ರಾಯ ಸೂಚಿಸಿದ್ದಾರೆ. ಮಹಿಳೆಯರ ಬೆವರಿನಲ್ಲಿ ದುರ್ವಾಸನೆಸೂಸುವ ಸಲ್ಫರ್ ಒಂದು ಮಿಲಿಮೀಟರ್‌ಗೆ 5 ಮಿಲಿಗ್ರಾಂ ಇದ್ದರೆ ಪುರುಷರ ಬೆವರಿನಲ್ಲಿ ಇದು ಕೇವಲ 0.5 ಮಾತ್ರ ಇರುತ್ತದೆ ಎಂದು ನ್ಯೂ ಸೈಂಟಿಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೇಳಿದೆ.

ಇದೀಗ ಪುರುಷ ಮತ್ತು ಮಹಿಳೆಯರ ದೇಹದ ವಾಸನೆ ಪತ್ತೆಯು ಹೊಸ ನಮೂನೆಯ ಡಿಯೊಡ್ರೆಂಟ್‌ಗಳ ವಿನ್ಯಾಸಕ್ಕೆ ಸಹಾಯವಾಗಬಹುದು.

ಪುರುಷರ ಕಂಕುಳ ಬೆವರಿನ ವಾಸನೆಯಿಂದ ಮಹಿಳೆ ಆಕರ್ಷಿತಳಾಗುತ್ತಾಳೆ ಎಂದು ಈ ಹಿಂದೆ ವಿಜ್ಞಾನಿಗಳು ಹೇಳಿದ್ದರು.

Share this Story:

Follow Webdunia kannada