Select Your Language

Notifications

webdunia
webdunia
webdunia
webdunia

ಕಲುಷಿತ ನೀರು ಪುಂಸತ್ವಕ್ಕೆ ಕುತ್ತು, ಜೋಕೆ!

ಕಲುಷಿತ ನೀರು ಪುಂಸತ್ವಕ್ಕೆ ಕುತ್ತು, ಜೋಕೆ!
, ಸೋಮವಾರ, 19 ಜನವರಿ 2009 (16:20 IST)
ಕಲುಷಿತ ನೀರು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆಲ್ಲರಿಗೆ ಗೊತ್ತು. ಕಲುಷಿತ ನೀರು ಸೇವನೆಯು ಪುಂಸತ್ವಕ್ಕೇ ಕುತ್ತುಂಟು ಮಾಡುತ್ತದೆ ಎಂದು ವರದಿಯೊಂದು ಹೇಳುತ್ತದೆ.

ಕಲುಷಿತ ನೀರು ಮತ್ತು ಪುರುಷರ ನಪುಂಸತ್ವಕ್ಕೆ ಹೆಚ್ಚಿನ ಸಂಪರ್ಕವಿದೆ ಎಂಬುದಾಗಿ ಹೊಸ ಸಂಶೋಧನೆಯೊಂದು ಹೇಳಿದೆ. ಬ್ರೂನೆಲ್ ವಿಶ್ವವಿದ್ಯಾನಿಲಯದ ಅಧ್ಯಯನ ತಂಡವು ಅಂಡ್ರೆಜೆನ್‌ಗಳ ವಿರೋಧಿಗಳಾಗಿ ಕಾರ್ಯ ನಿರ್ವಹಿಸುವ ರಾಸಾಯನಿಕಗಳ ಸಮೂಹವನ್ನು ಪತ್ತೆ ಮಾಡಿದೆ.

ಈ ಅಂಶಗಳು ಗಂಡಸರ ಟೆಸ್ಟೋಸ್ಟೇರೋನ್ ಹಾರ್ಮೋನ್ ಚಟುವಟಿಕೆಯ ಮೇಲೆ ಪರಿಣಾಮ ಬೀರಿ ಫಲವತ್ತತೆಯನ್ನು ಕುಂಠಿತಗೊಳಿಸುತ್ತದೆ. ಮಾದಕ ದ್ರವ್ಯಗಳು, ಕ್ಯಾನ್ಸರ್ ಚಿಕಿತ್ಸೆಯ ಔಷಧಿಗಳಲ್ಲಿ ಮತ್ತು ಕೃಷಿಗೆ ಬಳಸಲ್ಪಡುವ ರಸಗೊಬ್ಬರಗಳಲ್ಲಿ ಬಳಸಲ್ಪಡುವ ರಾಸಾಯನಿಕಗಳು ಇವುಗಳಲ್ಲಿ ಸೇರಿವೆ.

ಜಲಚರಗಳಿಗೆ ಸಂಬಂಧಿಸಿದಂತೆ ಈ ರಾಸಾಯನಿಕಗಳು ಗಂಡು ಮೀನು ಹೆಣ್ಣು ಮೀನಾಗಿ ಪರಿವರ್ತನೆ ಹೊಂದುವ ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ.

ಈಸ್ಟ್ರೋಜೆನ್‌ಗಳು ಹಾಗೂ ಈಸ್ಟ್ರೋಜೆನ್‌ಗಳನ್ನು ಅನುಕರಿಸುವ ರಾಸಾಯನಿಕಗಳು ಗಂಡು ಮೀನಿನಲ್ಲಿ ಹೆಣ್ಣುಗುಣಗಳನ್ನು ಹೇಗೆ ಹೊಂದುತ್ತವೆ ಎಂಬುದನ್ನು ಬ್ರೂನರ್ ಮತ್ತು ಎಕ್ಸ್‌ಟರ್ ವಿಶ್ವವಿದ್ಯಾನಿಲಯದ ಈ ಹಿಂದಿನ ಸಂಶೋಧನೆಗಳು ಹೇಳಿದ್ದವು.

ಚರಂಡಿ ಮೂಲಕ ಕೆಲವು ಔದ್ಯಮಿಕ ರಾಸಾಯನಿಕಗಳು ಮತ್ತು ಗರ್ಭನಿರೋಧಕ ಮಾತ್ರೆಗಳು ನದಿಯನ್ನು ಸೇರುತ್ತದೆ. ಇವುಗಳು ಮೀನುಗಳ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಪ್ರಕರಣಗಳಲ್ಲಿ ಗಂಡು ಮೀನುಗಳು ಹೆಣ್ಣು ಮೀನುಗಳಾಗಿ ಪರಿವರ್ತಿತವಾಗುತ್ತವೆ ಎಂದು ವರದಿ ಹೇಳುತ್ತದೆ.

ಇಂತಹ ಪ್ರವೃತ್ತಿಯು ಮನುಷ್ಯರಲ್ಲೂ ಕಂಡು ಬರುತ್ತಿದ್ದು, ಪುರುಷರಲ್ಲೂ ಫಲವತ್ತತೆ ಕುಂಠಿತಗೊಳ್ಳುತ್ತಿದೆ ಎಂದು ಹೇಳಲಾಗಿದೆ.

ಇಂಗ್ಲೆಂಡಿನ ವಿವಿಧ ಭಾಗದ 30 ನದಿಗಳ ಸಾವಿರಕ್ಕೂ ಅಧಿಕ ಮೀನುಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು, ಮೀನುಗಳ ಮೇಲೆ ರಾಸಾಯನಿಕಗಳು ಪರಿಣಾಮ ಬೀರುತ್ತಿರುವುದು ಪತ್ತೆಯಾಗಿದೆ ಎಂದು ಪರಿಸರ ಆರೋಗ್ಯ ಜರ್ನಲ್ ತಿಳಿಸಿದೆ.

Share this Story:

Follow Webdunia kannada