Select Your Language

Notifications

webdunia
webdunia
webdunia
webdunia

ಏಡ್ಸ್, ಕ್ಯಾನ್ಸರ್ ರೋಗಿಗಳಿಗೆ ಶುಭಸುದ್ದಿ ಒಂದೈತೆ

ಏಡ್ಸ್, ಕ್ಯಾನ್ಸರ್ ರೋಗಿಗಳಿಗೆ ಶುಭಸುದ್ದಿ ಒಂದೈತೆ
ಮಾನವ ದೇಹದ ಪ್ರತಿರೋಧ ಶಕ್ತಿಯನ್ನು ಸಕ್ರಿಯವಾಗಿಸುವ ಬಿಳಿರಕ್ತಕಣಗಳನ್ನು ತಡೆಯಯುವಂತಹ ಯಾಂತ್ರಿಕತೆಯನ್ನು ಕೆನಡಾದ ವಿಜ್ಞಾನಿಯೊಬ್ಬರು ಕಂಡು ಹಿಡಿದಿದ್ದು, ಎಚ್ಐವಿ ಮತ್ತು ಕ್ಯಾನ್ಸರ್ ರೋಗಿಗಳಿಗೆ ಶುಭಸಮಾಚಾರ ಕೇಳಿಬಂದಿದೆ.

ಸಿಡಿ4+ ಎಂಬ ಈ ಬಿಳಿ ರಕ್ತಕಣಗಳು ಕಿಮೋಥೆರಪಿ ಹಾಗೂ ಅಸ್ಥಿಮಜ್ಜೆ ಬದಲಾವಣೆವೇಳೆ ದೊಡ್ಡ ಸಂಖ್ಯೆಯಲ್ಲಿ ನಾಶವಾಗುತ್ತದೆ. ಲ್ಯೂಕೆಮಿಯಾ ಮತ್ತು ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಈ ಚಿಕಿತ್ಸೆ ಅತ್ಯವಶ್ಯವಾಗಿದೆ. ಬಿಳಿರಕ್ತ ಕಣಗಳ ನಾಶವು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದಾಗಿ ರೋಗಿಯು ಹಲವಾರು ಸೋಂಕುಗಳಿಗೆ ತುತ್ತಾಗುತ್ತಾನೆ.

ಬಿಳಿರಕ್ತಕಣಗಳ ಮರುಸೃಷ್ಟಿಗೆ ಹಲವಾರು ವರ್ಷಗಳು ಬೇಕಾಗುತ್ತದೆ. ಆದರೆ ಈ ಬಿಳಿ ರಕ್ತಕಣಗಳ ನಾಶಕ್ಕೆ ಕಾರಣವಾಗುವ ಯಂತ್ರವ್ಯವಸ್ಥೆಯನ್ನು ಕಂಡುಹಿಡಿದಿರುವುದು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವಂತಹ ರೋಗವನ್ನು ಹೊಂದಿರುವವರಲ್ಲಿ ಆಶಾಕಿರಣವನ್ನು ಮೂಡಿಸಿದೆ.

ಮಾಂಟ್ರಿಯಲ್‌ನ ಮೈಸೊನ್ವೆ-ರೋಸ್ಮೌಂಟ್ ಆಸ್ಪತ್ರೆಯ ಮಾರ್ಟಿನ್ ಗುಯ್ಮೌಂಡ್ ಅವರು ಈ ಅಪರೂಪದ ಅಧ್ಯಯನ ನಡೆಸಿದ್ದಾರೆ.

ಮಾರ್ಟಿನ್ ಅವರ ಈ ಅಧ್ಯಯನವು ಬಿಳಿ ರಕ್ತಕಣಗಳ ವಿಭಜನೀಯ ಸಾಮರ್ಥ್ಯ ಮೇಲಿನ ನಕಾರಾತ್ಮಕ ನಿಯಂತ್ರಣ ಕುಣಿಕೆಯನ್ನು ಪತ್ತೆ ಮಾಡಿದೆ ಎಂದು ವಿಶ್ವವಿದ್ಯಾನಿಲಯದ ಹೇಳಿಕೆ ತಿಳಿಸಿದೆ.

ಈ ನಿಯಂತ್ರಣ ಕುಣಿಕೆಯ ಮೇಲೆ ಕಾರ್ಯನಿರ್ವಹಿಸುವ ಮೂಲಕ ಬಿಳಿರಕ್ತಕಣಗಳ ಉತ್ಪತ್ತಿಯನ್ನು ಸೃಷ್ಟಿಸಬಹುದಾಗಿದ್ದು ಇದು ನಿರೋಧಕ ಶಕ್ತಿಯನ್ನು ಪುನಸ್ಥಾಪಿಸುತ್ತದೆ ಎಂಬುದಾಗಿ ಹೇಳಿಕೆಯಲ್ಲಿ ಮಾರ್ಟಿನ್ ಅವರನ್ನು ಉಲ್ಲೇಖಿಸಲಾಗಿದೆ.

Share this Story:

Follow Webdunia kannada