Select Your Language

Notifications

webdunia
webdunia
webdunia
webdunia

ಶಾಲಾ ವಯಸ್ಸಿನ ಮಕ್ಕಳಲ್ಲಿ ಅನಾರೋಗ್ಯಕರ ತಿನ್ನೋ ಹವ್ಯಾಸ

ಶಾಲಾ ವಯಸ್ಸಿನ ಮಕ್ಕಳಲ್ಲಿ ಅನಾರೋಗ್ಯಕರ ತಿನ್ನೋ ಹವ್ಯಾಸ
ಶಾಲಾಮಕ್ಕಳಲ್ಲಿನ ಅನಾರೋಗ್ಯಕರ ತಿನ್ನುವ ಹವ್ಯಾಸವು ಮಕ್ಕಳಲ್ಲಿ ಸ್ಥೂಲಕಾಯದ ಸಮಸ್ಯೆಗೆ ಹಾದಿಯಾಗಬಹುದು.

ಶಾಲೆಗೆ ತೆರಳುವ ಮುಂಚಿನ ವಯಸ್ಸಿನ (ಎರಡರಿಂದ ಐದರ ಹರೆಯದ ತನಕ) ಮಕ್ಕಳಲ್ಲಿ ಉತ್ತಮ ಊಟದ ಹವ್ಯಾಸ ಹಾಗೂ ದೈಹಿಕ ಚಟುವಟಿಕೆಗಳು ಇರುತ್ತವೆ. ಆದರೆ ಶಾಲೆಗೆ ತೆರಳುವ ಮಕ್ಕಳಲ್ಲಿ (ಆರರಿಂದ 12ರ ಹರೆಯದ) ಮಕ್ಕಳ ಈ ಹವ್ಯಾಸ ಸೂಕ್ತವಾಗಿಲ್ಲ ಎಂದು ಹೆತ್ತವರು ಅಲತ್ತುಕೊಳ್ಳುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

ಸುಮಾರು 174 ತಾಯಂದಿರ ಸಮೀಕ್ಷೆಯಲ್ಲಿ ತಿಳಿದು ಬಂದ ವಿಚಾರವೆಂದರೆ ಶಾಲಾ ವಯಸ್ಸಿನ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಕೊಬ್ಬಿನಂಶದ ಪಾನೀಯಗಳಿಗಿಂತ ಹೆಚ್ಚು ಸಿಹಿ ಪಾನೀಯಗಳನ್ನು ಸೇವಿಸುತ್ತಾರೆ. ಅಂತೆಯೇ ಅಧಿಕ ಸಿಹಿ ಮತ್ತು ಉಪ್ಪಿನ ಕುರುಕು ತಿಂಡಿಗಳನ್ನು ಹೆಚ್ಚು ತಿನ್ನುತ್ತಾರಂತೆ.

ಅಲ್ಲದೆ ಈ ವಯಸ್ಸಿನ ಮಕ್ಕಳು ಹೆಚ್ಚಾಗಿ ತಮ್ಮ ಹೆತ್ತವರೊಂದಿಗೆ ಊಟ ಮಾಡದ ಕಾರಣ ಅವರಿಗೆ ಆರೋಗ್ಯಕರ ಆಹಾರ ಆಯ್ಕೆಯ ಕೊರತೆಯು ಕಾಡುತ್ತದೆ ಎಂಬುದು ತಾಯಂದಿರ ಚಿಂತೆ.

ಹಿರಿಯ ವಯಸ್ಸಿನ ಮಕ್ಕಳಿಗೆ ಹೋಲಿಸಿದರೆ ಕಿರಿಯ ವಯಸ್ಸಿನ ಮಕ್ಕಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತಾರೆ. ಅಲ್ಲದೆ ಈ ಮಕ್ಕಳು ತಮ್ಮ ಬಿಡುವಿನ ವೇಳೆಯಲ್ಲಿ ಹೆಚ್ಚಾಗಿ ಟಿವಿ ವೀಕ್ಷಣೆಯಲ್ಲಿ ತೊಡಗಿರುತ್ತಾರೆ. ಇದರಿಂದಾಗಿ ಇಂತಹ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ತಲೆದೋರುತ್ತದೆ ಎಂಬುದಾಗಿ ಅಮೆರಿಕಾ ವಿಶ್ವವಿದ್ಯಾನಿಲಯದ ಅಧ್ಯಯನ ಹೇಳುತ್ತದೆ.

Share this Story:

Follow Webdunia kannada