Webdunia - Bharat's app for daily news and videos

Install App

ರಾಜ್ಯ ಸಾಹಿತ್ಯ ಅಕಾಡೆಮಿ ದೇಶದಲ್ಲಿಯೇ ಮಾದರಿ: ಕೃಷ್ಣಯ್ಯ

Webdunia
ಸೋಮವಾರ, 6 ಸೆಪ್ಟಂಬರ್ 2010 (18:00 IST)
ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕನ್ನಡ ಸಾಹಿತ್ಯದ ಕೆಲಸ ಮಾಡುವಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ದೇಶದಲ್ಲಿಯೇ ಮಾದರಿ ಎನಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಅಕಾಡೆಮಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಅವರು, ಕನ್ನಡದ ಶ್ರೇಷ್ಠ ಕವಿಗಳ ಕವಿತೆಗಳನ್ನು ವೆಬ್‌ಸೈಟ್‌ಗಳಲ್ಲಿ ಹಾಕಲಾಗಿದೆ. ಕವಿತೆ ಓದುವ ಬಗ್ಗೆಯೂ ಮಾದರಿ ನೀಡಲಾಗಿದೆ ಎಂದರು.

ಕನ್ನಡ ಸಾಹಿತ್ಯದ 125 ಲೇಖಕರ ಬಗ್ಗೆ ಆರು ಪುಟಗಳಷ್ಟು ಪರಿಚಯ ಇರುವ 'ಸಾಲು ದೀಪಗಳು' ಪುಸ್ತಕ ಪ್ರಕಟಿಸಲು ಸಿದ್ಧತೆ ನಡೆದಿದೆ. ಜತೆಗೆ ಎಲ್ಲಾ ಲೇಖಕರ ಬಗ್ಗೆ ಮಾಹಿತಿಯನ್ನು ಕಂಪ್ಯೂಟರ್ ಇ ಬುಕ್‌ನಲ್ಲಿ ಅನಾವರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇ ಬುಕ್‌ನಲ್ಲಿ ಬಿ.ಎಸ್.ರೈಸ್, ಕಿಟೆಲ್ ಅವರಿಂದ ಹಿಡಿದು, ಇತ್ತೀಚೆಗೆ ಪ್ರಶಸ್ತಿ ಪಡೆದ ಬೋಳುವಾರು ಮೊಹಮದ್ ಕುಂಜಿ ತನಕ ಮಾಹಿತಿ ನೀಡಲಾಗಿದೆ ಎಂದರು.

ಶತಮಾನೋತ್ಸವ ನೆನಪು ಕಾರ್ಯಕ್ರಮದಡಿ ನಾನಾ ಭಾಗದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಕನ್ನಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಬಗ್ಗೆಯೂ ತಿಳಿಸಿಕೊಡುವ, ಸಾಹಿತ್ಯ ರೂಪ ತಿಳಿಸುವ 120 ಪುಟಗಳ ಪುಸ್ತಕಗಳನ್ನು ಹೊರತರಲು ಪ್ರಯತ್ನ ನಡೆದಿದೆ.

ಸಾಹಿತ್ಯದಲ್ಲಿ ದೇಶೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಮೀಮಾಂಸೆ ಮಾತ್ರ ಇತ್ತು. ಈಗ ಜೈನ, ಬೌದ್ಧ, ಆಫ್ರಿಕಾದ ಸಾಹಿತ್ಯ ಮೀಮಾಂಸೆಯೂ ಲಭ್ಯವಿದೆ. ಜಗತ್ತಿನ ಶ್ರೇಷ್ಠ ಕಾದಂಬರಿಗಳ ಬಗ್ಗೆಯೂ ಕನ್ನಡದಲ್ಲಿ ಮಾಹಿತಿ ನೀಡುವ ಕೆಲಸವೂ ಆಗುತ್ತಿದೆ ಎಂದು ಹೇಳಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಟ್ರಂಪ್ ಹೇಳಿದ್ದಕ್ಕೇ ಕದನ ವಿರಾಮಕ್ಕೆ ಒಪ್ಪಿದ್ದೇಕೆ, ಶುರುವಾಯ್ತು ಆಕ್ರೋಶ

Karnataka Weather: ಬಿಸಿಲಿನಿಂದ ತತ್ತರಿಸಿದ್ದವರಿಗೆ ಗುಡ್ ನ್ಯೂಸ್

India Pakistan: ಪಾಕಿಸ್ತಾನದ ಮುಂದೆ ಭಾರತ ಏನೆಲ್ಲಾ ಬೇಡಿಕೆಯಿಡಬಹುದು

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Show comments