Select Your Language

Notifications

webdunia
webdunia
webdunia
webdunia

ದಾವಣಗೆರೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ

ದಾವಣಗೆರೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ
, ಶುಕ್ರವಾರ, 4 ಏಪ್ರಿಲ್ 2014 (17:03 IST)
PR
PR
ದಾವಣಗೆರೆಯಲ್ಲಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳಿವೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ 10 ಲೋಕಸಭಾ ಚುನಾವಣೆಗಳಲ್ಲಿ ಎರಡು ಸಮುದಾಯದ ಅಭ್ಯರ್ಥಿಗಳು ಮಾತ್ರ ಗೆಲುವಿನ ರುಚಿಯನ್ನು ಕಂಡಿದ್ದಾರೆ. ಲಿಂಗಾಯತ ಸಮುದಾಯದ ಅಭ್ಯರ್ಥಿಗಳು ದಾಖಲೆಯ 7 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ..ಕುರುಬ ಜನಾಂಗದ ಅಭ್ಯರ್ಥಿಗಳು ಮೂರು ಬಾರಿ ಗೆದ್ದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚನ್ನಯ್ಯ ಒಡೆಯರ್ ಅವರು 1984, 1989 ಮತ್ತು 1991ರ ಚುನಾವಣೆಗಳಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದಾರೆ.

ಲಿಂಗಾಯತ ಸಮುದಾಯದ 4.25 ಲಕ್ಷ ಮತದಾರರಿದ್ದು, ಕುರುಬ ಸಮುದಾಯದ ಮತದಾರರು 2.60 ಲಕ್ಷ, ಮುಸ್ಲಿಮರು 1.80 ಲಕ್ಷ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯ 1.75 ಲಕ್ಷ ಮತದಾರರಿದ್ದಾರೆ. ಕಳೆದ ಬಾರಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ 433446 ಮತಗಳನ್ನು ಗಳಿಸುವ ಮೂಲಕ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ 421423 ಮತಗಳನ್ನು ಪಡೆದು ಕಡಿಮೆ ಅಂತರದಿಂದ ಸೋತಿದ್ದರು.

webdunia
PR
PR
ಉದ್ಯಮಿ ಶಾಮನೂರು ಶಿವಶಂಕರಪ್ಪನವರ ಪುತ್ರರಾದ ಮಲ್ಲಿಕಾರ್ಜುನ್ ಅವರಿಗೆ ತಂದೆಯ ವರ್ಚಸ್ಸು ಚುನಾವಣೆಯನ್ನು ಗೆಲ್ಲಿಸಿಕೊಡುತ್ತದೆಯೇ ಎಂದು ಕಾದುನೋಡಬೇಕಾಗಿದೆ. ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿರುವುದು ಸಿದ್ದೇಶ್ವರ ಅವರಿಗೆ ಮೈನಸ್ ಪಾಯಿಂಟ್ ಆಗಿದೆ. ಲಿಂಗಾಯತ ಸಮುದಾಯದ ಮತ ವಿಭಜನೆಯಾಗುತ್ತದೆಯೆಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದ್ದರಿಂದ ನಿರಾಸೆಗೊಂಡು ಮಹಿಮಾ ಪಟೇಲ್ ಜೆಡಿಎಸ್ ಸೇರಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ದಾವಣಗೆರೆಯನ್ನು ಜಿಲ್ಲೆಯಾಗಿ ಘೋಷಿಸಿದ್ದು ಅವರ ತಂದೆ. ಈ ಋಣವನ್ನು ತೀರಿಸಿ ಎಂದು ಅವರ ಅನುಯಾಯಿಗಳು ಮತಯಾಚಿಸಿದ್ದಾರೆ.

ಇನ್ನು ಬಿಜೆಪಿ ಸಿದ್ದೇಶ್ವರ ಅವರಿಗೆ ಪ್ಲಸ್ ಪಾಯಿಂಟ್ ಮೋದಿ ಅಲೆ ದೇಶಾದ್ಯಂತ ವ್ಯಾಪಿಸಿರುವುದು. ಅಲ್ಲದೇ ಅವರು 2004 ಮತ್ತು 2009ರ ಚುನಾವಣೆಗಳಲ್ಲಿ ಜಯಗಳಿಸಿರುವುದು ಅವರಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಬಹುದು. ಈ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿಯಾಗಿ ಬಸವರಾಜ್, ಬಿಎಸ್‌ಪಿ ಅಭ್ಯರ್ಥಿಯಾಗಿ ಪರಶುರಾಮ ಕೋಟೆಮಲ್ಲೂರು ಕಣಕ್ಕಿಳಿದಿದ್ದಾರೆ.

Share this Story:

Follow Webdunia kannada