Select Your Language

Notifications

webdunia
webdunia
webdunia
webdunia

ಕಾದಿಹಳು ಬರಗೂರರ 'ಶಬರಿ'!

ಕಾದಿಹಳು ಬರಗೂರರ 'ಶಬರಿ'!
MOKSHA
ಶಬರಿ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದು ಡಾ.ಬರಗೂರು ರಾಮಚಂದ್ರಪ್ಪನವರ ಕಾದಂಬರಿಯಾಧಾರಿತ ಚಿತ್ರ. ಈ ಕಾಲದ ಶಬರಿಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರ ಶಬರಿಯನ್ನು ಹೊಸ ನೆಲೆಯಲ್ಲಿ ವ್ಯಾಖ್ಯಾನಿಸುತ್ತೆ ಎನ್ನುತ್ತಾರೆ ನಿರ್ದೇಶಕ ಬರಗೂರು.

ಕಾಯುವುದು ಎಂದರೆ ಕುದಿಯುವುದು ಮತ್ತು ನಿರೀಕ್ಷಿಸುವುದು ಎಂಬ ಅರ್ಥದ ನೆಲೆಯಲ್ಲಿ, ಬದಲಾವಣೆಗಾಗಿ ಕಾಯುವ ಬುಡಕಟ್ಟನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ನೈಜತೆ ಮತ್ತು ಸಾಂಕೇತಿಕತೆಗೆ ಪ್ರಾಮುಖ್ಯತೆ ನೀಡಲಾಗಿದೆ ಎನ್ನುವುದು ಅವರ ಅನಿಸಿಕೆ.

ಬುಡಕಟ್ಟಿನ ಹೆಣ್ಣು ಮಕ್ಕಳು ಮದುವೆಯಾದ ಮೊದಲ ರಾತ್ರಿ ಊರಿನ ಗುಡಿಯಲ್ಲಿ ದೇವರೊಂದಿಗೆ ಕಳೆಯಬೇಕೆಂಬ ನಂಬಿಕೆಯನ್ನು ಬಯಲು ಮಾಡಲು ಹೋದ ಚಂದ್ರ ಎಂಬ ಯುವಕ ಸಾಯುತ್ತಾನೆ. ಆನಂತರ ಚಂದ್ರನ ಗೆಳೆಯ ಸೂರ್ಯ ಈ ನಿಗೂಢವನ್ನು ಭೇದಿಸುವ ಪ್ರಯತ್ನದ ಜೊತೆಗೆ ಜಾಗೃತಿ ಮೂಡಿಸುತ್ತಾನೆ. ಆದರೆ ಸೂರ್ಯನ ಸುತ್ತ ನಿಗೂಢತೆ ಆವರಿಸಿಕೊಂಡು ಆತ ಯಾರೆಂದು ತಿಳಿಯುವ ಮೊದಲೇ ಪೋಲಿಸರಿಂದ ಬಂಧನಕ್ಕೊಳಗಾಗುತ್ತಾನೆ. ಮುಂದೆನಾಗುತ್ತೆ ಅನ್ನೋದಕ್ಕೆ ಚಿತ್ರಮಂದಿರಕ್ಕೇ ಹೋಗಬೇಕು.

ಶಬರಿ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದ್ದಾಳೆ. ಸಂಭಾಷಣೆ, ಗೀತ ರಚನೆ, ನಿರ್ದೇಶನ ಎಲ್ಲವೂ ಬರಗೂರದ್ದಾದರೆ, ಈ ಚಿತ್ರಕ್ಕೆ ವಿ. ಮನೋಹರ್ ಸಂಗೀತ ನೀಡಿದ್ದಾರೆ.

Share this Story:

Follow Webdunia kannada