Select Your Language

Notifications

webdunia
webdunia
webdunia
webdunia

ಕನ್ನಡಕ್ಕಾಗಿ ಕಿಟ್ಟಿ ಜತೆ ಸುರಭಿ ಐಟಂ ಡ್ಯಾನ್ಸ್!

ಕನ್ನಡಕ್ಕಾಗಿ ಕಿಟ್ಟಿ ಜತೆ ಸುರಭಿ ಐಟಂ ಡ್ಯಾನ್ಸ್!
PR
ಕನ್ನಡದ ಮೇಲಿನ ಪ್ರೀತಿಯಿಂದ, ಕನ್ನಡ ಕುಟುಂಬದ ಭಾಷೆ ಎಂಬ ಕಾರಣಕ್ಕೆ ಯಾರಾದೂ ಐಟಂ ಡ್ಯಾನ್ಸ್ ಮಾಡಿರೋದನ್ನು ಕೇಳಿದ್ದೀರಾ? ಇಲ್ಲಾಂದ್ರೆ ಕೇಳಿ, ಈಗ ಸುರಭಿ ಪ್ರಭು ಎಂಬಾಕೆ ಅದನ್ನು ಮಾಡಿದ್ದಾಳೆ!

ತೆಲುಗಿನ 'ಇಲಾ ಆಯಿತ್ತೆ ಎಲಾ' ಎಂಬ ಚಿತ್ರದಲ್ಲಿ ಸಂತೋಷ್ ಜತೆ ಸಿಕ್ಕಾಪಟ್ಟೆ ಹಾಟ್ ಹಾಟಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಸುರಭಿ ಮೂಲತಃ ಕರ್ನಾಟಕದವರು. ಆದರೆ ಈಗ ಮಾತ್ರ ಇವರು ನೆಲೆಸಿರುವುದು ಆಂಧ್ರದಲ್ಲಿ. ಹಾಗಾಗಿ ಕನ್ನಡ ಗೊತ್ತಿರುವುದು ಅಷ್ಟಕಷ್ಟೇ. ಆದರೂ ಭಾಷೆಯ ಮೇಲಿನ ಪ್ರೀತಿಯಿಂದ ಇಲ್ಲಿ ಬಂದು ಕುಣಿದಿದ್ದಾರಂತೆ.

ಹಾಗೆ ಸುರಭಿ ಕಾಣಿಸಿಕೊಂಡಿರುವ ಚಿತ್ರ 'ಅಪ್ಪಯ್ಯ'. ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕ. ಮಲಯಾಳಿ ಕುಟ್ಟಿ ಭಾಮಾ ನಾಯಕಿ.

"ನನ್ನ ತಂದೆ ಕೂರ್ಗ್ ಮೂಲದವರು. ಹಾಗಾಗಿ ಕನ್ನಡ ನನ್ನ ಮಾತೃಭಾಷೆಯಾಗಬೇಕಿತ್ತು. ಕನ್ನಡದಲ್ಲಿ ಹೀಗಾದರೂ ಕಾಣಿಸಿಕೊಳ್ಳಬಹುದಲ್ಲ ಎಂಬ ಉದ್ದೇಶದಿಂದ ಐಟಂ ನಂಬರ್‌ ಒಪ್ಪಿಕೊಂಡೆ" ಎಂದು ಸುರಭಿ ಹೇಳಿಕೊಂಡಿದ್ದಾರೆ.

ಸುರಭಿ ಕುಣಿದಿರುವ ಹಾಡನ್ನು ಸ್ವತಃ ಅವರೇ ಹಾಡಿದ್ದಾರಂತೆ. ಕನ್ನಡದಲ್ಲಿ ಹಾಡುವ ಅವಕಾಶ ಸಿಕ್ಕಿತ್ತು, ಆದರೆ ಭಾಷೆ ತುಂಬಾ ಕಷ್ಟ. ನನ್ನ ತಂದೆ ನನಗೆ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ. ಆದರೂ ಸವಾಲಾಗಿ ಪರಿಗಣಿಸಿ ಹಾಡಿದ್ದೇನೆ. ತೆಲುಗಿಗೆ ಹೋಲಿಸಿದರೆ ಕನ್ನಡ ಕಷ್ಟ. ಅದರ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಯಿತು. ಸಾಕಷ್ಟು ಅಭ್ಯಾಸ ಮಾಡಿದ ನಂತರ ಎಲ್ಲವೂ ಸರಿಯಾಯಿತು ಎಂದಿದ್ದಾರೆ.

ಬೇರೆ ಯಾವುದಾದರೂ ಚಿತ್ರದಲ್ಲಿ ನಟಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಸುರಭಿ ಉತ್ತರಿಸಲು ಹಿಂದೆ ಮುಂದೆ ನೋಡುತ್ತಾರೆ. ಕೈಯಲ್ಲಿ ಒಂದಷ್ಟು ತಮಿಳು ಚಿತ್ರಗಳ ಆಫರುಗಳು ಇವೆಯಂತೆ. ಆದರೆ ಅದರ ವಿವರಗಳನ್ನು ಬಹಿರಂಗಪಡಿಸಲು ಮಾತ್ರ ರೆಡಿಯಿಲ್ಲ. ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ನಾನೇ ಹೇಳುತ್ತೇನೆ ಎಂದು ಜಾರಿಕೊಂಡರು.

Share this Story:

Follow Webdunia kannada