Webdunia - Bharat's app for daily news and videos

Install App

ನಿತ್ಯಾನಂದ ರಾಸಲೀಲೆ ವೀಡಿಯೋ ನಕಲಿಯಂತೆ: ತಜ್ಞರ ವರದಿ

Webdunia
ಶುಕ್ರವಾರ, 2 ಡಿಸೆಂಬರ್ 2011 (15:54 IST)
PR
ದೇಶಾದ್ಯಂತ ತೀವ್ರ ಕುತೂಹಲ ಹಾಗೂ ವಿವಾದ ಹುಟ್ಟುಹಾಕಿದ್ದ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ರಾಸಲೀಲೆಗೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಚಿತ್ರನಟಿ ಜತೆ ನಿತ್ಯಾನಂದ ನಡೆಸಿದ್ದಾರೆ ಎನ್ನಲಾದ ರಾಸಲೀಲೆ ವೀಡಿಯೋ ಅಸಲಿಯಲ್ಲ, ನಕಲಿ ಎಂದು ಅಮೆರಿಕದ ತಜ್ಞರು ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಈ ವರದಿಯಿಂದಾಗಿ ನಿತ್ಯಾನಂದ ವಿರುದ್ಧ ದಾಖಲಾಗಿರುವ ರೇಪ್, ವಂಚನೆ, ಸಾಕ್ಷ್ಯ ನಾಶಕ್ಕೆ ಯತ್ನ ಸೇರಿದಂತೆ ಹಲವು ಪ್ರಕರಣಗಳಿಂದ ಬಚಾವ್ ಆಗಲು ಸಾಧ್ಯವೇ ಎಂಬುದು ಸ್ಪಷ್ಟವಾಗಿಲ್ಲ.

ಬೆಂಗಳೂರು ಮಿರರ್ ವರದಿ ಪ್ರಕಾರ, ಅಮೆರಿಕದಲ್ಲಿನ ಹಲವಾರು ಕೋರ್ಟ್‌ಗಳಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳ ವಿಡಿಯೋ ಟೇಪುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿರುವ ಖ್ಯಾತ ವಿಧಿವಿಜ್ಞಾನ ಅಪರಾಧ ವಿಷಯ ತಜ್ಞ ಎಡ್ವರ್ಡ್ ಜೆ.ಪ್ರೆಮ್ಯೂ ಇದೀಗ ನಿತ್ಯಾನಂದ ರಾಸಲೀಲೆ ವೀಡಿಯೋ ಟೇಪ್ ಬಗ್ಗೆಯೂ ವರದಿ ನೀಡಿದ್ದಾರೆ.

ಪ್ರೆಮ್ಯೂ ಅಧ್ಯಯನದಂತೆ ನಿತ್ಯಾನಂದ ಹಾಗೂ ಚಿತ್ರ ನಟಿ ಜತೆಗಿನ ರಾಸಲೀಲೆ ವೀಡಿಯೋ ಟೇಪ್ ಅಸಲಿಯಲ್ಲ, ಇದು ಸತ್ಯಾಸತ್ಯತೆಯಿಂದ ಕೂಡಿಲ್ಲ. ಹಾಗಾಗಿ ಇದು ಪ್ರಕರಣದಲ್ಲಿ ಸತ್ಯವನ್ನು ಬಯಲಿಗೆಳೆಯುವ ಪ್ರಬಲ ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ.

ಅದು ರಾಸಲೀಲೆ ಘಟನಾವಳಿಗಳನ್ನು ಯಥಾವತ್ತಾಗಿ, ನೈಜವಾಗಿ ಚಿತ್ರೀಕರಿಸಿದ ವೀಡಿಯೋ ಅಲ್ಲ. ಎರಡು ಪದರಗಳಿಂದ ತಯಾರಿಸಲಾದ ಈ ವೀಡಿಯೋ ನಕಲಿ ಎಂದು ವರದಿಯಲ್ಲಿ ತಮ್ಮ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಆ ನಿಟ್ಟಿನಲ್ಲಿ ಈವೀಡಿಯೋ ಟೇಪ್ ಅನ್ನು ಸಾಕ್ಷ್ಯವನ್ನಾಗಿ ಬಳಸಬಾರದು ಎಂದು ತಾನು ಶಿಫಾರಸು ಮಾಡುವುದಾಗಿ ಪ್ರೆಮ್ಯೂ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಆದರೆ ನಿತ್ಯಾನಂದ ರಾಸಲೀಲೆ ಪ್ರಕರಣದ ಕುರಿತು ತನಿಖೆ ನಡೆಸಿರುವ ಸಿಐಡಿ ಪೊಲೀಸರು ರಾಸಲೀಲೆ ವೀಡಿಯೋ ಟೇಪ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸಿದ ನಂತರ ಅದು ಅಸಲಿ ಸಿಡಿ ಎಂದು ದೃಢಪಟ್ಟಿರುವುದಾಗಿ ತಿಳಿಸಿದ್ದರು.

ರಾಸಲೀಲೆ ಪ್ರಕರಣದಲ್ಲಿ ಸಿಐಡಿ ಪೊಲೀಸರು ವಿಡಿಯೋವನ್ನು ಸಾಕ್ಷ್ಯವನ್ನಾಗಿ ನ್ಯಾಯಾಲಯಕ್ಕೆ ಈಗಾಗಲೇ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಮೂಲಗಳು, ನಾವು 2010 ಡಿಸೆಂಬರ್ 23ರಂದು ಆರೋಪಪಟ್ಟಿ ಸಲ್ಲಿಸಿದ್ದೇವೆ. ಈವರೆಗೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸಿಡಿಯನ್ನು ನಾವು ಫಾರ್ಮಾಲಿಟಿಗಾಗಿ ಕೋರ್ಟ್‌ಗೆ ನೀಡಿದ್ದೇವೆ. ಹಾಗಾಗಿ ವಿಚಾರಣೆ ಆರಂಭಗೊಂಡ ನಂತರ ಏನಾಗಲಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿರುವುದಾಗಿ ಮಿರರ್ ವರದಿ ವಿವರಿಸಿದೆ.

ನಿತ್ಯಾನಂದ ಸ್ವಾಮಿಯ ಮಾಜಿ ಕಾರು ಚಾಲಕ ಲೆನಿನ್ ಕರುಪ್ಪನ್ ಎಂಬಾತ ರಾಸಲೀಲೆ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಈ ವಿಷಯ ಬಹಿರಂಗಗೊಂಡಿತ್ತು. ಪ್ರಕರಣದಲ್ಲಿ ನಿತ್ಯಾನಂದ 50 ದಿನಗಳ ಕಾಲ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಬಂದಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಎರಡು ದಿನಗಳಲ್ಲಿ ಆರು ಭಯೋತ್ಪಾದಕರ ಉಡೀಸ್‌

Rajnath Singh: ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟಿದ್ದು ಯಾರೆಂದು ಬಹಿರಂಗಪಡಿಸಿದ ರಾಜನಾಥ್ ಸಿಂಗ್

ಕುಕ್ಕೆ ಸುಬ್ರಹ್ಮಣ್ಯಕ್ಕೆ ರೌಡಿ ಶೀಟರ್ ಅಧ್ಯಕ್ಷ: ಯಾಕೆ ಆಗಬಾರದು ಎಂದ ಸಚಿವ ದಿನೇಶ್ ಗುಂಡೂರಾವ್

ನಮ್ಮ ಸಹಾಯ ಪಡೆದು ನಮಗೇ ದ್ರೋಹ ಬಗೆಯುತ್ತೀರಾ: ಟರ್ಕಿ, ಚೀನಾಗೆ ಭಾರತ ತಕ್ಕ ಪಾಠ

Gold Price today: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ