ವಿಕ್ಟರಿ ಚಿತ್ರಕ್ಕೆ ಭರ್ಜರಿ ಓಪನಿಂಗ್
ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2013 (15:20 IST)
ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು.. ಆಚೇಗಾಕೋಳೆ ವೈಫು... ಹಾಡಿನಿಂದಲೇ ಮೋಡಿ ಮಾಡಿದ ಚಿತ್ರ ವಿಕ್ಟರಿ. ಕಾಮಿಡಿ ಸ್ಟಾರ್ ಶರಣ್ ಇದೀಗ ಸೂಪರ್ ಸ್ಟಾರ್ ಹಂತ ತಲುಪಿದ್ದಾನೆ. ಯಾಕೆಂದ್ರೆ ಅವರ ವಿಕ್ಟರಿ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಗಾಂಧೀನಗರದ ಥಿಯೇಟರ್‌ಗಳಲ್ಲಿ ಸಿನಿಮಾ ನೋಡೋಕೆ ಅಂತಲೇ ಅಬ್ಬರದಿಂದ ಬರ‍್ತಿದ್ದಾರೆ ಅಭಿಮಾನಿ ದೇವರುಗಳು. ಪಡ್ಡೆ ಹುಡುಗರ ಮಸ್ತ್ ಮಸ್ತ್ ಡೈಲಾಗ್ ಗಳು ವಿಕ್ಟರಿ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.."
ಗಂಡಸು ಕೆಟ್ಟವನಾದರೆ ಆತನ ಅದೃಷ್ಟ ಸರಿ ಇಲ್ಲ ಅಂತಾರೆ, ಅದೇ ಹೆಣ್ಣು ಕೆಟ್ಟವಳಾದರೆ ಅವಳೇ ಸರಿ ಇಲ್ಲ ಅಂತಾರೆ...ಇದು ವಿಕ್ಟರಿ ಚಿತ್ರದ ಒಂದು ಸ್ಯಾಂಪಲ್ ಡೈಲಾಗ್. ಗಂಡ ಹೆಂಡತಿಯ ನಡುವಿನ ಸಂಬಂಧಗಳ ಸಾಮರಸ್ಯದ ಬಗ್ಗೆ ಮತ್ತು ಬದುಕಿನ ಸರಿ, ತಪ್ಪುಗಳನ್ನು ವಿವರಿಸುವ ಯತ್ನ ಮಾಡಿದ್ದಾರೆ ನಿರ್ದೇಶಕ ನಂದಕಿಶೋರ್. ತಾಕತ್, ಶಾಂತಿನಿವಾಸ, ಕೆಂಪೇಗೌಡ ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿರುವ ಅನುಭವವಿರುವ ನಂದಕಿಶೋರ್ ವಿಕ್ಟರಿ ಸಿನೆಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಮೊದಲ ನಿರ್ದೇಶನದಲ್ಲೇ ಭಾರೀ ಭರವಸೆ ಹುಟ್ಟಿಸಿದ್ದಾರೆ. "
ನಾಯಕ ಶರಣ್ ನನ್ನ ಬಾಲ್ಯ ಸ್ನೇಹಿತ. ಹೀಗಾಗಿ ಆತನ ಜತೆ ಕೆಲಸ ಮಾಡುವುದು ನನಗೆ ಬಹಳ ಖುಷಿ ಕೊಟ್ಟಿದೆ. ಪ್ರೇಕ್ಷಕರನ್ನು ನನ್ನಿಂದ ಸಾಧ್ಯವಾದಷ್ಟು ನಗಿಸುವ ಪ್ರಯತ್ನ ಮಾಡಿದ್ದೇನೆ. ಜೊತೆಗೆ ಈ ಚಿತ್ರದ ಮೂಲಕ ಒಂದು ಸಂದೇಶವನ್ನೂ ನೀಡಿದ್ದೇನೆ. ಜನರು ಈ ಸಿನೆಮಾ ನೋಡಿ ಖುಷಿಯಿಂದಲೇ ಥಿಯೇಟರ್ನಿಂದ ಹೊರಬರುತ್ತಿದ್ದಾರೆ. ಇದಕ್ಕಿಂತ ಖುಷಿ ನಿರ್ದೇಶಕನಿಗೆ ಇನ್ನೇನಿದೆ ಹೇಳಿ" ಅಂತ ವಿನಮ್ರವಾಗಿ ಹೇಳಿದ್ರು ನಿರ್ದೇಶಕರು.ಒಟ್ನಲ್ಲಿ ಮೊದಲ ನಿರ್ದೇಶನದಲ್ಲಿ ನಿರ್ದೇಶಕ ಗೆದ್ದಿದ್ದಾರೆ. ಶರಣ್ ಮತ್ತೊಮ್ಮೆ ಅದ್ಭುತ ನಟನಾಗಿ ಹೊರ ಹೊಮ್ಮಿದ್ದಾರೆ. ನೀವೂ ಸಿನೆಮಾ ನೋಡಿ. ಗ್ಯಾರಂಟಿ ನಗ್ತೀರ.