Webdunia - Bharat's app for daily news and videos

Install App

ಪಾಗಲ್ ವಿಮರ್ಶೆ; ಹುಚ್ಚು ಅಲ್ಲ, ಗೆರೆ ದಾಟಿದ ವಿಕೃತಿ

Webdunia
ಚಿತ್ರ: ಪಾಗಲ್
ತಾರಾಗಣ: ಪಿ.ಎನ್. ಸತ್ಯ, ಪೂಜಾ ಗಾಂಧಿ, ಬುಲೆಟ್ ಪ್ರಕಾಶ್, ಹರೀಶ್ ರೈ
ನಿರ್ದೇಶನ: ಪಿ.ಎನ್. ಸತ್ಯ
ಸಂಗೀತ: ವಿ. ಮನೋಹರ್
SUJENDRA


ನಿರ್ದೇಶಕರಾಗಿ ಮಾತ್ರವಲ್ಲ, ಖಳನಾಗಿ, ಕೆಲವೊಮ್ಮೆ ಪೋಷಕ ನಟನಾಗಿಯೂ ಕಾಣಿಸಿಕೊಂಡಿದ್ದ ಪಿ.ಎನ್. ಸತ್ಯ ಸ್ವತಃ ನಾಯಕರಾಗಿರುವ ಚಿತ್ರ 'ಪಾಗಲ್'. ಹೆಸರಿಗೆ ತಕ್ಕಂತೆ ಚಿತ್ರವೂ ಹುಚ್ಚುಚ್ಚಾಗಿದೆ. ಚಿತ್ರಮಂದಿರದಲ್ಲಿ ಕಟ್ಟಿ ಹಾಕಿದರೂ ನೋಡುವುದು ಕಷ್ಟ ಎಂಬ ಪರಿಸ್ಥಿತಿಯನ್ನು ಸತ್ಯ ನಿರ್ಮಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಈ ಹಿಂದಿನ ಚಿತ್ರಗಳಲ್ಲಿರುವಂತೆ ಅದೇ ಎರಡೂವರೆ ತುಂಡಕ್ಷರಗಳ ಪ್ರೀತಿಯನ್ನು ಸತ್ಯ ಇಲ್ಲೂ ಎಳೆದು ತಂದಿದ್ದಾರೆ. ನಾಯಕನಿಗೆ ಅನಾಥನೆಂಬ ಪಟ್ಟ ಕಟ್ಟಲಾಗಿದೆ. ತೊಟ್ಟಿಯಲ್ಲಿ ಹುಟ್ಟಿದವನೆಂಬ ಮಾತ್ರಕ್ಕೆ ಅದೇ ಹೆಸರು ನಾಯಕನಿಗೆ ಅಂಟಿಕೊಳ್ಳುತ್ತದೆ.

ಸದಾ ಕೈಯಲ್ಲಿ ಬ್ಲೇಡ್ ಹಿಡಿದುಕೊಂಡೇ ಇರುವ ನಾಯಕನದ್ದು ವಿಶಿಷ್ಟ ವ್ಯಕ್ತಿತ್ವ. ಎಲ್ಲೆಂದರಲ್ಲಿ ಮಲಗಿ, ರಾತ್ರಿ ಕಳೆಯುವವನು. ಯಾರದೋ ಕಿಸೆಗೆ ಕತ್ತರಿ ಹಾಕಿ ಹೊಟ್ಟೆ ಹೊರೆಯುವವನು. ಮೂವರು ಸಮಾನ ಮನಸ್ಕ ಗೆಳೆಯರು ಬೇರೆ.

ಹೀಗಿದ್ದವನಿಗೆ ಹಾಡೊಂದು ಕಾಡುತ್ತದೆ. ಹಾಡಿದವಳನ್ನು ಹುಡುಕುತ್ತಾನೆ. ಆಕೆಯನ್ನು ಬೆಳೆಸುತ್ತಾನೆ. ತೊಟ್ಟಿಯೆಂದೇ ಗುರುತಿಸಿಕೊಳ್ಳುತ್ತಿದ್ದವನಿಗೆ ಸೂರ್ಯ ಎಂದು ಹೆಸರಿಡುವುದು ನಾಯಕಿ ಪೂಜಾ. ಸೂರ್ಯನಿಗೀಗ ಸದಾ ಪೂಜಾಳದ್ದೇ ಹುಚ್ಚು. ಆಕೆಗೆ ಈತನೇ ಆಸರೆ. ಆದರೆ ತಾಯಿ ಬಿಡಬೇಕಲ್ಲ. ಈ ಹುಚ್ಚು ಪ್ರೀತಿ ಅಂತ್ಯಗೊಳ್ಳುವುದು ಅದೇ ಬ್ಲೇಡಿನಿಂದ. ಪೂಜಾ ಇನ್ನಿಲ್ಲವಾಗುತ್ತಾಳೆ. ನಾಯಕ ಹುಚ್ಚನಾಗುತ್ತಾನೆ.

ಇದನ್ನು ನೋಡಿದವರ ಗತಿ ಕೂಡ ಇದಕ್ಕಿಂತ ಬೇರೆಯಲ್ಲ. ಮಾಸ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹೀಗೆ ಮಾಡಲಾಗಿದೆ ಅಂತ ನಿರ್ದೇಶಕ ಸತ್ಯ ಹೇಳಿದರೂ, ಸ್ವತಃ ಮಾಸ್ ಪ್ರೇಕ್ಷಕರೇ ಕ್ಯಾಕರಿಸಿ ಉಗಿಯುವಂತಹ ದೃಶ್ಯಗಳು ಚಿತ್ರದಲ್ಲಿವೆ. ಅಶ್ಲೀಲ ಪದಗಳು, ವಯಸ್ಕರಿಗೆ ಮೀಸಲಾದ ದೃಶ್ಯಗಳಿದ್ದರೂ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿರುವುದು ಶಂಕೆ ಹುಟ್ಟಿಸುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಸತ್ಯ ಅವರದ್ದು. ಅತಿರೇಕವನ್ನು ಬೇಕೆಂದೇ ತುರುಕಿರುವ ಸತ್ಯ ಮುಂದಿದ್ದುದು ನಾಯಕನಾಗುವ ಅಭಿಲಾಷೆ. ಅದಕ್ಕಾಗಿ ವಿಚಿತ್ರ ಕಥೆಯನ್ನು ತೆರೆಗಿಳಿಸಿದ್ದಾರೆ. ಅದಕ್ಕಾಗಿ ಕೆಲವರಿಂದಾದರೂ ಚಪ್ಪಾಳೆ ಸಿಗಬಹುದು.

ಅವರ ನಟನೆಯ ಬಗ್ಗೆ ಹೇಳದಿರುವುದೇ ವಾಸಿ. ಸತ್ಯ ನಟಿಸಿಯೇ ಇಲ್ಲ. ಸುಮ್ಮನೆ ಬಾಯಿ ಬಿಡುತ್ತಾರೆ, ಅರಚುತ್ತಾರೆ, ಅಷ್ಟೇ. ನಾಯಕಿ ಪೂಜಾ ಗಾಂಧಿ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ವಿ. ಮನೋಹರ್ ಸಂಗೀತದಲ್ಲಿ ಕೆಲವು ಹಾಡುಗಳು ಕೇಳುವಂತಿವೆ. ಸ್ಪೀಡ್ ಬಾಬು ಕ್ಯಾಮರಾ ಗಲ್ಲಿ ಗಲ್ಲಿಯಲ್ಲಿ ನುಗ್ಗಿ ವಾಸ್ತವ ಚಿತ್ರಣವನ್ನು ನೀಡಲು ಸಫಲವಾಗಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments