Webdunia - Bharat's app for daily news and videos

Install App

ನಿನ್ನಿಂದಲೇ ಸಿನಿಮಾಗೆ ಯು ಸರ್ಟಿಫಿಕೇಟ್

Webdunia
ಭಾನುವಾರ, 12 ಜನವರಿ 2014 (12:42 IST)
PR
PR
ಕನ್ನಡದ ಬಹು ನಿರೀಕ್ಷಿತ ಸಿನಿಮಾ ನಿನ್ನಿಂದಲೇ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಈ ಚಿತ್ರಕ್ಕೆ ಸಂಬಂಧಪಟ್ಟ ಅನೇಕ ದಾಖಲೆಗಳ ಬಗ್ಗೆ ನಾವು ತಿಳಿಸುತ್ತಾ ಬಂದಿದ್ದೇವೆ. ಈಗ ಈ ಸಿನಿಮಾ ೧೬ ನೆ ತಾರೀಖು ಬಿಡುಗಡೆ ಭಾಗ್ಯ ಕಾಣುತ್ತಿದೆ. ಕಳೆದ ವರ್ಷ ಒಂದು ಸಿನಿಮಾ ಬಿಡುಗಡೆ ಆಗಿರಲಿಲ್ಲ್ಲ ಅಪ್ಪುದು. ಅವರ ಅಭಿಮಾನಿಗಳಿಗೆ ಸುಗ್ಗಿ ನೀಡಲು ಅಪ್ಪು ಸುಗ್ಗಿ ಹಬ್ಬ ಸಂಕ್ರಾಂತಿಯ ಮಾರನೆಯ ದಿನ ನಿನ್ನಿಂದಲೇ ಚಿತ್ರದ ಮುಖಾಂತರ ತೆರೆಯ ಮೇಲೆ ಕಾಣ ಸಿಗುತ್ತಿದ್ದಾರೆ.

ಈ ಚಿತ್ರಕ್ಕೆ ಯು ಸರ್ಟಿಫಿಕೆಟ್ ದೊರಕಿದೆ. ಅಪ್ಪು ಅವರ ಜೊತೆಯಾಗಿದ್ದಾರೆ ಎರಿಕ ಫರ್ನಾಂಡೀಸ್ ಈ ಚಿತ್ರಕ್ಕೆ ಸೆನ್ಸಾರ್ ಬೋರ್ಡ್ ನಿಂದ ಪ್ರಮಾಣ ಪತ್ರ ಸಿಗಲು ತಡವಾದ ಕಾರಣ ಏನೆಂದರೆ, ಅಲ್ಲಿದ್ದ ಕೆ.ನಾಗರಾಜು ಅವರ ಬದಲಾಗಿ ನಾಗೇಂದ್ರ ಬಾಬು ಬಂದರು. ಆ ಸ್ಥಾನದ ಬದಲಾವಣೆಯ ಕಾರಣದಿಂದ ನಿನ್ನಿಂದಲೇ ಗೆ ಸರ್ಟಿಫಿಕೆಟ್ ದೊರೆಯುವುದು ತಡ ಆಯಿತಂತೆ. ಈ ಚಿತ್ರವೂ ನ್ಯೂಯಾರ್ಕ್ ನಲ್ಲಿ 40 ದಿನಗಳ ಕಾಲ ಶೂಟಿಂಗ್ ಮಾಡಿದೆ. ಇದೊಂದು ಸರಳ ಪ್ರೀತಿಯ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಈ ಚಿತ್ರದ ಟೀವಿ ರೈಟ್ಸ್ ಸಹ ಸಾಕಷ್ಟು ಮೊತ್ತದಿಂದ ದಾಖಲೆ ನಿರ್ಮಿಸಿತ್ತು. ಸುಮಾರು 10 ಕೋಟಿ ರುಉಪಾಯಿಗಳಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಚಿತ್ರದಲ್ಲಿ ತೆಲುಗು ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ಬ್ರಹ್ಮಾನಂದಂ ಸಹ ನಟಿಸಿದ್ದಾರೆ. ಮಣಿಶರ್ಮ ಸಂಗೀತ, ಪಿಜಿ ವಿಂದ ಛಾಯಾಗ್ರಹಣವಿದೆ. ವಿನಾಯಕ್ ಜೋಷಿ, ಅವಿನಾಶ್ ಜುಗಾರಿ , ಅಲೋಕ್ ಬಾಬು, ಸೋನಿಯಾ ದೀಪ್ತಿ ಅಚ್ಯುತ್ ಕುಮಾರ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments