Select Your Language

Notifications

webdunia
webdunia
webdunia
webdunia

ಅಗ್ರಜ ಚಿತ್ರದಲ್ಲಿ ಜಗ್ಗೇಶ್ ಪಾತ್ರ ಅರವಿಂದ್ ಕೇಜ್ರಿವಾಲ ಅವರ ಬದುಕನ್ನು ಹೋಲುತ್ತಿದೆಯೇ ?

ಅಗ್ರಜ ಚಿತ್ರದಲ್ಲಿ ಜಗ್ಗೇಶ್ ಪಾತ್ರ ಅರವಿಂದ್ ಕೇಜ್ರಿವಾಲ ಅವರ ಬದುಕನ್ನು ಹೋಲುತ್ತಿದೆಯೇ ?
, ಗುರುವಾರ, 17 ಏಪ್ರಿಲ್ 2014 (09:19 IST)
PR
ಜಗ್ಗೇಶ್ ಎರಡು ಕಾರಣಕ್ಕೆ ಸಿಕ್ಕಾಪಟ್ಟೆ ಟೆನ್ಶನ್ ಆಗಿದ್ದಾರೆ. ಒಂದು ಅವರ ಬಹು ನಿರೀಕ್ಷಿತ ಚಿತ್ರ ಅಗ್ರಜ ನಾಳೆ ಅಂದರೆ ಎಪ್ರಿಲ್ 18ಕ್ಕೆ ಬಿಡುಗಡೆ ಆಗಲಿದೆ. ಮತ್ತೊಂದು ಸಂಗತಿ ಏನು ಅಂದ್ರೆ ಇದೆ ತಿಂಗಳ 24ರಂದು ಅವರ ಮಗ ಗುರುರಾಜ್ ಅವರ ಮದುವೆ. ಇವೆರಡರ ಜೊತೆ ಅವರಿಗೆ ಲೋಕಸಭಾ ಚುನಾವಣೆಯ ಟೆನ್ಶನ್ ಸಹ ಇದ್ದು ಒಟ್ಟಾರೆ ಎರಡರ ಜೊತೆ ಮತ್ತೊಂದು ಉಚಿತ ಅನ್ನುವಂತೆ ಮೂರನೇ ಟೆನ್ಶನ್ ಜೊತೆಯಾಗಿದೆ. ಈ ಚಿತ್ರ ಪೂರ್ಣಗೊಂಡು ಬರೋಬ್ಬರಿ ಎರಡು ವರ್ಷಗಳಾಗಿವೆ. ಆದರೆ ಚಿತ್ರದ ಬಿಡುಗಡೆಗೆ ಈಗ ಕಾಲಾವಕಾಶ ಒದಗಿ ಬಂದಿದೆ. ಈ ಚಿತ್ರವೇನಾದರೂ ಮೊದಲೇ ಬಿಡುಗಡೆ ಆಗಿದ್ದಿದ್ದರೆ ಆಗ ಜನರು ಈ ಚಿತ್ರದ ನಾಯಕನಂತೆ ಅರವಿಂದ್ ಕ್ರೇಜಿವಾಲ ಅವರು ನಿರ್ಧಾರ ತಗೊಂಡಿದ್ದಾರೆ ಎಂದು ತಿಳಿಯುತ್ತಿದ್ದರು.

ಪ್ರಸ್ತುತ ಬಿಜೆಪಿಯ ಎಂ ಎಲ್ ಸಿ ಆಗಿರುವ ನವರಸ ನಾಯಕ ಜಗ್ಗೇಶ್ ಅವರಿಗೆ ಅರವಿಂದ್ ಕೇಜ್ರಿವಾಲ ಅವರ ರಾಜಕೀಯ ಕೆರಿಯರ್ ಸಿಕ್ಕಾಪಟ್ಟೆ ಗಮನ ಸೆಳೆದಿದೆಯಂತೆ. ಅದು ಅವರ ಮೇಲೆ ಸಾಕಷ್ಟು ಪರಿಣಾಮ ಉಂಟು ಮಾಡಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಅಗ್ರಜ ಚಿತ್ರದಲ್ಲಿ ಕೆಲವು ಮೌಲ್ಯಗಳ ಬಗ್ಗೆ ತಿಳಿಸಲಾಗಿದೆ ಎನ್ನುವ ಮಾತನ್ನು ಹೇಳಿದ್ದಾರೆ ಜಗ್ಗೇಶ್..ನಾಳೆ ಅಗ್ರಜ ತೆರೆ ಕಾಣಲಿದೆ.

Share this Story:

Follow Webdunia kannada