Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಗೆ ಜೂನಿಯರ್ ಎಂಟಿಆರ್ ಅಂದ್ರೆ ತುಂಬಾ ಇಷ್ಟವಂತೆ !

ಕಿಚ್ಚ ಸುದೀಪ್ ಗೆ ಜೂನಿಯರ್ ಎಂಟಿಆರ್ ಅಂದ್ರೆ ತುಂಬಾ ಇಷ್ಟವಂತೆ !
, ಬುಧವಾರ, 16 ಏಪ್ರಿಲ್ 2014 (09:20 IST)
PR
ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಸುದೀಪ್. ಅವರು ಕೇವಲ ಮಾತೃ ಭಾಷೆಯಲ್ಲಿ ಮಾತ್ರವಲ್ಲ ತಮಿಳು, ತೆಲುಗು ಹಿಂದಿ ಭಾಷೆಯಲ್ಲೂ ಸಹ ತಮ್ಮ ಅಭಿನಯದ ಮುಖಾಂತರ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಮೌಳಿ ನಿರ್ದೇಶನದ 'ಈಗ' ಚಿತ್ರದಲ್ಲಿ ವಿಲನ್ ಆಗಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿ ಪಡೆಯನ್ನು ಟಾಲಿವುಡ್ ವೀಕ್ಷಕರಿಂದ ತಮ್ಮದಾಗಿಸಿಕೊಂಡ ಪ್ರತಿಭೆ ಇವರದ್ದು.

ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನಟ ಸುದೀಪ್ ಅವರು ಜೂನಿಯರ್ ಎಂಟಿಆರ್ ಅವರ ಬಗ್ಗೆ ಹೇಳಿದ ಮಾತುಗಳು ಸಾಕಷ್ಟು ಸಂಚಲನ ಉಂಟು ಮಾಡಿದೆ. ಜೂನಿಯರ್ ಟಾಲಿವುಡ್ ನಲ್ಲಿ ಎಷ್ಟೇ ದೊಡ್ಡ ಹೀರೋ ಆಗಿದ್ದರು ಸಹ ನನಗೆ ಆತ ಪುಟ್ಟ ಹುಡುಗನಂತೆ ಕಂಡು ಬರುತ್ತಾರೆ.

webdunia
PR
ಚಟಪಟನೆ ಮಾತನಾಡುವ ಆತನ ಮಾತುಗಳನ್ನು ಕೇಳಿದಾಗ ನನಗೆ ಪುಟ್ಟ ಹುಡುಗ ಮಾತಾಡಿದಂತೆ ಅನ್ನಿಸುತ್ತದೆ ಎಂದು ಹೇಳಿದ್ದಾರೆ ಸುದೀಪ್. ಯಾವುದೇ ಗಾಡ್ ಫಾದರ್ ಗಳ ಸಹಾಯ ಇಲ್ಲದೆ ತನ್ನ ಪ್ರತಿಭೆಯಿಂದ ಬೆಳೆದ ಜೂನಿಯರ್ ಎನ್ಟಿಆರ್ ಅಂದ್ರೆ ತನಗೆ ಸಿಕ್ಕಾಪಟ್ಟೆ ಅಭಿಮಾನ ಎಂದು ಹೇಳಿದ್ದಾರೆ.

ಜೂನಿಯರ್ ನ್ನು ನೋಡಿ ನಾನು ತಾಯಿಯನ್ನು ಹೇಗೆ ಪ್ರೀತಿಸ ಬೇಕು ಎನ್ನುವುದು ಕಲಿತೆ ಎಂದಿದ್ದಾರೆ. ರವಿತೇಜ, ನಾನಿ, ಚರಣ್ ಕಂಡರೇನು ಸುದೀಪ್ ಅವರಿಗೆ ಇಷ್ಟವಂತೆ. ಅಷ್ಟೇ ಅಲ್ಲದೆ ರಾಮ್ ಗೋಪಾಲ್ ವರ್ಮ ಅವರನ್ನು ಸಹ ಸುದೀಪ್ ಸಿಕಾಪಟ್ಟೆ ಹೊಗಳಿದ್ದಾರೆ.. ಇದರ ಮರ್ಮ ಏನು ಎಂದು ಟಾಲಿವುಡ್ ಮಂದಿ ಯೋಚಿಸುತ್ತಿದ್ದಾರೆ. !

Share this Story:

Follow Webdunia kannada