Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರದಲ್ಲಿ ಅನುಷ್ಕ ಶೆಟ್ಟಿ ನಟನೆ ?

ಕನ್ನಡ ಚಿತ್ರದಲ್ಲಿ ಅನುಷ್ಕ ಶೆಟ್ಟಿ ನಟನೆ ?
, ಮಂಗಳವಾರ, 15 ಏಪ್ರಿಲ್ 2014 (10:15 IST)
PR
ಗಂಧದ ಬೊಂಬೆಯಂತೆ ಮುದ್ದಾಗಿದ್ದಾಳೆ ಈ ಚೆಲುವೆ. ಕನ್ನಡತಿ ಅನುಷ್ಕ ಶೆಟ್ಟಿ ನೋಡೋಕೆ ಸ್ಯಾಂಡಲ್ ವುಡ್ ಬೊಂಬೆಯಂತೆ ಇದ್ದರು ಸಹಿತ ಈವರೆಗೂ ಒಂದೇ ಒಂದು ಕನ್ನಡ ಚಿತ್ರದಲ್ಲಿ ನಟಿಸಿಲ್ಲ. ಬೆಂಗಳೂರಿನ ಈ ಚೆಲುವೆಗೆ ಅವಕಾಶಗಳು ದೊರೆತದ್ದು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ.

ಅಲ್ಲದೆ ಕನ್ನಡದ ನೆಲದ ಮಗಳಾಗಿ ಕನ್ನಡದವಳಾಗಿದ್ದರು ಅದ್ಯಾಕೋ ಆಕೆಗೆ ಇಲ್ಲಿ ಬಂದು ನಟಿಸುವುದಕ್ಕೆ ಆಗೇ ಇರಲಿಲ್ಲ. ಆದರೆ ಈಗ ಅಂತಹದೊಂದು ಅವಕಾಶ ಒದಗಿ ಬಂದಿದೆ. ಕನ್ನಡ ಚಿತ್ರದಲ್ಲಿ ಆಕೆ ನಟಿಸಲು ಸಿದ್ಧ ಆಗಿದ್ದಾಳೆ.

ಆರಂಭದಲ್ಲಿ ಟಾಲಿವುಡ್ ಗೆ ಎಂಟ್ರಿ ಆದ ಈ ಚೆಲುವೆ ನಂತರ ಕಾಲಿವುಡ್ ಕಡೆಗೆ ಪ್ರಯಾಣ ಬೆಳಸಿದಳು. ಎರಡು ಕಡೆಯಲ್ಲೂ ತನ್ನ ರೂಪದಿಂದ ಎಲ್ಲರ ಮನವನ್ನು ತಲ್ಲಣ ಗೊಳಿಸಿದಳು ಆ ಚೆಲುವೆ.

Share this Story:

Follow Webdunia kannada