Webdunia - Bharat's app for daily news and videos

Install App

ಇನ್ನು ಮುಂದೆ ಬಿಕಿನಿಯಲ್ಲಿ ಕಾಣಿಸಿಕೊಳ್ಳಲ್ಲ: ವೀಣಾ ಮಲ್ಲಿಕ್

Webdunia
ಗುರುವಾರ, 3 ಏಪ್ರಿಲ್ 2014 (16:19 IST)
ಪಾಕ್ ಹಾಟ್ ಬ್ಯೂಟಿ ವೀಣಾ ಮಲ್ಲಿಕ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕನ್ನಡದ ಸಿಲ್ಕ್ ಸಖತ್ ಹಾಟ್ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಬಳಿಕ ಅವರಿಗೆ ಬಿಕಿನಿ ಬಗ್ಗೆ ವೈರಾಗ್ಯ ಬಂದಿದೆಯಂತೆ. ಸದಾ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹೈಕಳ ನಿದ್ದೆ ಕೆಡಿಸಿದ್ದ ವೀಣಾ ಇನ್ನು ಮುಂದೆ ಬಿಕಿನಿ ತೊಡುವುದಿಲ್ಲ ಎಂದಿದ್ದಾರಂತೆ.

ಮುಂದಿನ ಚಿತ್ರ ಸೂಪರ್ಮಾಡೆಲ್ ನನ್ನ ಬಿಕಿನಿ ತೊಟ್ಟಿರುವ ಕೊನೆಯ ಚಿತ್ರವಾಗಿರಲಿದೆ ಎಂದು ಅವರು ಹೇಳಿದ್ದಾರಂತೆ. ಇನ್ನೆಂದೂ ಪ್ರದರ್ಶನಕ್ಕಾಗಿ ಟೂ-ಪೀಸ್ ಗಾರ್ಮೆಂಟ್ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದಾರಂತೆ. ಹಲವಾರು ಬಿಕಿನಿಗಳನ್ನು ಚಿತ್ರಕ್ಕಾಗಿ ಈವರೆಗೆ ತೊಟ್ಟಿದ್ದೇನೆ. ಇದು ಸಾಮಾನ್ಯವಾಗಿ ಬಾಲಿವುಡ್ಗೆ ಮಾತ್ರ ಸರಿಹೊಂದುತ್ತದೆ. ಇನ್ನು ಮುಂದೆ ಬಿಕಿನಿ ಧರಿಸಬಾರದೆಂದು ನಿರ್ಧರಿಸಿದ್ದೇನೆ ಎಂದಿದ್ದಾರೆ ವೀಣಾ.

ಈ ಚಿತ್ರವನ್ನು ನವೀನ್ ಭಾತ್ರ ನಿರ್ದೇಶಿಸಲಿದ್ದು, ಅಶ್ಮಿತ್ ಪಟೇಲ್ ಸಿನೆಮಾಟೊಗ್ರಫಿ ಇರಲಿದ್ದು, ಫಿಜಿಯಲ್ಲಿ ಚಿತ್ರೀಕರಣಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಲ್ಕ್ ಸಖತ್ ಹಾಟ್ ಚಿತ್ರದಲ್ಲಿ ಹಾಡೊಂದಕ್ಕೆ ಬಿಕಿನಿ ತೊಟ್ಟ ಸ್ಟಿಲ್ಸ್ಗಳು ಒಂದಾದ ಬಳಿಕ ಒಂದರಂತೆ ಬಿಡುಗಡೆಗೊಳ್ಳುತ್ತಿದ್ದಂತೆ ಚಿತ್ರದ ಬಗ್ಗೆ ಕುತೂಹಲಗಳೂ ಹೆಚ್ಚಿವೆ. ಈ ಹಿಂದೆ ಅಂತರರಾಷ್ಟ್ರೀಯ ಪುರುಷರ ಮ್ಯಾಗಜಿನ್ ಒಂದರಲ್ಲಿ ನಗ್ನರಾಗಿ ಕಾಣಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments