Webdunia - Bharat's app for daily news and videos

Install App

ಕನ್ನಡದಲ್ಲಿ ಸುದೀಪ್ ಜೊತೆ ಅವಕಾಶ ಸಿಕ್ಕರೆ ನಟಿಸುವೆ: ಸಮಂತಾ

Webdunia
ಬುಧವಾರ, 24 ಜುಲೈ 2013 (14:55 IST)
PTI
ಈ ಬಾರಿಯ ಫಿಲಂಫೇರ್ ಅವಾರ್ಡ ಸಮಾರಂಭದಲ್ಲಿ ತೆಲುಗು ಹಾಗೂ ತಮಿಳಿನ ಎರಡು ಚಿತ್ರಗಳ ಅತ್ಯುತ್ತಮ ನಟಿ ಎಂದು ಪ್ರಶಸ್ತಿ ಪಡೆದುಕೊಂಡವರು ನಟಿ ಸಮಂತಾ. ಕಳೆದ ವರ್ಷ ತೆರೆಕಂಡ ಈಗ ಹಾಗೂ ನೀತಾನೇ ಎನ್ ಪೊನ್ವಸಂತಂ ಚಿತ್ರಗಳಲ್ಲಿ ನಟಿಸಿದ್ದಕ್ಕೆ ಈ ಪ್ರಶಸ್ತಿ ದೊರೆತಿದೆ. ಆ ಸಂತಸವನ್ನು ಅವರು ಹಂಚಿಕೊಂಡಿದ್ದು ಹೀಗೆ...

ಎರಡು ಪ್ರಶಸ್ತಿಯನ್ನು ಒಂದೇ ಬಾರಿಗೆ ಪಡೆಯುವಾಗ ಸಂತೋಷದ ಜೊತೆ ಭಯವೂ ಆಯಿತು. ಪೋಷಕರ ಸಾನಿಧ್ಯದಲ್ಲಿ ಪ್ರಶಸ್ತಿ ಪಡೆಯಲು ಸಾಧ್ಯವಾಗಿದ್ದು ಖುಷಿ ಕೊಟ್ಟರೆ ಇನ್ನು ಮುಂದಿನ ಚಿತ್ರಗಳ ಆಯ್ಕೆ ಬಗ್ಗೆ ಭಯವೂ ಆಯಿತು. ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿರುವುದಂತೂ ನಿಜ.

ಸುದೀಪ್ ಅದ್ಭುತ ನಟ. ಅವರನ್ನು ಈ ಸಮಾರಂಭದಲ್ಲಿ ನಾನು ಮಿಸ್ ಮಾಡಿಕೊಂಡೆ. ಗೌತಮ್ ಮೆನನ್ ನಿರ್ದೇಶನದ ಯೇ ಮಾಯೇ ಚೇಸಾವೆ ಚಿತ್ರಕ್ಕೆ ನನಗೆ ಮೊದಲ ಫಿಲಂಫೇರ್ ಅವಾರ್ಡ ಸಿಕ್ಕಿತ್ತು. ಈಗ ಅವರೇ ನಿರ್ದೇಶಿಸಿರುವ ನೀತಾನೇ ಎನ್ ಪೊನ್ವಸಂತಂ ಚಿತ್ರಕ್ಕೆ ಮತ್ತೊಮ್ಮೆ ಪ್ರಶಸ್ತಿ ಬಂದಿದೆ. ಗೌತಮ್ ಸರ್ಗೆ ನಾನು ಸದಾ ಋಣಿ. ಈ ಪ್ರಶಸ್ತಿಯ ಗೌರವ ಅವರಿಗೇ ಸಲ್ಲಬೇಕು. ಸದ್ಯಕ್ಕೆ ಎರಡು ವರ್ಷಗಳಿಗಾಗುವಷ್ಟು ತಮಿಳು ಹಾಗೂ ತೆಲುಗು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಕನ್ನಡದಲ್ಲಿ ನಟಿಸಲು ನನಗೂ ಇಷ್ಟವೇ. ಆದರೆ ನಾಯಕನಾಗಿ ಸುದೀಪ್ ಇದ್ದರೆ ಬಹಳ ಖುಷಿ ಪಡುತ್ತೇನೆ ಎಂದಿದ್ದಾರೆ ಸಮಂತಾ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments