Select Your Language

Notifications

webdunia
webdunia
webdunia
webdunia

ಸಿಂಗಂ-2 ಕನ್ನಡಾವತರಣಿಕೆಗೆ ನಾಯಕ ಯಾರು?

ಸಿಂಗಂ-2 ಕನ್ನಡಾವತರಣಿಕೆಗೆ ನಾಯಕ ಯಾರು?
ಬೆಂಗಳೂರು , ಬುಧವಾರ, 24 ಜುಲೈ 2013 (18:03 IST)
PTI
ಸಿಂಗಂ-2 ಚಿತ್ರ ತಮಿಳಿನಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಸಖತ್ ಹೆಸರು ಮಾಡುತ್ತಿದೆ. ಆರು ಕೋಟಿ ರೂಪಾಯಿ ವ್ಯವಹಾರ ಮಾಡಬಹುದು ಎಂದು ತಜ್ಞರು ಈಗಾಗಲೇ ಲೆಕ್ಕಾಚಾರ ಮಾಡಿದ್ದಾರಂತೆ. ಅದೇ ಚಿತ್ರದ ಹಿಂದಿ ಅವತರಣಿಕೆ ಇದೀಗ ಸಿದ್ಧವಾಗುತ್ತಿದ್ದು ಅಜಯ್ ದೇವಗನ್ ನಾಯಕನಾಗಿ ನಟಿಸುತ್ತಿದ್ದಾರೆ.

ಕನ್ನಡದ ಸಿಂಗಂ ಸರಣಿಯ ಮೊದಲ ಚಿತ್ರದಲ್ಲಿ ಸುದೀಪ್ ನಾಯಕನಾಗಿ ಅಭಿನಯಿಸಿದ್ದರು. ಇದೀಗ ಎರಡನೇ ಆವೃತ್ತಿಯಲ್ಲಿ ಯಾರು ಅಭಿನಯಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ. ಸುದೀಪ್ ಹೊಸ ಹುಡುಗರ ಜೊತೆ ಸೇರಿ ಚಿತ್ರ ತಯಾರಿಸುವ ತಯಾರಿಯಲ್ಲಿದ್ದಾರೆ. ಜನವರಿ ಬಳಿಕ ಆ ಚಿತ್ರ ಬಿಡುಗಡೆಯಾಗಲಿದೆ ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಕೆಂಪೇಗೌಡ ಚಿತ್ರದ ನಿರ್ಮಾಪಕ ಶಂಕರೇಗೌಡ, ಸುದೀಪ್ ಚಿತ್ರದಲ್ಲಿ ನಟಿಸುವುದೇ ಆದರೆ ನಾನೇ ಚಿತ್ರದ ರೈಟ್ಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಸಿಂಗಂ 2 ಕನ್ನಡದಲ್ಲಿ ಯಾರು ನಟಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಿಂಗಂ 2 ಪ್ರೊಪೋಸಲ್ ಬಂದಾಗ, ಇದಕ್ಕೆ ಸುದೀಪ್ ಸೂಕ್ತ ವ್ಯಕ್ತಿ, ಅವರಿಂದಲೇ ಚಿತ್ರ ಮಾಡಿಸಿ ಎಂದಿದ್ದಾರಂತೆ. ಸುದೀಪ್ ಬಳಿಯೂ ಹಲವಾರು ನಿರ್ಮಾಪಕರು ಈ ಆಫರ್ ಇಟ್ಟು ಮಾತನಾಡಿದ್ದಾರೆ. ಡೇಟ್ ಕೊಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಸುದೀಪ್ ಇನ್ನೂ ತಮ್ಮ ನಿಧರ್ಾರ ಪ್ರಕಟಿಸಿಲ್ಲ. ಸುದೀಪ್ ಈ ಪಾತ್ರದಲ್ಲಿ ತೊಡಗಿಸಿಕೊಳ್ಳಲು ಈಗಿಂದಲೇ ತಯಾರಿ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಸುದೀಪ್ ಮಾತ್ರ ಈ ಬಗ್ಗೆ ಮೌನ ತಳೆದಿದ್ದಾರೆ.

Share this Story:

Follow Webdunia kannada