Select Your Language

Notifications

webdunia
webdunia
webdunia
webdunia

ಪುನೀತ್‌ಗೆ ಇದೀಗ ಎರಿಕಾ ಫೆರ್ನಾಂಡಿಸ್ ನಾಯಕಿ

ಪುನೀತ್‌ಗೆ ಇದೀಗ ಎರಿಕಾ ಫೆರ್ನಾಂಡಿಸ್ ನಾಯಕಿ
ಬೆಂಗಳೂರು , ಮಂಗಳವಾರ, 23 ಜುಲೈ 2013 (15:51 IST)
PTI
ಪುನೀತ್ ಅಭಿನಯದ ಇನ್ನೂ ಹೆಸರಿಡದ ಚಿತ್ರಕ್ಕೆ ಕೃತಿ ಕರಬಂಧಾ ನಾಯಕಿಯಾಗಿರುವುದಾಗಿ ಹೇಳಲಾಗಿತ್ತು. ಆದರೆ ಈಗ ಆ ಸ್ಥಾನವನ್ನು ಎರಿಕಾ ಫೆರ್ನಾಂಡಿಸ್ ತುಂಬಲಿದ್ದಾರೆ. ಡೇಟ್ಸ್ ಹಾಗೂ ಸಂಭಾವನೆ ವಿಷಯದಲ್ಲಿ ಹೊಂದಾಣಿಕೆ ಮೂಡದ ಕಾರಣಕ್ಕೆ ಕೃತಿ ಅವರನ್ನು ಕೈಬಿಟ್ಟು ಎರಿಕಾ ಅವರನ್ನು ಆಯ್ಕೆ ಮಾದಲಾಗಿದೆ ಎಂದು ನಿರ್ಮಾಪಕ ವಿಜಯ್ ತಿಳಿಸಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟವರು ಎರಿಕಾ. ತಮಿಳಿನಲ್ಲಿ ಭರತ್ ಜೊತೆ ಚಿತ್ರವೊಂದರಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಇದೀಗ ನಟಿಸುತ್ತಿದ್ದು ಹಿಂದಿ ಸಿನೆಮಾರಂಗದಲ್ಲೂ ಮುಖ ತೋರಿಸಿ ಬಂದಿದ್ದಾರೆ. 2012ರ ಮಿಸ್ ಇಂಡಿಯಾ ಸ್ಪರ್ದೇಯಲ್ಲಿ ಪಾಲ್ಗೊಂಡು ಒಂದಷ್ಟು ಬಹುಮಾನಗಳನ್ನೂ ಪಡೆದಿದ್ದಾರೆ. ಮಾಡೆಲಿಂಗ್ ಮಾಡಿಕೊಂಡೇ ಸಿನೆಮಾ ರಂಗಕ್ಕೆ ಬಂದವರು. ಇವರ ಪೋಷಕರು ಮೂಲತಃ ಮಂಗಳೂರಿನವರು. ಎರಿಕಾ ಮಾತ್ರ ಮುಂಬೈನಲ್ಲಿ ಓದಿಕೊಂಡು ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು.

ಪುನೀತ್ ಜೊತೆ ನಟಿಸುವುದು ಬಹಳ ಸಂತಸದ ವಿಷಯವೇ ಎಂದಿದ್ದಾರೆ ಎರಿಕ್. ಆಗಸ್ಟ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂಬ ಮಾಹಿತಿಯೂ ದೊರೆತಿದೆ. ಈ ಹೊಸ ನಟಿಯನ್ನು ಕನ್ನಡಿಗರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.

Share this Story:

Follow Webdunia kannada