Webdunia - Bharat's app for daily news and videos

Install App

ದರ್ಶನ್ ಬುಲ್ ಬುಲ್ಗೆ ರಮ್ಯಾ ಬಾರ್ನಾ, ಸ್ಫೂರ್ತಿ ಬೌಲ್ಡ್

Webdunia
PR
ಲಕ್ಕಿ ಸ್ಟಾರ್ ರಮ್ಯಾ ಬೇಡವೆಂದ ಪಾತ್ರ ಅದೃಷ್ಟ ಪರೀಕ್ಷೆಗಿಳಿದಿರುವ ಸೀರಿಯಲ್ ಹುಡುಗಿ ರಚಿತಾ ರಾಮ್ ಪಾಲಾಯ್ತು. ಈಗ ಉಳಿದೆರಡು ಪ್ರಮುಖ ಪಾತ್ರಗಳಿಗೆ ನಿರ್ದೇಶಕ ಎಂ.ಡಿ. ಶ್ರೀಧರ್ ಇಬ್ಬರು 'ದೊಡ್ಡ' ನಟಿಯರನ್ನೇ ಆರಿಸಿದ್ದಾರೆ. ರಮ್ಯಾ ಬಾರ್ನಾ ಮತ್ತು ಸ್ಫೂರ್ತಿ ಈಗ ದರ್ಶನ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಸೀರಿಯಲ್ ನಟಿ ಎದುರು ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸುವ ದರ್ದು ಈ ಹುಡುಗಿಯರಿಗೇನು ಬಂತು ಅಂತ ಯಾರಾದ್ರೂ ಕೇಳಬಹುದು. ಆದ್ರೆ ಈ ಬಗ್ಗೆ ಇವರಿಬ್ಬರೂ ಹೆಚ್ಚೇನೂ ತಲೆ ಕೆಡಿಸಿಕೊಂಡಂತಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಅಂದುಕೊಂಡು ಸ್ಟಾರ್ ನಟನ, ದೊಡ್ಡ ಬ್ಯಾನರ್‌ನ ಚಿತ್ರಕ್ಕೆ ತಲೆಯಾಡಿಸಿದ್ದಾರೆ.

ಇಲ್ಲಿ ರಮ್ಯಾ ಬಾರ್ನಾ ಅವರದ್ದು ಎರಡನೇ ನಾಯಕಿ ಪಾತ್ರ. ಡಾನ್ ಮಗಳಾಗಿ ನಾಯಕನಿಗಾಗಿ ಹಂಬಲಿಸಿ, ಆತ್ಮಹತ್ಯೆಗೆ ಯತ್ನಿಸುವ ಹುಡುಗಿ. ಆಕೆ ಮತ್ತು ಆಕೆಯ ತಂದೆ ಎಷ್ಟೇ ಪ್ರಯತ್ನಪಟ್ಟರೂ ಪ್ರೀತಿಸಿದವನು ಈಕೆಯ ಕೈಗೆ ಸಿಗುವುದಿಲ್ಲ.

ಇದೇನೂ ಚಿತ್ರದುದ್ದಕ್ಕೂ ಇರುವ ಪಾತ್ರವಲ್ಲ. ಹಾಗಿದ್ದರೂ ರಮ್ಯಾ ಬಾರ್ನಾ ಒಪ್ಪಿಕೊಂಡಿರುವುದೇಕೆ? ಇದು ಪಂಚರಂಗಿ, ಪರಮಾತ್ಮ, ಲೈಫು ಇಷ್ಟೇನೆ ಚಿತ್ರಗಳಂತೆ (ಈ ಚಿತ್ರಗಳಲ್ಲೂ ಚಿಕ್ಕ ಪಾತ್ರಗಳನ್ನೇ ರಮ್ಯಾ ಮಾಡಿದ್ದರು) ಅದೇ ಸಾಲಿನಲ್ಲಿ ಸಾಗುವ ಯಾತ್ರೆಯೇ? ಹೌದೆಂದೇ ಹೇಳಬೇಕು. ಹನಿ ಹನಿ, ನನ್ನೆದೆಯಾ ಹಾಡು, ಅನಾರ್ಕಲಿ, ಒಂದು ರೂಪಾಯಿಯಲ್ಲಿ ಎರಡು ಪ್ರೀತಿ ಮುಂತಾದ ಆಟಕ್ಕುಂಟು ಲೆಕ್ಕಕ್ಕಿಲ್ಲ ಚಿತ್ರಗಳಲ್ಲಿ ನಾಯಕಿಯಾಗುವ ಬಾರ್ನಾಗೆ ದೊಡ್ಡ ಬ್ಯಾನರುಗಳು ಕೊಡೋದು ಎರಡನೇ ನಾಯಕಿ ಅಥವಾ ತಂಗಿ ಪಾತ್ರಗಳನ್ನು!
PR

ಇನ್ನೊಬ್ಬ ಹುಡುಗಿ ಸ್ಫೂರ್ತಿಯದ್ದೂ ಇದೇ ಕಥೆ. ಆಕೆ ಇದುವರೆಗೂ ಪರಿಪೂರ್ಣ ನಾಯಕಿಯಾಗಿ ಯಾವ ಚಿತ್ರದಲ್ಲೂ ನಟಿಸಿಲ್ಲ. ಜಾಲಿಡೇಸ್, ಇದ್ರೆ ಗೋಪಿ ಬಿದ್ರೆ ಪಾಪಿ, ಬಾಡಿಗಾರ್ಡ್ ಚಿತ್ರಗಳಲ್ಲಿ ನಟಿಸಿದ ತಪ್ಪೋ ಏನೋ ಗೊತ್ತಿಲ್ಲ. ದೊಡ್ಡ ಅವಕಾಶಗಳೇ ಸಿಗುತ್ತಿಲ್ಲ. ಅದೇ ಸಾಲಿಗೆ ಸೇರುವ ಇನ್ನೊಂದು ಪಾತ್ರ ಈಗ ಸಿಕ್ಕಿರುವ 'ಬುಲ್ ಬುಲ್'. ಈ ಚಿತ್ರದಲ್ಲವರದ್ದು ದರ್ಶನ್ ತಂಗಿ ಪಾತ್ರ!

ಬಿಡಿ, 'ಬುಲ್ ಬುಲ್' ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಅಂಬರೀಷ್ ಮತ್ತು ದರ್ಶನ್ ತಂದೆ-ಮಗನಾಗಿ ನೈಸ್ ರೋಡ್‌ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗ ನಡೆಯುತ್ತಿರುವು ಚೇಸಿಂಗ್ ದೃಶ್ಯಗಳ ಚಿತ್ರೀಕರಣ, ಆಕ್ಷನ್ ದೃಶ್ಯಗಳು. ಹಾಗಾಗಿ ನಾಯಕಿಯರಿಗೆ ಸದ್ಯ ಕೆಲಸವಿಲ್ಲ.

ಉಳಿದಂತೆ ಚಿತ್ರದಲ್ಲಿ ಅಶೋಕ್, ಚಿತ್ರಾ ಶೆಣೈ, ಶರಣ್, ರಮೇಶ್ ಭಟ್, ಸಿಹಿಕಹಿ ಚಂದ್ರು, ಸಾಧು ಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದ ಜನಪ್ರಿಯರೇ ತುಂಬಿಕೊಂಡಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments