Webdunia - Bharat's app for daily news and videos

Install App

ಯೋಗಿಗೆ ಸಿಂಧು ಲೋಕನಾಥ್, ಪುನೀತ್‌ಗೆ ಯಾರು?

Webdunia
PR
ಸ್ಯಾಂಡಲ್‌ವುಡ್‌ನಲ್ಲಿ ಬಂಪರ್ ಲಾಟರಿ ಹೊಡೆಯುತ್ತಿರುವ ನಟಿಯರ ಸಾಲಿಗೆ ಸಿಂಧು ಲೋಕನಾಥ್ ಸೇರ್ಪಡೆಯಾಗಿದ್ದಾರೆ. 'ಲೈಫು ಇಷ್ಟೇನೆ'ವರೆಗೆ ತುಂಬಾ ಕಷ್ಟಪಟ್ಟಿದ್ದ ಹುಡುಗಿ 'ಡ್ರಾಮಾ' ಮುಗಿಸಿದ ಬೆನ್ನಿಗೆ 'ಯಾರೇ ಕೂಗಾಡಲಿ'ಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಹಾಗೆಂದು ಪುನೀತ್ ಜತೆ ರೊಮ್ಯಾನ್ಸ್ ಮಾಡುವ ಅವಕಾಶ ಸಿಂಧು ಲೋಕನಾಥ್ ಅವರದ್ದಲ್ಲ. 'ಯಾರೇ ಕೂಗಾಡಲಿ' ಚಿತ್ರದಲ್ಲವರು ಲೂಸ್ ಮಾದ ಯೋಗೇಶ್‌ಗೆ ನಾಯಕಿ. ಆದರೂ ದೊಡ್ಡ ಬ್ಯಾನರ್ ಚಿತ್ರವಾಗಿರುವುದರಿಂದ, ಇದು ಸಿಂಧು ಅದೃಷ್ಟವೆಂದೇ ಪರಿಗಣಿಸಲಾಗುತ್ತಿದೆ.

ತಮಿಳಿನ 'ಪೊರಾಲಿ' ರಿಮೇಕ್ 'ಯಾರೇ ಕೂಗಾಡಲಿ' ಕನ್ನಡ ಚಿತ್ರವನ್ನು ಮೂಲ ಚಿತ್ರದ ನಿರ್ದೇಶಕ ಸಮುತ್ತಿರಕನಿಯವರೇ ಕನ್ನಡದಲ್ಲೂ ನಿರ್ದೇಶಿಸುತ್ತಿದ್ದಾರೆ.

ಲೂಸ್ ಯೋಗಿಗೇನೋ ನಾಯಕಿ ಸಿಕ್ಕಿದ್ದಾಗಿದೆ, ಆದರೆ ಪುನೀತ್‌ಗೆ ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಸದ್ಯ ಆ ಪಟ್ಟಿಯಲ್ಲಿ ಸಮೀರಾ ರೆಡ್ಡಿ ಮುಂಚೂಣಿಯಲ್ಲಿದ್ದಾರೆ. ಆಕೆಯ ಜತೆ ಮಾತುಕತೆಗಳೂ ನಡೆದಿವೆ ಎಂದು ಹೇಳಲಾಗಿದೆ. ಆ ಜಾಗಕ್ಕೆ ಕೇಳಿ ಬರುತ್ತಿರುವ ಇನ್ನೊಂದು ಹೆಸರು ನಿತ್ಯಾ ಮೆನನ್.

ಖುಷಿಯಾದರು ಸಿಂಧು...
ಐಟಂ ಡ್ಯಾನ್ಸ್ ಮಾಡ್ತಿಯೇನಮ್ಮ ಎಂದು ಕೇಳಿದ ನಿರ್ಮಾಪಕ-ನಿರ್ದೇಶಕರಿಗೆ ಸೆಡ್ಡು ಹೊಡೆಯುತ್ತಿರುವ ಅಚ್ಚಗನ್ನಡದ ಹುಡುಗಿ ಸಿಂಧು ಲೋಕನಾಥ್, ಪುನೀತ್ ರಾಜ್‌ಕುಮಾರ್ ನಾಯಕನಾಗಿರುವ ಅದರಲ್ಲೂ ರಾಜ್ ಹೋಮ್ ಬ್ಯಾನರ್ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದ್ದಾರೆ.

ನಾನು ಮೂಲ ಚಿತ್ರ ಪೊರಾಲಿಯನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿದೆ. ಅಲ್ಲಿನ ಎರಡನೇ ನಾಯಕಿ ಪಾತ್ರಕ್ಕೆ ಈಗ ನಾನು ಆಯ್ಕೆಯಾಗಿದ್ದೇನೆ. ಆದರೆ ಮೂಲ ಚಿತ್ರಕ್ಕಿಂತ ಇಲ್ಲಿನ ಕಥೆಯಲ್ಲಿ ಸಾಕಷ್ಟು ಬದಲಾವಣೆಗಳಿರುತ್ತವೆ ಎಂದು ನನಗೆ ಹೇಳಿದ್ದಾರೆ. ಜುಲೈ ಆರರಿಂದಲೇ ನಾನು ಚಿತ್ರೀಕರಣಕ್ಕೆ ಹೋಗಬೇಕಿತ್ತು. ಪುನೀತ್ ವಿದೇಶ ಪ್ರವಾಸಕ್ಕೆ ಹೋಗಲಿರುವುದರಿಂದ, ಚಿತ್ರೀಕರಣ ಮುಂದಕ್ಕೆ ಹೋಗಿದೆ ಎಂದು ಸಿಂಧು ಪ್ರತಿಕ್ರಿಯಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments