Select Your Language

Notifications

webdunia
webdunia
webdunia
webdunia

ಡಿಕೆಶಿ ಚಿತ್ರಕ್ಕೆ ರಮ್ಯಾ ನಾಯಕಿ, ಕೋಡಿ ನಿರ್ದೇಶಕ?

ಡಿಕೆಶಿ ಚಿತ್ರಕ್ಕೆ ರಮ್ಯಾ ನಾಯಕಿ, ಕೋಡಿ ನಿರ್ದೇಶಕ?
SUJENDRA
ಲಕ್ಕಿ ಸ್ಟಾರ್ ರಮ್ಯಾ ನಾಯಕಿಯಾಗಿರುವ ಚಿತ್ರವೊಂದನ್ನು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಿರ್ಮಿಸಲಿದ್ದಾರೆ ಎಂಬ ಸುದ್ದಿ ತಿಂಗಳ ಹಿಂದೆ ರಮ್ಯಾ ಬಾಯಿಯಿಂದಲೇ ಬಂದಿತ್ತು. ಲೇಟೆಸ್ಟ್ ಮಾಹಿತಿಗಳ ಪ್ರಕಾರ, ಆ ಚಿತ್ರವನ್ನು 'ಅರುಂಧತಿ' ಖ್ಯಾತಿಯ ಕೋಡಿ ರಾಮಕೃಷ್ಣ ನಿರ್ದೇಶಿಸಲಿದ್ದಾರೆ. ಅದೂ ಕನ್ನಡದಲ್ಲಿ!

ಹೌದು, ತೆಲುಗಿನಲ್ಲಿ ದೇವಿ, ಅಮ್ಮೋರು, ಅರುಂಧತಿ ಮುಂತಾದ ದೈವೀ-ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಜನಪ್ರಿಯರಾಗಿರುವ ಹಿರಿಯ ನಿರ್ದೇಶಕ ಕೋಡಿ ರಾಮಕೃಷ್ಣ ಕನ್ನಡಕ್ಕೆ ಬರುತ್ತಿರುವುದು ಖಚಿತ. ಅವರಿಗೆ ಗಾಳ ಹಾಕಿರುವುದು ಡಿಕೆಶಿ. ಚಿತ್ರಕ್ಕೆ ನಾನೇ ನಾಯಕಿ ಅಂತ ಸ್ವತಃ ರಮ್ಯಾರೇ ಹೇಳಿಕೊಂಡಿದ್ದಾರೆ.

ಮೂಲಗಳ ಪ್ರಕಾರ, ಈ ಚಿತ್ರ ಮಹಿಳಾ ಪ್ರಧಾನವಾಗಿರಲಿದೆ. ಗುಳಿಕೆನ್ನೆ ಹುಡುಗ ದಿಗಂತ್ ಇಲ್ಲಿ ರಮ್ಯಾಗೆ ನಾಯಕ. ಆದರೆ ಮಾತುಕತೆ ಇನ್ನೂ ನಡೆಯುತ್ತಿದೆ. ಯಾವುದೂ ಅಂತಿಮವಾಗಿಲ್ಲ. ಎಲ್ಲವೂ ಸರಿಯಾದರೆ, ಟಿ.ಎನ್. ಸೀತಾರಾಮ್ 'ಮೀರಾ ಮಾಧವ ರಾಘವ' ಜೋಡಿ ಇನ್ನೊಮ್ಮೆ ತೆರೆಯಲ್ಲಿ ಮೂಡಿ ಬರಲಿದೆ.

ರಮ್ಯಾಗೆ ದ್ವಾರಕೀಶ್ ಗಾಳ?
ಇನ್ನು ಕೆಲವು ಮೂಲಗಳ ಪ್ರಕಾರ, ಕೋಡಿ ರಾಮಕೃಷ್ಣ ಚಿತ್ರವನ್ನು ನಿರ್ಮಿಸುತ್ತಿರುವುದು ಡಿಕೆಶಿ ಅಲ್ಲ, ಬದಲಿಗೆ ಕುಳ್ಳ ದ್ವಾರಕೀಶ್. ಆಪ್ತಮಿತ್ರ, ವಿಷ್ಣುವರ್ಧನ ಹಿಟ್ ಖುಷಿಯಲ್ಲಿ ತೇಲಾಡುತ್ತಿರುವ ದ್ವಾರಕೀಶ್ ಪುತ್ರ ಯೋಗಿ ಮಹಿಳಾ ಪ್ರಧಾನವಾಗಿರುವ ಕಥೆಯೊಂದಕ್ಕಾಗಿ ರಮ್ಯಾರನ್ನು ಸಂಪರ್ಕಿಸಿದ್ದಾರೆ. ಕೋಡಿ ರಾಮಕೃಷ್ಣ ನಿರ್ದೇಶಿಸುತ್ತಿರುವ ಚಿತ್ರ ಇದೇ ಎಂದು ಹೇಳಲಾಗುತ್ತಿದೆ.

ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವುದಾದರೆ ಸಂಭಾವನೆ ಕುರಿತು ಹೆಚ್ಚು ಚಿಂತಿಸುವುದಿಲ್ಲ ಎಂದು ಈ ಹಿಂದೆಯೇ ಹೇಳಿದಂತೆ, ಇಲ್ಲಿ ದ್ವಾರಕೀಶ್ ಚಿತ್ರದಲ್ಲಿ ರಮ್ಯಾ ಕಡಿಮೆ ಸಂಭಾವನೆ ಪಡೆಯಲಿದ್ದಾರೆ. ಈ ಸಂಬಂಧ ಚೌಕಾಶಿಗಳು ಇನ್ನೂ ನಡೆಯುತ್ತಿವೆ. ಯಾವುದೂ ಅಂತಿಮಗೊಂಡಿಲ್ಲ. ಎಲ್ಲವೂ ಪಕ್ಕಾ ಆದ ನಂತರ ಸ್ವತಃ ರಮ್ಯಾ ಅವರೇ ಮಾಹಿತಿಗಳನ್ನು ಬಹಿರಂಗಪಡಿಸುತ್ತಾರಂತೆ!

Share this Story:

Follow Webdunia kannada