Webdunia - Bharat's app for daily news and videos

Install App

ಛೇ.. ಐಂದ್ರಿತಾ ಸಿನಿಮಾದಲ್ಲಿ ಬಿಕಿನಿ ಹಾಕಲ್ವಂತೆ!

Webdunia
SUJENDRA


ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕ್ಯಾಲೆಂಡರಿನಲ್ಲಿ ಹಾಲುಗೆನ್ನೆಯ ಹುಡುಗಿ ಐಂದ್ರಿತಾ ರೇ ಬಿಕಿನಿ ಹಾಕಿದ್ದನ್ನು ನೋಡಿ ಜೊಲ್ಲು ಸುರಿಸಿದ ಪಡ್ಡೆಗಳಿಗೆ ದೊಡ್ಡ ನಿರಾಸೆಯ ಸುದ್ದಿಯಿದು. ಆಕೆ ಸಿನಿಮಾದಲ್ಲಿ ಬಿಕಿನಿ ಹಾಕಲ್ವಂತೆ, ಅಂತಹ ಹುಡುಗಿ ತಾನಲ್ಲ ಅಂತಾನೂ ಐಂದ್ರಿತಾ ಹೇಳಿಕೊಂಡಿದ್ದಾರೆ!

ಅಲ್ಲಲ್ಲಿ ತುಂಡು ಬಟ್ಟೆಗಳನ್ನು ಅಂಟಿಸಿದ್ದಾರೋ ಎಂಬಂತೆ ಐಂದ್ರಿತಾ ಸಿಸಿಎಲ್ ಕ್ಯಾಲೆಂಡರಿನಲ್ಲಿ ಮಾದಕವಾಗಿ ಪೋಸ್ ನೀಡಿದ್ದರು. ಇದರಿಂದ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಮುಂದೆ ಸಿನಿಮಾಗಳಲ್ಲೂ ಇಂತಹುದೇ ಜಬರ್ದಸ್ತ್ ದೃಶ್ಯಗಳನ್ನು ನೋಡಬಹುದು ಅನ್ನೋ ಆಸೆ ಅವರಲ್ಲಿ ಕೆದರಿತ್ತು.

ಆದರೆ ಅವೆಲ್ಲದಕ್ಕೂ ಐಂದ್ರಿತಾ ತಣ್ಣೀರೆರಚಿದ್ದಾರೆ. ಕ್ಯಾಲೆಂಡರಿಗೆ ಹಾಗೆ ಪೋಸು ಕೊಟ್ಟ ಮಾತ್ರಕ್ಕೆ ಸಿನಿಮಾಗಳಿಗೂ ಬಿಕಿನಿ ಹಾಕುತ್ತೇನೆ ಎಂದು ಅರ್ಥವಲ್ಲ ಎಂದಿದ್ದಾರೆ.

PR


ಏನಿದಕ್ಕೆ ಕಾರಣ? ಅಲ್ಲಿ ಹಾಗಿದ್ದ ಮೇಲೆ ಇಲ್ಲಿ ಯಾಕೆ ಹಾಗೆ ಇರೋದಕ್ಕೆ ಆಗೋದಿಲ್ಲ? ಈ ಪ್ರಶ್ನೆಗಳಿಗೆ ಐಂದ್ರಿತಾ ವಿಚಿತ್ರ ವಾದ ಮಂಡಿಸ್ತಾರೆ. ಆಕೆ ಫೋಟೋ ಶೂಟ್‌ಗಾಗಿ ಬಿಕಿನಿ ಹಾಕಿ ನಿಂತುಕೊಂಡದ್ದು ಒಂದು ಸುಂದರ ಆಹ್ಲಾದಕರ ವಾತಾವಾರಣದಲ್ಲಂತೆ. ಹಾಗಾಗಿ ಅಲ್ಲಿ ಕೆಟ್ಟದ್ದನ್ನು ಹುಡುಕಬೇಡಿ. ಇದೇ ರೀತಿ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುವುದು ಸಾಧ್ಯವಿಲ್ಲ..!

ಅಬ್ಬಬ್ಬಾ... ಅದೇನು ವಾದ ಮಾಡ್ತಾರಲ್ಲ ನಮ್ಮ ಐಂದ್ರಿತಾ ರೇ..?! ಇನ್ನೂ ಇದೆ ನೋಡಿ. ರಾಗಿಣಿ ಸೇರಿದಂತೆ ಕನ್ನಡ ಕೆಲವು ನಟಿಯರು ಬಿಕಿನಿ ಟೀಕೆ ಮಾಡಿರುವುದಕ್ಕೆ ಏನಂದಿದ್ದಾರೆ ಗೊತ್ತಾ? ಇದು ಪ್ರಚಾರಕ್ಕಾಗಿ ಅನುಸರಿಸುವ ಸಿಲ್ಲಿ ಮಾರ್ಗವಂತೆ. ದೇಶದಲ್ಲಿ, ರಾಜ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿರುವಾಗ ಈ ಬಿಕಿನಿ ಸಂಗತಿ ಯಾಕೆ? ನಮ್ಮ ಸುತ್ತ ಮುತ್ತ ಸಾಕಷ್ಟು ಬಡತನವಿದೆ. ಹಾಗಾಗಿ ಬಿಕಿನಿಯಂತಹ ಕ್ಷುಲ್ಲಕ ವಿಚಾರದ ಬಗ್ಗೆ ಚರ್ಚಿಸಿ ಏನಿದೆ ಉಪಯೋಗ?

ಬಡತನ ಮತ್ತು ಬಿಕಿನಿಯನ್ನು ಐಂದ್ರಿತಾ ಜತೆಯಾಗಿಸಿದ್ದು ಹೀಗೆ..!

ವೆಬ್ದುನಿಯಾವನ್ನು ಓದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments