Select Your Language

Notifications

webdunia
webdunia
webdunia
webdunia

ಪುನೀತ್ ಬಾಡಿ, ಕಿಸ್ಸು, ಫೈಟ್ ಫೋಟೋ ನೋಡಿದ್ರಾ?

ಪುನೀತ್ ಬಾಡಿ, ಕಿಸ್ಸು, ಫೈಟ್ ಫೋಟೋ ನೋಡಿದ್ರಾ?
SUJENDRA
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ದುನಿಯಾ ಸೂರಿ ಸೇರಿದ್ರೆ ಏನಾಗುತ್ತೆ ಅಂತ 'ಜಾಕಿ'ಯಲ್ಲಿ ನೋಡಿದ್ದಾಗಿದೆ. ಈಗ ಅದನ್ನೂ ಮೀರಿಸುವ ನಿರೀಕ್ಷೆ 'ಅಣ್ಣಾ ಬಾಂಡ್' ಹುಟ್ಟಿಸಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಫೋಟೋಗಳಂತೂ, ಚಿತ್ರದ ಆಕ್ಷನ್‌ಗಳ ಬಗ್ಗೆ ಕುತೂಹಲ ಗರಿಗೆದರಿಸಿವೆ.

'ಅಣ್ಣಾ ಬಾಂಡ್' ಆಕ್ಷನ್ ಚಿತ್ರ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಈ ಪರಿಯ ಜಬರ್ದಸ್ತ್ ಆಕ್ಷನ್ ಯಾರೊಬ್ಬರೂ ನಿರೀಕ್ಷೆ ಮಾಡೋದೇ ಅಸಾಧ್ಯ ಅನ್ನುತ್ತಿದೆ ಚಿತ್ರತಂಡ. ಹೆಸರಿಗೆ ತಕ್ಕಂತೆ ಸೂಪರ್ ಫೈಟ್‌ಗಳಿವೆ. ಕ್ಲೈಮ್ಯಾಕ್ಸ್ ಫೈಟ್ ಇತ್ತೀಚೆಗಷ್ಟೇ ಮುಗಿದಿದೆ.

webdunia
SUJENDRA


ಈ ಸನ್ನಿವೇಶದಲ್ಲಿ ಭಾಗಿಯಾಗಿದ್ದ ಎಲ್ಲಾ ಫೈಟರುಗಳು ವಿದೇಶೀಯರಂತೆ. ಅವರನ್ನು ಪುನೀತ್ ಚಚ್ಚುವ ದೃಶ್ಯ ನಿಜವೇನೋ ಅನ್ನುವಂತೆ ಮೂಡಿ ಬಂದಿದೆಯಂತೆ. ಯಾವುದೇ ಹಾಲಿವುಡ್ ಚಿತ್ರಕ್ಕೆ ಕಡಿಮೆಯಿಲ್ಲದಂತೆ ಚಿತ್ರದ ಪೈಟ್‌ಗಳನ್ನು ಮಾಡಲಾಗಿದೆಯಂತೆ.

ಚಿತ್ರದಲ್ಲಿ ಅಸ್ಥಿಪಂಜರದ ಡಿಸೈನ್ ಉಳ್ಳ ಬೈಕ್ ಗಮನ ಸೆಳೆಯುತ್ತಿದೆ. ನಾಯಕಿಯರಾದ ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯ ಅವರಂತೂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಪುನೀತ್ ನಿಧಿಗೆ ಮುತ್ತು ಕೊಡುವ ದೃಶ್ಯದ ಸ್ಟಿಲ್ ಕೂಡ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಪುನೀತ್ ಬಾಡಿ ಮೂಡಿ ಬಂದಿರುವ ಪರಿ ಕೂಡ ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.
webdunia
SUJENDRA

ಪುನೀತ್ ಅಭಿಮಾನಿಗಳು ಕುರ್ಚಿಯ ತುದಿಯಲ್ಲಿ ರೋಮಾಂಚನಗೊಂಡು ನೋಡುವಂತಹ ರೋಚಕ ಫೈಟುಗಳು ಇಲ್ಲಿವೆ. ಕಥೆಗಿಂತ ಆಕ್ಷನ್ನೇ ಇಲ್ಲಿ ಪ್ರಮುಖ. ಸೂರಿಯ ಹಿಂದಿನ ಚಿತ್ರಗಳಂತೆ ಇದೂ ದೊಡ್ಡ ದಾಖಲೆಯನ್ನೇ ಮಾಡಲಿದೆ ಎನ್ನುತ್ತಿವೆ ಮೂಲಗಳು.

ಆದರೆ ಇತ್ತೀಚೆಗಷ್ಟೇ ಸುದ್ದಿಯಾದಂತೆ ಚಿತ್ರ 16 ಕೋಟಿ ರೂಪಾಯಿಗಳಿಗೆ ಬಿಕರಿಯಾಗಿಲ್ಲವಂತೆ. ಅದು ಸುಳ್ಳು ಅಂತ ಸ್ವತಃ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. ಮಾತುಕತೆ ನಡೆಯುತ್ತಿರುವುದು ಹೌದು. ರಿಲಯೆನ್ಸ್ ಸೇರಿದಂತೆ ಹಲವು ಕಂಪನಿಗಳು ದೊಡ್ಡ ಮೊತ್ತವನ್ನೇ ಮುಂದಿಡುತ್ತಿವೆ. ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದಿದ್ದಾರೆ.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada